ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗ್ಲೇಬೇಕು, ಕರಸೇವೆಗೆ ಸಿದ್ಧ: ಸಿಎಂ ಇಬ್ರಾಹಿಂ

ವಿಜಯಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು. ಅದರ ನಿರ್ಮಾಣಕ್ಕೆ ನಾವು ಇಟ್ಟಿಗೆ, ಕರ ಸೇವೆ ಮಾಡಲು ಸಿದ್ಧ ಅಂತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಖಾಂತರ ಎಲ್ಲಾ ಸಮಾಜದವರು ಸೇರಿ ಬಗೆಹರಿಸಲಿ. ಇಲ್ಲವಾದಲ್ಲಿ ಸುಪ್ರೀಂಕೊರ್ಟ್ ತೀರ್ಪಿನಂತೆ ನಡೆದುಕೊಳ್ಳಲು ನಾವು ಸಿದ್ಧ ಅಂತ ಹೇಳಿದ್ದಾರೆ.

ಈ ಬಾರಿ ಟಿಪ್ಪು ಜಯಂತಿ ಆಚರಣೆ ನಿರಾಸೆ ತಂದಿದೆ. ಫೋಟೋ ಇಡುವುದು, ಮೆರವಣಿಗೆ ಮಾಡೋದು ನಮ್ಮ ಸಂಪ್ರದಾಯವಲ್ಲ. ಮುಂದಿನ ಬಾರಿ ಬೇರೆ ರೀತಿ ಆಚರಣೆ ಮಾಡಲು ಯೋಚಿಸಿದ್ದೇವೆ. ಇದರ ಬಗ್ಗೆ ಡಿಸೆಂಬರ್ ನಲ್ಲಿ ಎಲ್ಲ ಸಾಧು, ಸಂತರು ಪ್ರಮುಖವಾಗಿ ಶೃಂಗೇರಿ ಶ್ರೀಗಳು, ಸುತ್ತೂರು ಶ್ರೀಗಳು ಸೇರಿದಂತೆ ಪಕ್ಷಾತೀತವಾಗಿ ಸಭೆ ನಡೆಸುತ್ತೇವೆ. ಅಲ್ಲಿ ಯಾವ ರೀತಿ, ಯಾರ ನೇತೃತ್ವದಲ್ಲಿ ಟಿಪ್ಪು ಜಯಂತಿ ಮಾಡಬೇಕೆಂದು ತಿರ್ಮಾನ ಮಾಡುತ್ತೇವೆ ಅಂತ ಅವರು ತಿಳಿಸಿದ್ರು.

ಈ ಬಾರಿ ಶಿವಾಜಿ ಜಯಂತಿಯನ್ನ ಸಾಬರೆಲ್ಲ ಸೇರಿ ಆಚರಿಸುತ್ತೇವೆ. ಶಿವಾಜಿ ಒಬ್ಬ ಭಾರತದ ಅಪ್ರತಿಮ ರಾಜರಾಗಿದ್ದಾರೆ. ಅದೇ ರೀತಿ ಮರಾಠರು ಟಿಪ್ಪು ಜಯಂತಿ ಆಚರಿಸಬೇಕು. ಶಿವಾಜಿ ಜಯಂತಿ ಆಚರಣೆ ಬಗ್ಗೆ ರಾಜ್ಯದ ಎಲ್ಲ ಅಂಜುಮನ್ ಕಮೀಟಿಗಳಿಗೆ ಪತ್ರ ಬರೆಯುತ್ತೇವೆ. ಯಾವ ರೀತಿ ಆಚರಣೆ ಮಾಡಬೇಕು ಅನ್ನೋದು ಸಭೆಯಲ್ಲಿ ತೀರ್ಮಾನಿಸುತ್ತೇವೆ ಅಂತ ಭರವಸೆ ನೀಡಿದ್ರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ