ಕಸದ ಟೆಂಡರ್ ನಲ್ಲಿ ಗೋಲ್‍ಮಾಲ್ ನಡೆದಿಲ್ಲ: ಎಂಎಸ್‍ಜಿಪಿ ಕಂಪೆನಿ ಸ್ಪಷ್ಟನೆ

ಬೆಂಗಳೂರು, ನ.9- ಬಿಬಿಎಂಪಿ ಕಸದ ಟೆಂಡರನ್ನು ಕಾನೂನಾತ್ಮಕವಾಗಿ ಇ-ಟೆಂಡರ್ ಮೂಲಕ ಪಡೆದಿದ್ದು, ಯಾವುದೇ ರೀತಿಯ ಗೋಲ್‍ಮಾಲ್ ನಡೆದಿಲ್ಲ ಎಂದು ಎಂಎಸ್‍ಜಿಪಿ ಕಂಪೆನಿ ಸ್ಪಷ್ಟಪಡಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕಂಪೆನಿ, ಬೆಂಗಳೂರಿನ ಘನ ತ್ಯಾಜ್ಯ ವಿಂಗಡಿಸುವುದು, ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುವ ಸಂಬಂಧ 6-9-2017ರಂದು ಟೆಂಡರ್ ಸಂಬಂಧ ಅಂತಿಮ ಆದೇಶವಾಗಿದ್ದು, ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

ಇದರಂತೆ ಸರ್ಕಾರ 6-9-2017ರಂದು ಆದೇಶ ನೀಡಿದ್ದು, ಆದರನ್ವಯ ಬೆಂಗಳೂರು ಪೂರ್ವ ವಿಭಾಗದ 30 ವಾರ್ಡ್‍ಗಳ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ ಕೆಲಸದ ಕಾರ್ಯಾದೇಶ ಕಾನೂನು ಪ್ರಕಾರ ದೊರೆತಿದೆ.

ಇದಕ್ಕೆ ಸಂಬಂಧಿಸಿದ ಕಾರ್ಯಾದೇಶವನ್ನು ಪೂರ್ವ ವಿಭಾಗದ ಜಂಟಿ ಆಯುಕ್ತರು 19-3-2018ರಂದು ನೀಡಿದ್ದು, ಬಿಬಿಎಂಪಿ ಸ್ಥಾಯಿ ಸಮಿತಿಯ ಮುಂದೆ 27-8-2018ರಂದು ಬಂದಿದ್ದು, 31-10-2018ರಂದು ಸ್ಥಾಯಿ ಸಮಿತಿ ನಿರ್ಣಯ ಅಂಗೀಕರಿಸಿದ್ದು, ಸರ್ಕಾರಿ ಆದೇಶವಾಗಿದೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಅನ್ವಯವೇ ಈ ಟೆಂಡರ್ ಪಡೆದಿದ್ದು, ಯಾರದ್ದೇ, ಯಾವುದೇ ಶಿಫಾರಸನ್ನು ಮಾಡಿಲ್ಲ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ