ಅಸಾಧಾರಣ ಪ್ರತಿಭೆಗಳ ಸಂಗಮವಾದ ಅವಳಿ ಬಾಲಮುನಿಗಳ ಸಾಧನೆ ಅನಾವರಣಕ್ಕೆ ಸಾಕ್ಷಿಯಾಗಲಿರುವ ಬೆಂಗಳೂರು ಅರಮನೆ ಮೈದಾನ

ಬೆಂಗಳೂರು, ನ.14- ಅಸಾಧಾರಣ ಪ್ರತಿಭೆಗಳ ಸಂಗಮವಾದ ಅವಳಿ ಬಾಲಮುನಿಗಳ ಸಾಧನೆ ಅನಾವರಣಕ್ಕೆ ಬೆಂಗಳೂರಿನ ಅರಮನೆ ಮೈದಾನ ಡಿಸೆಂಬರ್ 2ರಂದು ಸಾಕ್ಷಿಯಾಗಲಿದೆ.

ರಾಜಾಜಿನಗರದ ಶ್ರೀನಾಕೋಡಾ ಪಾಶ್ರ್ವನಾಥ ಜೈನ್ ಶ್ವೇತಂಬರ್ ಮಂದಿರ ಟ್ರಸ್ಟ್ ಹಾಗೂ ಮೆಡಿಟೇಷನ್ ರಿಸರ್ಚ್ ಫೌಂಡೇಷನ್ ವತಿಯಿಂದ ಬೃಹತ್ ಬಾಲಶತಾವಧಾನ ಕಾರ್ಯಕ್ರಮದಲ್ಲಿ ಈ ಅವಳಿ ಪ್ರತಿಭೆಗಳಾದ ಬಾಲಮುನಿಗಳಾದ ನಮಿಚಂದ್ರಸಾಗರ್ ಮತ್ತು ನೆಮಿಚಂದ್ರಸಾಗರ್ ತಮ್ಮ ಜ್ಞಾಪನಾಶಕ್ತಿಯನ್ನು ಜನರೆದುರು ಪ್ರಸ್ತುತಪಡಿಸಲಿದ್ದಾರೆ.

ಆಟ-ಪಾಠಗಳಲ್ಲಿ ತೊಡಗಿಸಿಕೊಂಡು ಕಾಲ ಕಳೆಯುವ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದಿರುವುದೇ ಒಂದು ಸೋಜಿಗದ ವಿಷಯವಾಗಿದೆ. ಹಲವಾರು ವರ್ಷಗಳ ಕಾಲ ಕಾಡು ಮೇಡು ಅಲೆದು ಜಪ ತಪಗಳಲ್ಲಿ ತೊಡಗಿಸಿಕೊಂಡು ದೇವರ ಅನುಗ್ರಹ ಪಡೆಯುವುದರ ಮೂಲಕ ಅಗಾಧವಾದ ಶಕ್ತಿ ಪಡೆದುಕೊಂಡು ಇತಿಹಾಸದ ಪುಟಗಳಲ್ಲಿ ಸೇರಿರುವ ಋಷಿಮುನಿಗಳ ಸಾಧನೆ ಒಂದಾದರೆ ಇವರೆಲ್ಲರಿಗಿಂತ ವ್ಯತಿರಿಕ್ತವಾಗಿ ಕೇವಲ 10 ವರ್ಷದ ಅವಳಿ ಬಾಲಕರು 10 ಭಾಷೆಗಳಲ್ಲಿ ಮಾತನಾಡುವ ಪ್ರವೀಣತೆಯನ್ನೂ ಸಹ ಹೊಂದಿದ್ದಾರೆ.

ಇಷ್ಟೂ ಸಾಲದೆಂಬಂತೆ ಇವರ ಅಮೋಘವಾದ ನೆನಪಿನ ಶಕ್ತಿ ಬಗ್ಗೆ ಕೇಳಿದರೆ ಬಾಯಿಯ ಮೇಲೆ ಕೈಯಿಟ್ಟು ಕೂರಬೇಕಾಗುತ್ತದೆ.10 ಭಾಷೆಗಳಲ್ಲಿ ಸಾವಿರಾರು ಸಭಿಕರ ನಡುವೆ ಏಕಕಾಲದಲ್ಲಿ 100 ಪ್ರಶ್ನೆಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸುವಂತಹ ಚಾಣಾಕ್ಯರಿವರು.

ಭಗವದ್ಗೀತೆಯಲ್ಲಿ ಎಷ್ಟು ಪಾಠಗಳಿವೆ ಎಂಬುದಕ್ಕೆ ಉತ್ತರಿಸಲು ತತ್ತರಿಸುವ ಎಷ್ಟೋ ಮಂದಿಗಳ ನಡುವೆ ಜೈನ ಧರ್ಮದ 5000 ಶ್ಲೋಕಗಳಲ್ಲದೆ ಭಗವದ್ಗೀತೆ, ಖುರಾನ್, ಬೈಬಲ್, ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳ ಕುರಿತು ಯಾವುದೇ ಭಾಗದ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ಅದಕ್ಕೆ ಕೇಳಿದಂತಹ ಭಾಷೆಯಲ್ಲೇ ಉತ್ತರಿಸುವಷ್ಟು ಪ್ರತಿಭಾನ್ವಿತರು ಅವರ ನೆನಪಿನ ಶಕ್ತಿಯನ್ನು ನಿಜವಾಗಿಯೂ ಮೆಚ್ಚಲೇಬೇಕಾಗಿದೆ.

ಕೇವಲ 1ನೇ ತರಗತಿಯವರೆಗೆ ವ್ಯಾಸಂಗ ಮಾಡಿ ನಂತರ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಜೈನ ಧರ್ಮದ ಬಾಲಮುನಿಗಳಾಗಿರುವ ಈ ಅವಳಿ ಗುರುಗಳು ಸಂಸ್ಕøತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲೀಷ್, ಪಂಜಾಬಿ, ಕನ್ನಡ, ಉರ್ದು ಭಾಷೆಗಳಲ್ಲಿ ಮಾತನಾಡುವ, ಅರ್ಥಮಾಡಿಕೊಳ್ಳುವಂತಹ ಮಹಾನ್ ಜ್ಞಾನವನ್ನು ಗಳಿಸಿದ್ದಾರೆ.

ಗುಜರಾತಿನ ಸೂರತ್ ನಗರದ ತಂದೆ ಪಿಯóೂಷ್‍ಭಾಯ್ ಮತ್ತು ತಾಯಿ ಸೋನಲ್‍ಬೆನ್ ರವರ ಅವಳಿ ಮಕ್ಕಳಾಗಿರುವ ಇವರು, 2 ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನದ ತರಬೇತಿ ಪಡೆದು 9ನೇ ವಯಸ್ಸಿನಲ್ಲಿ ಸೂರತ್ ನಗರದಲ್ಲಿ ಸನ್ಯಾಸ ಸ್ವೀಕರಿಸಿದರು.ತದನಂತರ ತಪ, ತ್ಯಾಗ, ಪರಮಾರ್ಥ ಹಾಗೂ ಧ್ಯಾನ ಸಾಧನೆಯ ಮೂಲಕ ಆಧ್ಯಾತ್ಮಿಕ ದಿಕ್ಕಿನಲ್ಲಿ ಉನ್ನತಿ ಸಾಧಿಸುತ್ತಿದ್ದಾರೆ.

ಈಗಾಗಲೇ ಇವರು ಬಹುತೇಕ 5,000 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದಾರೆ. ಸನ್ಯಾಸ ಸ್ವೀಕರಿಸಿದ ನಂತರ ಅವಳಿ ಬಾಲಮುನಿಗಳು ಕೇವಲ 2:30 ಗಂಟೆಗಳ ಕಾಲ 350 ಪದ್ಯಗಳು ಕಂಠಪಾಠ ಮಾಡಿ ಒಂದು ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ಅವಳಿ ಬಾಲಮುನಿಗಳಿಗೆ ಜೈನ ಧರ್ಮದ 5 ಆಗಮ ಗ್ರಂಥಗಳ 5,000 ಶ್ಲೋಕಗಳ ಜೊತೆ ಭಗವದ್ಗೀತೆಯ ಅಧ್ಯಾಯಗಳು, ಗುರುಗ್ರಂಥ ಸಾಹಿಬ್‍ರ ಪೌರಿಸ್(ಪಾವಡಿಯಾ), ಬೈಬಲಿನ ಅಧ್ಯಾಯಗಳು ಹಾಗೂ ಖುರಾನ್ ಆಯಾತ್ ಭಾಗಶಃ ಕಂಠಪಾಠವಾಗಿದೆ. ಎಲ್ಲಾ ಮುಖ್ಯ ಧರ್ಮದ ಮುಖ್ಯಧರ್ಮಗ್ರಂಥವನ್ನು ಭಾಗಶಃ ಕಂಠಪಾಠ ಮಾಡಿದ್ದಾರೆ.

ವಿಶ್ವದ ಯಾವುದೇ ದೇಶದ ಹೆಸರನ್ನು ಕೇಳಿ, ದೇಶದ ಹೆಸರಿನೊಂದಿಗೆ ಅದರ ರಾಜಧಾನಿ ಮತ್ತು ಮಾತೃಭಾಷೆಯನ್ನು ಹೇಳಬಲ್ಲವರಾಗಿದ್ದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪಿರಾಮಿಡ್ ಕ್ಯೂಬನ್ನು ಸರಿಪಡಿಸ ಬಲ್ಲವರಾಗಿದ್ದಾರೆ.ಭಾರತದ ರಾಷ್ಟ್ರಪತಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರಿಯ ಸಚಿವರಿಂದ ಪ್ರಶಂಸೆ ಪಡೆದಿರುವ ಇವರನ್ನು ಗುಜರಾತ್ ಕ್ಯಾಬಿನೆಟ್‍ನ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚುಡಾಸಮಾ ರವರು ಸುವರ್ಣಶಾಯಿಯಲ್ಲಿ ಬರೆದ ಗೌರವಾನ್ವಿತ ಪತ್ರದಿಂದ ಅವರನ್ನು ಗೌರವಿಸಿದ್ದಾರೆ.

ಸಂಘಟನಾ ಚತುರ ಅನಂತ್ ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ನಾಯಕತ್ವ ಯಾಗ ಹೆಗಲಿಗೆ ಎಂಬ ಎದುರಾದ ಯಕ್ಷ ಪ್ರಶ್ನೆ:
ಬೆಂಗಳೂರು, ನ.14-ಬಿಜೆಪಿಯ ಟ್ರಬಲ್ ಶೂಟರ್, ಸಂಘಟನಾ ಚತುರ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ಅವರ ಹಠಾತ್ ನಿಧನದಿಂದ ತೆರವಾಗಿರುವ ಅವರ ನಾಯಕತ್ವ ಯಾರ ಹೆಗಲಿಗೆ ಸಿಗಲಿದೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಬಿಜೆಪಿ ಮತ್ತು ಆರ್‍ಎಸ್‍ಎಸ್ ನಡುವೆ ಉತ್ತಮ ಬಾಂಧವ್ಯ ಹೊಂದಿರುವ ಸಂಘಪರಿವಾರದ ಮತ್ತೋರ್ವ ನೀಲಿ ಕಂಗಳ ಹುಡುಗ ಬಿ.ಎಲ್. ಸಂತೋಷ್ ಈ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
ಅನಂತಕುಮಾರ್ ಸಂಸದರಾದರೂ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತ ಹಾಗೂ ಕೆಲವು ಎರಡನೇ ಹಂತದ ನಾಯಕರನ್ನು ಬೆಳೆಸುವುದರಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇದೀಗ ಕ್ಯಾನ್ಸರ್ ರೋಗದಿಂದ ನಿಧನರಾಗಿರುವ ಅನಂತಕುಮಾರ್ ಅವರ ಸ್ಥಾನವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.ಸದ್ಯಕ್ಕೆ ಬಿಜೆಪಿ ಹೊಣೆಗಾರಿಕೆಯನ್ನು ಯಡಿಯೂರಪ್ಪ ನೋಡಿಕೊಳ್ಳುತ್ತಿದ್ದರಾದರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ.

ಈಗಾಗಲೇ ಅವರಿಗೆ 75 ವರ್ಷ ಮೀರಿರುವುದರಿಂದ ಮೊದಲಿನಂತೆ ಉತ್ಸಾಹದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹೋರಾಟ ನಡೆಸುವುದು ಸುಲಭದ ಕೆಲಸವಲ್ಲ ಎಂಬುದು ಕೇಂದ್ರದ ವರಿಷ್ಠರಿಗೆ ಮನವರಿಕೆಯಾಗಿದೆ.

ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಬೆಂಗಳೂರು ಮತ್ತಿತರ ಕಡೆ ತಮ್ಮ ಹಿಂಬಾಲಕರ ಮೂಲಕ ಪಕ್ಷ ಸಂಘಟಿಸುವ ಹೊಣೆಗಾರಿಕೆಯನ್ನು ಅನಂತಕುಮಾರ್ ನೋಡಿಕೊಳ್ಳುತ್ತಿದ್ದರು.ಇದರ ಪರಿಣಾಮವೇ ಬೆಂಗಳೂರಿನ ಮೂರು ಲೋಕಸಭೆ, ವಿಧಾನಸಭೆ ಹಾಗೂ ಮಹಾನಗರ ಪಾಲಿಕೆಯಲ್ಲೂ ಕೇಸರಿಬಾವುಟ ಹಾರಲು ಕಾರಣವಾಗಿತ್ತು.

ಯಡಿಯೂರಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಮುನ್ನಡೆಸುವ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕರೊಬ್ಬರ ಶೋಧ ಕಾರ್ಯಕ್ಕೆ ಸಂಘಪರಿವಾರ ಆಗಲೇ ಚಾಲನೆ ಕೊಟ್ಟಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ