ರಾಫೇಲ್​ ಯುದ್ಧ ವಿಮಾನ ಖರೀದಿ ವಿವಾದ: ಸುಪ್ರೀಂಗೆ ದಾಖಲೆಗಳ ವಿವರ ಸಲ್ಲಿಸಿದ ಕೇಂದ್ರ

ನವದೆಹಲಿ: ರಾಫೇಲ್​ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದೆ.

9 ಪುಟಗಳ ಅಫಿಡವಿಟ್​​ನಲ್ಲಿ, ರಾಫೇಲ್​ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭಾರತೀಯ ತಂಡ ಫ್ರೆಂಚ್ ಸರ್ಕಾರದೊಡನೆ ಒಂದು ವರ್ಷ ಕಾಲ ಮಾತುಕತೆ ನಡೆಸಿದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ವೈಮಾನಿಕ ಇಲಾಖೆ ಹಾಗೂ ರಕ್ಷಣಾ ಪಡೆಗಳ ಸಾಮಗ್ರಿ ಖರೀದಿಸುವಾಗ ಅನುಸರಿಸುವ ಅನುಮೋದನಾ ಕ್ರಮಗಳನ್ನು ರಕ್ಷಣಾ ವಿಮಾ ಪ್ರಕ್ರಿಯೆ (ಡಿಪಿಪಿ) ಯನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆ ಅಲ್ಲದೇ ವಿಮಾನ ಖರೀದಿ ಪ್ರಕ್ರಿಯೆ ಸಂಬಂಧ ಸಂಪುಟ ಸಮಿತಿ ಹಾಗೂ ಹಣಕಾಸು ಪ್ರಾಧಿಕಾರದ ಅನುಮೋದನೆ ಪಡೆಯಲಾಗಿದೆ ಎಂದು ಅಫಿಡವಿಟ್​ನಲ್ಲಿ ಕೇಂದ್ರ ಸ್ಪಷ್ಟನೆ ನೀಡಿದೆ ಎನ್ನಲಾಗಿದೆ.

ರಾಫೇಲ್​ ಯುದ್ಧ ವಿಮಾನ ಖರೀದಿ ಕುರಿತು ಸಂಪೂರ್ಣ ವಿವರ ಒದಗಿಸುವಂತೆ ಇಬ್ಬರು ವಕೀಲರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಕ್ಟೋಬರ್ 31ರಂದು , ರಾಫೇಲ್ ಡೀಲ್ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸುಪ್ರೀಂ ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

Rafale deal,Govt submit,documents, Supreme Court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ