ಅನಂತ್‍ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಬಿಜೆಪಿ ಕಚೇರಿಯಲ್ಲಿ ಭಾವ ಪೂರ್ಣ ಶ್ರದ್ದಾಂಜಲಿ

ಬೆಂಗಳೂರು,ನ.13- ನಿನ್ನೆ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಮಲ್ಲೇಶ್ವಂರನಲ್ಲಿರುವ ಬಿಜೆಪಿ ಕಚೇರಿಗೆ ತಂದು ಆಗಲಿದ ನೆಚ್ಚಿನ ನಾಯಕನಿಗೆ ಭಾವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್‍ಕುಮಾರ್ ಹೆಗ್ಡೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಮುಖಂಡರಾದ ಕೆ.ಎಸ್. ಈಶ್ವರಪ್ಪ, ಆರ್, ಅಶೋಕ್ ಸೇರಿದಂತೆ ಅನೇಕರು ಮೆಚ್ಚಿನ ನಾಯಕನಿಗೆ ಭಾರವಾದ ಹೃದಯದಿಂದಲೇ ಅಂತಿಮ ನಮನ ಸಲ್ಲಿಸಿದರು. ಪಕ್ಷದ ನೆಲಮಹಡಿಯಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿನ ದರ್ಶನಕ್ಕೆ ಇಡಲಾಗಿತ್ತು.
ಬಿಜೆಪಿ 104 ಶಾಸಕರು , ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಿಗಳು, ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಮೊದಲು ಯಡಿಯೂರಪ್ಪ ದರ್ಶನ ಪಡೆದರೆ, ನಂತರ ಅನಂತ್‍ಕುಮಾರ್ ಪತ್ನಿ, ತೇಜಸ್ವಿನಿ ಅನಂತ್‍ಕುಮಾರ್, ಪುತ್ರಿಯರು, ಕೇಂದ್ರ ಸಚಿವರು, ಶಾಸಕರು,ಸಂಘ ಪರಿವಾರದ ಹಿರಿಯ ನಾಯಕರಾದ ಬಿ.ಎಲ್. ಸಂತೋಷ್, ಅರುಣ್‍ಕುಮಾರ್, ಸರತಿಯಲ್ಲಿ ನಿಂತು ಗೌರವ ಸಲ್ಲಿಸಿದರು.
ಸುಮಾರು ಒಂದೂವರೆ ಗಂಟೆಕಾಲ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.ಪ್ರತಿಯೊಬ್ಬರ ಬಾಯಿಯಲ್ಲೂ ಅವರ ನಾಯಕತ್ವದ ಬಗ್ಗೆ ಗುಣಗಾನ ಕೇಳಿಬರುತ್ತಿತ್ತು.

ಇದಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಬಸವನಗುಡಿಯಲ್ಲಿರುವ ಸುಮೇರು ನಿವಾಸದಿಂದ ಸೇನಾ ವಾಹನದಲ್ಲಿ 9.15ಕ್ಕೆ ಬಿಜೆಪಿ ಕಚೇರಿಯಿರುವ ಜಗನ್ನಾಥ್ ಭವನಕ್ಕೆ ಅನಂತ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ತರಲಾಯಿತು.ಪಕ್ಷದ ಮುಖಂಡರು ಮತ್ತಿತರರು ಬರಮಾಡಿಕೊಂಡರು.
ದಾರಿಯ ಇಕ್ಕೆಲಗಳಲ್ಲೂ ಅನಂತ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನ ನಿಧಾನ ಗತಿಯಲ್ಲಿ ಸಾಗುತ್ತಿತ್ತು. ಈ ವೇಳೆ ದಾರಿಯುದ್ದಕ್ಕೂ ನಿಂತಿದ್ದ ಜನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ಅನಂತ್‍ಕುಮಾರ್ ಅಮರ್ ರಹೇ, ಮತ್ತೇ ಹುಟ್ಟಿ ಬಾ ಎಂಬ ಘೋಷಣೆಗಳನ್ನು ಕೂಗಿದರು
ಬಸವನಗುಡಿಯ ಸುಮೇರು ನಿವಾಸದಿಂದ ಹೊರಟ ವಾಹನ ಎಸ್.ಪಿ.ಸಮಾಜರಸ್ತೆ, ಬಸವನಗುಡಿ ಮೆಡಿಕಲ್ ಸೆಂಟರ್, ಲಾಲ್‍ಬಾಗ್ ವೆಸ್ಟ್ ಗೇಟ್, ಆರ್.ವಿ.ರಸ್ತೆ, ಮಿನರ್ವ ಸರ್ಕಲ್, ಶಿವಾಜಿ ವೃತ್ತ, ಎನ್.ಆರ್.ವೃತ್ತ, ಹೈಗ್ರೌಂಡ್ಸ್ ಜಂಕ್ಷನ್, ಪಿ.ಜಿ.ಹಳ್ಳಿ ಜಂಕ್ಷನ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಮಾರಮ್ಮ ಸರ್ಕಲ್, ಸಂಪಿಗೆ ರಸ್ತೆ ಮೂಲಕ ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಶನಕ್ಕೆ ಇಡಲಾಯಿತು.

ಅಂತಿಮ ದರ್ಶನದ ನಂತರ
ಬಿಜೆಪಿ ಕಚೇರಿಯಿಂದ ಕಾಡು ಮಲ್ಲೇಶ್ವರ ದೇಗುಲ ಬಳಿ ಬಲ ತಿರುವು ಸಂಪಿಗೆ ರಸ್ತೆ ಬಳಿ ಬಲ ತಿರುವು, ಸ್ಯಾಂಕಿ ಟ್ಯಾಂಕಿ ರಸ್ತೆ , ಭಾಷ್ಯಂ ಸರ್ಕಲ್ , ಕಾವೇರಿ ಜಂಕ್ಷನ್, ಪಿಜಿ ಹಳ್ಳಿ ಜಂಕ್ಷನ್ , ಬಿ ನಾಟ್ ಟು ಜಂಕ್ಷನ್, ಓಲ್ಡ್ ಹೈ ಗ್ರೌಂಡ್ ಪೆÇಲೀಸ್ ಸ್ಟೇಷನ್ ಜಂಕ್ಷನ್ , ಎಲ್‍ಆರ್ಡಿ ಜಂಕ್ಷನ್ ಬಳಿ ಬಲ ತಿರುವು ಸ್ಟಾಕ್ ಟೆನ್ ಜಂಕ್ಷನ್ ಸಿಐಡಿ ಜಂಕ್ಷನ್ ಮಹಾರಾಣಿ ಕಾಲೇಜ್ ಸರ್ವೀಸ್ ರೋಡ್ ಎಂಡ್ ತಿರುವು ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ ಪೆÇಲೀಸ್ ಕಾರ್ನರ್ , ಕಾಪೆರ್Çರೇಷನ್ ಸರ್ಕಲ್ ಎನ್.ಆರ್.ಸ್ಕ್ವೇರ್ ಬಳಿ ಎಡ ತಿರುವು ಪಡೆದು, ದೇವನಾಗ ಜಂಕ್ಷನ್ ಬಳಿ ಬಲ ತಿರುವು ಪೂರ್ಣಿಮಾ ಜಂಕ್ಷನ್ ಊರ್ವಶಿ ಜಂಕ್ಷನ್ , ಸ್ಟಾಕ್ 35 ಜಂಕ್ಷನ್ ವಾಣಿ ವಿಲಾಸ್ ರಸೆ,್ತ ಪಂಪ ಮಹಾಕವಿ ರಸ್ತೆ ಎಡ ತಿರುವಿನ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ಮೃತರ ಪಾರ್ಥಿವ ಶರೀರ ತರಲಾಯಿತು.

ಬಿಗಿಭದ್ರತೆ :
ಅಂತಿಮ ದರ್ಶನದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಜೆಪಿ ಕಚೇರಿ ಬಳಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಓರ್ವ ಡಿವೈಎಸ್‍ಪಿ, ಐದು ಮಂದಿ ಇನ್ಸ್‍ಪೆಕ್ಟರ್, 20 ಮಂದಿ ಸಬ್ ಇನ್ಸ್‍ಪೆಕ್ಟರ್ , 220 ಮಂದಿ ಪೆÇಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ಪ್ರತಿಯೊಬ್ಬರನ್ನು ಬ್ಯಾರೀಕೇಡ್ ಮೂಲಕ ಒಳಬಿಡಲಾಗುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ