ಇನ್ನೂ ಆಸ್ತಿ ಪ್ರಮಾಣ ಪತ್ರ ಸಲ್ಲಿಸದ 45 ಬಿಬಿಎಂಪಿ ಸದಸ್ಯರು

ಬೆಂಗಳೂರು, ನ.1- ಅವಧಿ ಮೀರಿದರೂ ಇನ್ನೂ 45 ಮಂದಿ ಬಿಬಿಎಂಪಿ ಸದಸ್ಯರು ತಮ್ಮ ಆಸ್ತಿ ಪ್ರಮಾಣ ಪತ್ರ ಸಲ್ಲಿಸಿಲ್ಲ.
ರಾಜಶೇಖರ್, ಉಮೇಸಲ್ಮಾ, ಮಹದೇವ ಎಂ., ಎಸ್.ಪಿ.ಹೇಮಲತಾ, ಚಂದ್ರಪ್ಪರೆಡ್ಡಿ, ಜೆ.ಮಂಜುನಾಥ್, ಮಹಮ್ಮದ್ ರಿಜ್ವಾನ್, ಶೋಭಾ ಜಗದೀಶ್‍ಗೌಡ, ಚಂದ್ರಮ್ಮ ಕೆಂಪೇಗೌಡ, ಸತೀಶ್ ಎಂ., ಕುಸುಮಾ ಎಚ್., ಲೋಕೇಶ್ ಎನ್., ಎಂ.ನಾಗರಾಜ್, ಜಯಪ್ರಕಾಶ್ ಎಂ.ಸಿ., ಕೆ.ವಿ.ರಾಜೇಂದ್ರಕುಮಾರ್, ರಾಜ ಎಸ್., ಕೆ.ಪೂರ್ಣಿಮಾ, ದೀಪಾ ನಾಗೇಶ್, ಶಾರದಾ, ಸರಳ, ಎಚ್.ಎ.ಕೆಂಪೇಗೌಡ, ಅನುಪಮಾ ಧರ್ಮಪಾಲ್, ಎಲ್.ಶ್ರೀನಿವಾಸ್, ಕೆ.ಸೋಮಶೇಖರ್, ನೌಷಿರ್ ಅಹಮ್ಮದ್, ಅಬ್ದುಲ್ ವಾಜಿದ್, ಜಿ.ಕೆ.ವೆಂಕಟೇಶ್, ಲಲಿತಾ ತಿಮ್ಮನಂಜಯ್ಯ, ವೇಲುನಾಯ್ಕರ್, ಸಯ್ಯದ್ ಸಾಜಿದಾ, ಲಾವಣ್ಯ ಗಣೇಶ್‍ರೆಡ್ಡಿ, ಮೀನಾಕ್ಷಿ, ಎ.ಸಿ.ಹರಿಪ್ರಸಾದ್, ಸುರೇಶ್ ವಿ., ಶಿಲ್ಪಾ ಅಭಿಲಾಷ್, ಹಾ.ನಾ.ಭುವನೇಶ್ವರಿ, ಎಂ.ಕೆ.ಗುಣಶೇಖರ್, ಎಚ್.ಮಂಜುನಾಥ್, ರಾಜಣ್ಣ, ಎಂ.ಶಿವರಾಜ್, ಶಕೀಲ್ ಅಹಮ್ಮದ್, ಫರೀದಾ ಇಸ್ತಿಯಾರ್, ಜಿ.ಪದ್ಮಾವತಿ, ಜಿ.ಕೃಷ್ಣಮೂರ್ತಿ, ರೂಪಾ ಇವರುಗಳು ಇದುವರೆಗೂ ಆಸ್ತಿ ಪ್ರಮಾಣ ಪತ್ರ ಸಲ್ಲಿಸಿಲ್ಲ.
ಪ್ರಸ್ತುತ ಅಸ್ತಿತ್ವದಲ್ಲಿರುವ ಬಿಬಿಎಂಪಿ ಸದಸ್ಯರು 2015 ಸೆಪ್ಟೆಂಬರ್ 13ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಪ್ರತಿ ವರ್ಷ ಅಕ್ಟೋಬರ್ 12ರೊಳಗಾಗಿ ತಮ್ಮ ಆಸ್ತಿ ಪ್ರಮಾಣ ಪತ್ರವನ್ನು ಮಹಾಪೌರರ ಕಚೇರಿಗೆ ಸಲ್ಲಿಸಬೇಕಿರುವುದು ಕಡ್ಡಾಯ.

ಈ ಅವಧಿ ಮುಗಿದು 20 ದಿನಗಳೇ ಕಳೆದಿದ್ದರೂ ಇನ್ನೂ 45 ಮಂದಿ 2017-18ನೆ ಸಾಲಿನ ತಮ್ಮ ಆಸ್ತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಚುನಾವಣಾ ಆಯೋಗದ ನಿಯಮಾನುಸಾರ 2018 ಅಕ್ಟೋಬರ್ 12ರ ನಂತರ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿರುವುದಿಲ್ಲ.
ಮಹಾಪೌರರ ಕಚೇರಿ ಅಧಿಕಾರಿಗಳು ಅವಧಿ ಮೀರಿದ ನಂತರ ಆಸ್ತಿ ವಿವರ ಸಲ್ಲಿಸುವ ಪತ್ರಗಳನ್ನು ಸ್ವೀಕರಿಸುವಂತಿಲ್ಲ. ಹೀಗಾಗಿ ಬಾಕಿ ಇರುವ 45 ಮಂದಿ ಸದಸ್ಯರು ಪ್ರಸಕ್ತ ಸಾಲಿನ ಆಸ್ತಿ ವಿವರ ಘೋಷಿಸುವಲ್ಲಿ ವಿಫಲರಾಗಿದ್ದಾರೆ.

ಪರಿಣಾಮವೇನು? ಯಾವ ಸದಸ್ಯರು ತಮ್ಮ ಆಸ್ತಿ ಪ್ರಮಾಣ ಪತ್ರ ಸಲ್ಲಿಸಿಲ್ಲವೋ ಅಂತಹ ಸದಸ್ಯರ ಹೆಸರುಗಳನ್ನು ಪಟ್ಟಿ ಮಾಡಿ ಮೇಯರ್ ಕಚೇರಿಯ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ರವಾನಿಸಬೇಕು.

ಮೇಯರ್ ಕಚೇರಿಯಿಂದ ಬಂದ ಮಾಹಿತಿಯನ್ನಾಧರಿಸಿ ಯಾವ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲವೋ ಅಂತಹವರ ಹೆಸರನ್ನು ಪ್ರಾದೇಶಿಕ ಆಯುಕ್ತರು ಎರಡು ಬಾರಿ ಜಾಹೀರಾತು ನೀಡಿ ಎಚ್ಚರಿಕೆ ನೀಡುವರು.
ತದನಂತರ ಆಸ್ತಿ ವಿವರ ಸಲ್ಲಿಸದ ಸದಸ್ಯರ ಹೆಸರುಗಳನ್ನು ಸರ್ಕಾರಕ್ಕೆ ರವಾನೆ ಮಾಡಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಶಿಫಾರಸು ಮಾಡುತ್ತಾರೆ.
ಪ್ರಾದೇಶಿಕ ಆಯುಕ್ತರ ಶಿಫಾರಸಿನ ಮೇರೆಗೆ ಸರ್ಕಾರ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ