ಖಾಸಗಿ ಕಂಪನಿ ಮಾಲೀಕರನ್ನು ಪಾರು ಮಾಡಲು ಲಂಚ ಪಡೆದ ಆರೋಪ, ಮಾಜಿ ಸಚಿವ ಜನಾದ೵ನ ರೆಡ್ಡಿ ವಿಚಾರಣೆ

ಬೆಂಗಳೂರು, ನ.7- ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಖಾಸಗಿ ಕಂಪೆನಿಯೊಂದ ಮಾಲೀಕರನ್ನು ಜಾರಿ ನಿರ್ದೇಶನಾಲಯದ ಕೇಸಿನಿಂದ ಪಾರು ಮಾಡಲು 20 ಕೋಟಿ ರೂ. ಮೌಲ್ಯದ ಚಿನ್ನವನ್ನು ಲಂಚದ ರೂಪದಲ್ಲಿ ಪಡೆದ ಆರೋಪಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗುರಿಯಾಗಿದ್ದಾರೆ.

ತನಿಖೆಯ ವೇಳೆ ಬಹಿರಂಗವಾದ ಮಾಹಿತಿ ಆಧರಿಸಿ ವಿಚಾರಣೆ ಮುಂದುವರೆಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಇದೇ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿದ್ದ ಜನಾರ್ದನ ರೆಡ್ಡಿ ಅವರ ಸಹಚರನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸದ್ಯಕ್ಕೆ ನಾಪತ್ತೆಯಾಗಿರುವ ಜನಾರ್ದನ ರೆಡ್ಡಿ ಅವರಿಗಾಗಿ ಪೊಲೀಸರು ಹುಟುಕಾಟ ಆರಂಭಿಸಿದ್ದಾರೆ.

ಪ್ರಕರಣದ ಬಗ್ಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ವಿವರಣೆ ನೀಡಿದರು.
ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸಿದ ಆಂಬಿಡೆಂಟ್ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.
ಮಾರ್ಕೆಟಿಂಗ್ ಹೆಸರಿನಲ್ಲಿ ಹಣ ದ್ವಿಗುಣ ಮಾಡುವುದಾಗಿ ಬೆಂಗಳೂರಿನ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸುಮಾರು 15 ಸಾವಿರ ಜನರಿಂದ 600 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಸಂಗ್ರಹಿಸಿತ್ತು. ಹಣ ಹೂಡಿಕೆ ಮಾಡುವವರಿಗೆ ಶೇ.35ರಿಂದ 40ರಷ್ಟು ಬಡ್ಡಿಯನ್ನು ನೀಡುವುದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ ಬಡ್ಡಿಯನ್ನು ವಾಪಾಸ್ ನೀಡಿಲ್ಲ, ಅಸಲನ್ನು ವಂಚಿಸಿತ್ತು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೇ ತಿಂಗಳಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಯಲ ಆಂಬಿಡೆಂಟ್ ಕಂಪೆನಿಯ ಮೇಲೆ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಯಲದ ತನಿಖೆ ಬಿಗಿಯಾದಾಗ ಪ್ರಕರಣದಿಂದ ಬಿಡುಗಡೆ ಪಡೆಯಲು ಕಂಪೆನಿಯ ಮುಖ್ಯಸ್ಥರಾದ ಸೈಯದ್ ಫರೀದ್ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಸಹಾಯ ಕೋರಿದ್ದರು.

ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಕಂಪೆನಿಯ ಮುಖ್ಯಸ್ಥರು ಮತ್ತು ಜನಾರ್ದನ ರೆಡ್ಡಿ ಅವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಅಕ್ರಮ ಆಸ್ತಿ ಹಾಗೂ ಗಣಿ ಹಗರಣದಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯದ ವಿಚಾರಣೆ ಎದರಿಸಿ ಅನುಭವ ಇರುವ ಜನಾರ್ದನ ರೆಡ್ಡಿ, ತಮ್ಮ ಅಧಿಕಾರಿಗಳು ಆಪ್ತರಾಗಿದ್ದಾರೆ ನಿಮ್ಮ ಮೇಲಿನ ಪ್ರಕರಣವನ್ನು ಸುಗಮ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.

ಮಾತುಕತೆಯ ವೇಳೆ 20 ಕೋಟಿ ರೂ. ನೀಡುವಂತೆ ಹೇಳಿದ್ದು, ಇಬ್ಬರ ನಡುವೆ ಒಪ್ಪಂದವಾಗಿದೆ. ಆದರೆ ಹಣವನ್ನು ನಗದಿನ ಬದಲಿಗೆ ಚಿನ್ನದ ಗಟ್ಟಿಯ ರೂಪದಲ್ಲಿ ನೀಡುವಂತೆ ಜನಾದರ್Àನರೆಡ್ಡಿ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಆರೋಪಿ ಫರೀದ್ ಅವರು ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್‍ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಜ್ಯುವೆಲರ್ಸ್‍ನ ರಮೇಶ್ ಎಂಬುವರ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾಪೆರ್Çೀರೇಷನ್‍ನ ರಮೇಶ್ ಕೊಠಾರಿ ಅವರಿಗೆ 18 ಕೋಟಿ ರೂ. ವರ್ಗಾವಣೆ ಮಾಡಿದ್ದು, ಅದರಿಂದ 57 ಕೆಜಿ ಚಿನ್ನ ಖರೀದಿ ಮಾಡಲಾಗಿದೆ. ಆ ಚಿನ್ನವನ್ನು ಜನಾರ್ದನರೆಡ್ಡಿಗೆ ತಲುಪಿಸಿರುವುದು ವಿಚಾರಣೆ ವೇಳೆ ಖಚಿತವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.

ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಅವರು ಇದರ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದಾಗ ಈ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದರು,

ಖಾಸಗಿ ಕಂಪನಿ ಮಾಲೀಕ ಫರೀದ್, ಚಿನ್ನಾಭರಣ ಅಂಗಡಿ ಮಾಲೀಕ ರಮೇಶ್ ಅವರನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್‍ಗೆ 61ನೇ ಸೆಷನ್ಸ್ ಕೋರ್ಟ್ 50 ಸಾವಿರ ಬಾಂಡ್ ಹಾಗೂ ಶ್ಯೂರಿಟಿ ನೀಡುವಂತೆ ಸೂಚಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ಫರೀದ್ ಅವರ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಿದಾಗ ಜನಾರ್ದನ ರೆಡ್ಡಿಯೊಂದಿಗೆ ಹಣದ ವ್ಯವಹಾರ ನಡೆಸಿರುವುದು ಸಿಸಿಬಿ ಪೆÇಲೀಸರ ಗಮನಕ್ಕೆ ಬಂದಿದೆ. ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಫರೀದ್ ಮತ್ತು ರೆಡ್ಡಿ ನಡುವಿನ ವ್ಯವಹಾರ ಬಹಿರಂಗಗೊಂಡಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ಇದೀಗ ಈ ಪ್ರಕರಣದ ಬೆನ್ನು ಬಿದ್ದಿದ್ದು, ರೆಡ್ಡಿಗಾಗಿ ಶೋಧ ಆರಂಭಿಸಿದೆ.

ಸದ್ಯ ಹೈದರಾಬಾದ್‍ಗೆ ತೆರಳಿರುವ ಜನಾರ್ದನ ರೆಡ್ಡಿ ಅವರು ಅಲ್ಲಿಂದಲೇ ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸಿಸಿಬಿಯ ಒಂದು ತಂಡ ಈಗಾಗಲೇ ಹೈದರಾಬಾದ್‍ಗೆ ತೆರಳಿದ್ದು, ಇದರಿಂದ ದೀಪಾವಳಿ ಸಂದರ್ಭದಲ್ಲೇ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಈ ಸಂಬಂಧ ಬೆಂಗಳೂರು ನಗರ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಜನಾರ್ದನ ರೆಡ್ಡಿ ಅವರ ಬಂಧನದ ಸಾಧ್ಯತೆ ದಟ್ಟವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ