ಪ್ರಧಾನಿ ಮೋದಿ ವಿರುದ್ಧ ಶಶಿ ತರೂರ್ ಮುಂದುವರೆದ ವಾಗ್ದಾಳಿ: ಬಿಳಿ ಕುದುರೆ ಮೇಲೆ ಖಡ್ಗ ಹಿಡಿದು ಕುಳಿತ ಹೋರೋನಂತೆ ವರಿಸುತ್ತಿದ್ದಾರೆ ಎಂದು ಟೀಕೆ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರು ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಮೋದಿ ಬಿಳಿ ಕುದುರೆ ಮೇಲೆ ಕೈಯಲ್ಲಿ ಖಡ್ಗವನ್ನು ಎತ್ತರವಾಗಿ ಹಿಡಿದು ಕುಳಿತ ಹೀರೊನಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೋಲ್ಕತ್ತಾದಲ್ಲಿ ಕೈಗಾರಿಕಾ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತರೂರ್, ಮೋದಿಯವರದ್ದು ಏಕಮಾತ್ರ ಸರ್ಕಾರ. ಉಳಿದವರು ಅವರು ಹೇಳಿದಂತೆ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿಯವರದ್ದು ಏಕಮಾತ್ರ ವ್ಯಕ್ತಿಯ ಅಧಿಕಾರವಿರುವ ಕೇಂದ್ರ ಸರ್ಕಾರ, ಸರ್ಕಾರದ ಪ್ರತಿಯೊಂದು ತೀರ್ಮಾನವನ್ನು ಪ್ರಧಾನ ಮಂತ್ರಿ ಕಚೇರಿಯೇ ತೆಗೆದುಕೊಳ್ಳುವುದು. ಪ್ರತಿಯೊಂದು ದಾಖಲೆಗಳು ಕೂಡ ಅನುಮೋದನೆಗೆ ಪ್ರಧಾನ ಮಂತ್ರಿ ಕಚೇರಿಗೆ ಹೋಗಬೇಕು. ಭಾರತದ ಇತಿಹಾಸದಲ್ಲಿಯೇ ಇಂದು ಪ್ರಧಾನ ಮಂತ್ರಿ ಕಚೇರಿ ಕೇಂದ್ರೀಕೃತ ಆಡಳಿತವಿದೆ ಎಂದು ಆರೋಪಿಸಿಾರೆ. ಬಿಳಿ ಕುದುರೆ ಮೇಲೆ ಹೀರೋ ಕುಳಿತು ಖಡ್ಗವನ್ನು ಕೈಯಿಂದ ಎತ್ತರಕ್ಕೆ ತೋರಿಸಿ ನನಗೆಲ್ಲಾ ಗೊತ್ತು ಎಂದು ಹೇಳುವ ವ್ಯಕ್ತಿತ್ವ ಮೋದಿಯವರದ್ದು ಎಂದು ಟೀಕಿಸಿದ್ದಾರೆ.

ಇದೇವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮಧ್ಯೆ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಮೈತ್ರಿ ಏರ್ಪಡಲಿದೆ. ಆದರೆ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯ ಆಯ್ಕೆ ಸಾಮೂಹಿಕ ನಿರ್ಧಾರವಾಗಿರುತ್ತದೆ. ಅದು ರಾಹುಲ್ ಗಾಂಧಿಯಾಗಿರಲಿಕ್ಕಿಲ್ಲ. ಬಿಜೆಪಿಯಂತೆ ಏಕವ್ಯಕ್ತಿ ಕೇಂದ್ರಿತ ಪಕ್ಷವಲ್ಲ ನಮ್ಮದು, ಕಾಂಗ್ರೆಸ್ ನಾಯಕರು ವಿಶಾಲ ಮನಸ್ಥಿತಿಯವರು. ಎರಡನೇ ಬಾರಿಗೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದರು.

Congress,Shashi taroor,PM narendra modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ