ವಿಶ್ವ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ – ಪಾಕ್ ಫೈಟ್

ವೆಸ್ಟ್ಇಂಡೀಸ್ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಇಂದು ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಮೊನ್ನೆಯಷ್ಟೆ ನ್ಯೂಜಿಲೆಂಡ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 34 ರನ್ಗಳ ಭರ್ಜರಿ ಗೆಲುವು ಪಡೆದು ಹರ್ಮನ್ ಪ್ರೀತ್ ಪಡೆ ಶುಭಾರಂಭ ಮಾಡಿತ್ತು. ಇದೀಗ ತನ್ನ ಎರಡನೇ ಸವಾಲಿನಲ್ಲಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನ ಎದುರಿಸುತ್ತಿದೆ.
ಸಾಲಿಡ್ ಫಾರ್ಮ್ನಲ್ಲಿದೆ ಹರ್ಮನ್ ಪ್ರೀತ್ ಪಡೆ
ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿರುವ ಭಾರತೀಯ ವನಿತೆಯರ ತಂಡ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಕಿವೀಸ್ ವಿರುದ್ಧ 103 ರನ್ ಗಳಿಸಿ ಮಿಂಚಿದ್ರು. ಇನ್ನು ಜೆಮ್ಮಿ ರೋಡ್ರಿಗಸ್ ಮೊನ್ನೆ ಟಿ20 ನಾಲ್ಕನೆ ಫಾರ್ಮೆಟ್ನಲ್ಲಿ ಅರ್ಧ ಶತಕ ಬಾರಿಸಿ ನಾಯಕಿಗೆ ಉತ್ತಮ ಸಾಥ್ ನೀಡಿ ತಂಡದ ಸ್ಕೋರ್ ಹೆಚ್ಚಿಸಿದ್ರು.
ಮೊನ್ನೆ ಗಯಾನಾ ಅಂಗಳ ಸ್ಲೋ ಟರ್ನಿಂಗ್ ಟ್ರ್ಯಾಕ್ ಆಗಿದ್ದರಿಂದ ತಂಡದ ಬೌಲರ್ಗಳಾದ ದೀಪ್ತಿ ಶರ್ಮಾ, ಹೇಮಾಲತಾ , ಪೂನಮ್ ಯಾದವ್ ಮತ್ತು ರಾಧಾ ಯಾದವ್ ಕಿವೀಸ್ ಬ್ಯಾಟ್ಸ್ ಮನ್ಗಳನ್ನ ಬೇಗನೆ ಪೆವಿಲಿಯನ್ಗೆ ಕಳುಹಿಸಿದ್ರು. ಕಿವೀಸ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ಗಳನ್ನ ಸ್ಪಿನ್ನರ್ಗಳೇ ಪಡೆದಿದ್ದರು.
ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎರಡನೇ ಪೇಸ್ ಬೌಲರ್ ಬೇಕಾಗಿರೋದ್ರಿಂದ ಮಾನಸಿ ಜೋಶಿ ಅಥವಾ ಪೂಜಾ ಅವರನ್ನ ಹರ್ಮನ್ ಪ್ರೀತ್ ಬಳಸಿಕೊಳ್ಳಬೇಕಿದೆ.
ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಎದುರು 52 ರನ್ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಸೋತಿದ್ದರಿಂದ ಸಹಜವಾಗಿಯೇ ಕಂಗಾಲಾಗಿದೆ. ಹರ್ಮನ್ ಪ್ರೀತ್ ಪಡೆ ಎದುರು ಕಠಿಣ ಸವಾಲನ್ನ ಎದುರಿಸಲಿದೆ. ತಂಡದಲ್ಲಿ ನಾಯಕಿ ಜವೇರಿಯಾ ಖಾನ್, ಸ್ಪಿನ್ನರ್ ಸಾನಾ ಮಿರ್ ಮತ್ತು ಆಲ್ರೌಂಡರ್ ನಿಸ್ಮಾ ಮಹಾರೂಫ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಕಳೆದ ವಿಶ್ವಕಪ್ನ ಸೇಡು ತೀರಿಸಿಕೊಳ್ಳಬೇಕು ಹರ್ಮನ್ಪ್ರೀತ್ ಪಡೆ
ಎರಡು ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ವಿರೋಚಿತ ಸೋಲು ಕಂಡಿತ್ತು. ದೆಹಲಿಯ ಫಿರೋಜ್ ಷ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಂದು ಮಿಥಾಲಿ ಪಡೆ 20 ಓವರ್ಗಳಲ್ಲಿ 96 ರನ್ ಗಳಿಸಿತ್ತು. 96 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ಮಳೆ ಅಡ್ಡಿಯಾಗಿತ್ತುಯಿತು . ಇದರ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದಡಿ ಪಾಕಿಸ್ತಾನ 2 ರನ್ಗಳ ರೋಚಕ ಗೆಲುವು ಪಡೆದಿತ್ತು.
ಕಳೆದ ಒಂಭತ್ತು ವರ್ಷಗಳಿಂದ ಇದುವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೂ 10 ಬಾರಿ ಮುಖಾಮುಖಿಯಾಗಿವೆ. ಈ 10 ಮುಖಾಮುಖಿಯಲ್ಲಿ ಭಾರತ ಬಾರಿ ಗೆಲುವು ಪಡೆದರೆ ಎರಡು ಬಾರಿ ಮಾತ್ರ ಸೋಲು ಕಂಡಿದೆ.
ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕ್ ವನಿತೆಯರು ಇದುವರೆಗೂ 5 ಬಾರಿ ಮುಖಾಮುಖಿಯಾಗಿದ್ದಾರೆ. ಈ ಐದು ಮುಖಾಮುಖಿಯಲ್ಲಿ ಭಾರತ 5 ಬಾರಿ ಗೆದ್ದಿ 2 ಬಾರಿ ಸೋಲು ಕಂಡಿದೆ.
ಒಟ್ಟಿನಲ್ಲಿ ಇಂದು ಗಯನಾ ಅಂಗಳದಲ್ಲಿ ಮತ್ತೊಂದು ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದ್ದು ಭಾರತ ವನಿತೆಯರ ತಂಡ ಪಾಕ್ ಎದುರು ಗೆಲ್ಲುವ ಫೇವರಿಟ್ ತಂಡ ಎನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ