ವಾರಣಾಸಿಯಲ್ಲಿ ಆರ್ ಎಸ್ ಎಸ್ ಸಭೆ: ರಾಮ ಮಂದಿರ ನಿರ್ಮಾಣ ಕುರಿತು ಮಹತ್ವದ ಚರ್ಚೆ

ವಾರಣಾಸಿ: ಇಂದಿನಿಂದ ಆರು ದಿನಗಳ ಕಲಾ ವಾರಣಾಸಿಯಲ್ಲಿ ಆರ್ ಎಸ್ ಎಸ್ ಮಹತ್ವದ ಸಭೆ ನಡೆಯುತ್ತಿದ್ದು, ಅಯೋಧ್ಯಾ ರಾಮ ಮಂದಿರ ನಿರ್ಮಾಣ ವಿಚಾರದ ಕುರಿತು ಪ್ರಮುಖವಾಗಿ ಚರ್ಚೆ ನಡೆಯಿದೆ ಎನ್ನಲಾಗಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು 6 ದಿನಗಳ ಕಾಲ ವಾರಣಾಸಿಯಲ್ಲಿ ನೆಲಸಲಿದ್ದು, ಸಭೆ ಕುರಿತ ಕುತೂಹಲ ಇಮ್ಮಡಿಗೊಳಿಸಿದೆ. ಇನ್ನು ಸ್ವಕ್ಷೇತ್ರ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಮುನ್ನಾ ದಿನ ಈ ಸಭೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

ನವೆಂಬರ್‌ 16 ರ ವರೆಗೆ ಆರ್‌ಎಸ್‌ಎಸ್‌ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಖ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವೇ ಮಹತ್ವದ ಚರ್ಚೆ ವಿಷಯವಾಗಿದೆ ಎಂದು ಹೇಳಲಾಗಿದೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೋಹನ್‌ ಭಾಗವತ್‌ ಅವರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

RSS,Varanasi,Mohan Bhagwat,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ