ಅನಂತ್ ಕುಮಾರ್ ಅಗಲಿದರಾ!

ಚಾಣಾಕ್ಷ ರಾಜಕಾರಣಿ,ಚತುರ ಮುತ್ಸದ್ದಿ, ಅತ್ಯುತ್ತಮ ಸಾಹಿತಿ, ಲೇಖಕ, ಭಾಷಣಗಾರ, ಕಾರ್ಯಕರ್ತ ಅನಂತ್ ಜೀ..

ಅನಂತ್ ಜೀ ..ಅವರಲಿತ್ತು ಸಾಹಿತ್ಯದ ಸೃಜನತೆ, ರಚಿಸುತ್ತಿದ್ದರು ಸ್ವಂತ ಕವಿತೆ, ಕಟ್ಟುತ್ತಿದ್ದರು ಆಶು ಕವಿತೆ

ಆಡುತ್ತಿದ್ದರು ಕನ್ನಡ,ಹಿಂದಿ, ತೆಲಗು, ಸಂಸ್ಕೃತ ,ಇಂಗ್ಲೀಷ್ ಪಂಚ ಭಾಷೆ.
ಪಡೆದಿದ್ದರು ಭಾಷಾ ಪ್ರವೀಣತೆ.

ಅಮ್ಮನ ನೆನಪಿಗೆ ತೆರೆದಿದ್ದರು ‘ಅದಮ್ಯ ಚೇತನ’ ವೆಂಬ ಅಕ್ಷಯ ಅನ್ನ ನೀಡುವ ಯೋಜನೆ. ಅಲ್ಲಿ ಕಾಣುತ್ತಿದ್ದರು ಸೇವೆಯೆಂಬ ಸಾರ್ಥಕತೆ

ಅನಂತ ಅಕ್ಕರೆ ಎಲ್ಲರಲ್ಲಿ, ಅನಂತ ಆಸಕ್ತಿ ಕೆಲಸದಲ್ಲಿ,ಅನಂತ ಪ್ರೀತಿ ಸರ್ವರಲ್ಲಿ, ಅನಂತ ಪರಿಶ್ರಮ ಬದುಕಿನಲ್ಲಿ, ಅನಂತ ದೇಶಾಭಿಮಾನ ಮನದಲ್ಲಿ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇಕಾರ
ಭಾಜಪದ ನಿಷ್ಟಾವಂತ ಸಾಕಾರ..

ಒಂದಿನಿತೂ ಅಹ: ಇಲ್ಲದೆ ಬೆರೆಯುತ್ತಿದ್ದ ಕಾರ್ಯಕರ್ತ
ಕರ್ನಾಟಕದಲ್ಲೂ, ಕೇಂದ್ರದಲ್ಲೂ ಉತ್ತಮ ರಾಜಕಾರಣಿಯಾಗಿ ವಿಜ್ರಂಭಿಸಿದಾತ.

ನನ್ನ ಪತಿ ದತ್ತಾತ್ರಿಯವರಲ್ಲೂ ಅವರಿಗೆ ಬಲು ಪ್ರೀತಿಯ ಸೋದರತ್ವ. ನೀನು ಕೈಕುಲಕಬೇಡ, ಬಾ ಇಲ್ಲಿ ಹೃದಯಕ್ಕೆ ಹತ್ತಿರ ಎಂದು ಆಲಂಗಿಸಿ, ಬೆನ್ನು ತಟ್ಟುತ್ತಿದ್ದರು ಈತ.

ಹೀಗೆ ಹೇಳುತ್ತಾ ಹೋದರೆ ಮುಗಿಯದು ಅನಂತರ ಅನನ್ಯ ಕಾರ್ಯ . ಮೊಟಕುಗೊಳಿಸುವೆ ನನ್ನ ಈ ಪುಟ್ಟ ಬರಹದ ನಮನದ ಕಾರ್ಯ.

ಶಿರಬಾಗಿ ವಂದಿಸುವೆ ಅವರ ಅನಂತದಲ್ಲಿ ಲೀನವಾದ ಆತ್ಮಕ್ಕೆ ಈಗ. ನಮಿಸುವೆ ಅವರ ಕಾಯಕ್ಕೆ ನನ್ನ ಶ್ರದ್ದೆಯ ಒಂದೆರಡು ಅಂಜಲಿ ಭರಿತ ಅಶೃತರ್ಪಣ..ವೀಗ..
.. ಶ್ರೀರಂಜಿನಿ ದತ್ತಾತ್ರಿ…

ಹೀಗೆ ಅನಂತ ಆತ್ಮೀಯತೆಯಿಂದ ಆವರಿಸಿ ಕುಶಲ ವಿಚಾರಿಸುತ್ತಿದ್ದ ಸರಳ ನಡೆ, ನುಡಿಯ, ಬಹು ಮುಖ ವ್ತಕ್ತಿತ್ವದ , ಭಾರತದ ಒರ್ವ ಸತ್ಪ್ರಜ, ರಾಷ್ಟ್ರಾಭಿಮಾನಿ, ಆದರ್ಶ ಸಂಸದ, ನಿಷ್ಟಾವಂತ ಕಾರ್ಯಕರ್ತ ಅನಂತ್ ಕುಮಾರ್ ರವರು..ಅನಾರೋಗ್ಯದಿಂದ ಅಗಲಿದ್ದಾರೆ..

ಅವರ ಅನಂತ ಕಾಯೋತ್ಸಾಹದ ಕಾರ್ಯಗಳು ನಮ್ಮೊಳಗೆ ಅರ್ವಿಭವಿಸಲಿ, ಅವರ ಕಾರ್ಯಕ್ಷಮತೆಯ ನಿಲುವುಗಳು ನಮ್ಮನ್ನು ಮುನ್ನಡೆಸಲಿ.. ಸಮಾಜ ಸೇವಾ ಕಾರ್ಯಕ್ಕೆ ಪ್ರೇರಣೆ ಆಗಲಿ..

ಅವರ ಕುಟುಂಬದ ಎಲ್ಲರಿಗೂ, ಅವರನ್ನು ಪ್ರೀತಿಸಿದ ಎಲ್ಲ ಮನಗಳಿಗೂ ಅನಂತ ಶಕ್ತಿ ಪ್ರವಹಿಸಿ.. ಆತ್ಮಸ್ಥೈರ್ಯ ತುಂಬಿ.. ಮುಂದಿನ ಕಾರ್ಯ ಗಳಿಗೆ ಕಂಕಣಬದ್ಧರಾಗಲಿ..
ಅಗಲಿತ ಅನಂತರ ಆತ್ಮಕ್ಕೆ ಅನಂತ ಶಾಂತಿ ದೊರಕಲಿ..
ಓಧೇವಾ ಕರುಣಿಸು ಅವರ ಆತ್ಮಕ್ಕೆ ಚಿರಶಾಂತಿ ಎಂದು ಬೇಡುವ
..ಓರ್ವ ಆಭಿಮಾನಿ..
ಶ್ರೀರಂಜಿನಿದತ್ತಾತ್ರಿ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ