ಚಾಮರಾಜಪೇಟೆಯಲ್ಲಿ ಕನ್ನಡ ಕಲರವ…

ಬೆಂಗಳೂರು, ನ.1- ಚಾಮರಾಜಪೇಟೆ ನಾಡ ಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ 62 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕನ್ನಡ ರಾಜ್ಯೋತ್ಸವವನ್ನು ಈ ವರ್ಷವು ಕೂಡ ಅದ್ಧೂರಿಯಾಗಿ ಆಚರಿಸಿತು.
ಇಂದು ಚಾಮರಾಜಪೇಟೆಯ ಮೂರನೆ ಮುಖ್ಯರಸ್ತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಬಿ.ಝಡ್.ಜಮೀರ್ ಅಹಮ್ಮದ್ ಖಾನ್ ನಾಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ನಾಡಿನ ಎಲ್ಲರೂ ಒಗ್ಗಟ್ಟಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಚಾಮರಾಜಪೇಟೆಯಲ್ಲಿ ಆರು ದಶಕಗಳಿಂದಲೂ ನಾಡಹಬ್ಬವನ್ನು ವೈಭವವಾಗಿ ಆಚರಿಸಿಕೊಂಡು ಬರುವ ಮೂಲಕ ನಾಡಿನ ಸಂಸ್ಕøತಿ, ಜಾನಪದ ಸೊಗಡನ್ನು ಉಳಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ಸಂಸದ ಪಿ.ಸಿ.ಮೋಹನ್ ಅವರು ರಾಜರಾಜೇಶ್ವರಿ ಅಮ್ಮನವರು, ಮಲೈ ಮಹದೇಶ್ವರ ಸ್ವಾಮಿ, ಆದಿ ಪರಾಶಕ್ತಿ, ಆದಿ ಚಿಕ್ಕಣ್ಣಮ್ಮನವರ ವೈಭವದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಾಡಿನ ಸಾಹಿತ್ಯ, ಸಂಸ್ಕøತಿ, ಜಾನಪದ ಕಲೆ ಎಲ್ಲವನ್ನೂ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸಮಿತಿ ಪ್ರತಿ ವರ್ಷ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸ್ಥಳೀಯ ಪಾಲಿಕೆ ಸದಸ್ಯ ಕೋಕಿಲ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಂ.ಮಹದೇವಪ್ಪ , ಹೆಬ್ಬಣ್ಣಿ ಲಿಂಗರಾಜು, ಹೊನ್ನಾಳಮ್ಮ ನಟರಾಜು, ಮಂಗಳೂರಿನ ಹೊಳ್ಳ, ಮಂಗಳೂರಿನ ಚಿಲಿಪಿಲಿ ನೃತ್ಯ, ಯಕ್ಷಗಾನ ಮತ್ತು ಹಾಸ್ಯಗೊಂಬೆ ನೃತ್ಯ, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಬಿಬಿಎಂಪಿ ಸದಸ್ಯರಾದ ಸುಜಾತಾ, ಬಿ.ಸಿ.ರಮೇಶ್, ಚನ್ನಕೇಶವ, ಎಂ.ಮುದ್ದಯ್ಯ, ಟಿ.ಗೋವಿಂದ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ರಾಜೀವ್, ನಟರಾಜ್, ಪಿ.ಉದಯ್‍ಕುಮಾರ್, ಚನ್ನೇಗೌಡ, ಜಯಶಂಕರ್ ಮುಂತಾದವರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ