ಗಣೇಶ್ ನಟನೆಯ ‘ಗೀತಾ’ ಚಿತ್ರಕ್ಕೆ 3ನೇ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್

ಬೆಂಗಳೂರು:  ಗೋಲ್ಡನ್ ಸ್ಚಾರ್ ಗಣೇಶ್ ಅಭಿನಯದ ಗೀತಾ ಸಿನಿಮಾಗೆ ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದು,. ಮೂರನೇ ನಾಯಕಿಯ ಆಯ್ಕೆ ಮುಗಿದಿದೆ.
ಪಾರ್ವತಿ ಅರುಣ್ ಮತ್ತು ಪ್ರಯಾಗ ಮಾರ್ಟಿನ್ ಇಬ್ಬರು ಮಲಯಾಳಿ ನಾಯಕಿಯರ ಜೊತೆಗೆ ಶಾನ್ವಿ ಶ್ರೀವಾಸ್ತವ್ ಜೊತೆಯಾಗಿದ್ದಾರೆ.

ನಟ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಅಭಿನಯಸಿದ್ದ ಶಾನ್ವಿ, ಸದ್ಯ ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಯಣ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಈ ಮೊದಲು ರಮೇಶ್ ಅರವಿಂದ್ ನಿರ್ದೇಶನದ ಸುಂದರಾಂಗ ಜಾಣ ಸಿನಿಮಾದಲ್ಲಿ ಗಣೇಶ್ ಜೊತೆ ನಟಿಸಿದ್ದ ಶಾನ್ವಿ 2 ನೇ ಬಾರಿಗೆ ನಟಿಸಲಿದ್ದಾರೆ.
ಗೋಲ್ಡನ್ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಗೀತಾ ದಲ್ಲಿ ಶಾನ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಧಿಕೃತವಾಗಿ ಘೋಷಿಸದ ನಂತರ ಪಾತ್ರದ ಬಗ್ಗೆ ತಿಳಿಸಲಾಗುವುದು, ನವೆಂಬರ್ 9 ರಂದು ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ