ಉಪ ಚುನಾವಣೆ: ಬಂದೋಬಸ್ತ್‍ಗಾಗಿ ಕೇಂದ್ರ ಪಡೆಯ 39 ಕಂಪನಿ ಆಗಮನ

ಬೆಂಗಳೂರು, ನ.1- ರಾಜ್ಯದಲ್ಲಿ ಇದೇ 3ರಂದು ನಡೆಯುವ 3 ಲೋಕಸಭಾ ಕ್ಷೇತ್ರಗಳು ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಂದೋಬಸ್ತ್‍ಗಾಗಿ ಕೇಂದ್ರ ಪಡೆಯ 39 ಕಂಪನಿ ಬಂದಿವೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಕಮಲ್ ಪಂತ್ ತಿಳಿಸಿದ್ದಾರೆ.

ಸಿಆರ್‍ಪಿಎಫ್‍ನ 9, ಬಿಎಸ್‍ಎಫ್‍ನ 10, ಐಟಿಬಿಪಿಯ 10 ಮತ್ತು ಸಿಐಎಸ್‍ಎಫ್ 10 ಕಂಪನಿಗಳು ಬಂದೋಬಸ್ತ್‍ಗಾಗಿ ರಾಜ್ಯಕ್ಕೆ ಆಗಮಿಸಿವೆ. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ತಲಾ 10 ಕಂಪನಿಗಳನ್ನು ನಿಯೋಜಿಸಲಾಗುತ್ತದೆ. ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ 5 ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ 4 ಕಂಪನಿಗಳನ್ನು ಚುನಾವಣಾ ಬಂದೋಬಸ್ತ್‍ಗಾಗಿ ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಪಡೆಯ ಜೊತೆಗೆ ಸ್ಥಳೀಯ ಪೆÇಲೀಸರನ್ನು ಕೂಡ ನಿಯೋಜಿಸಲಾಗುತ್ತದೆ. ಸಿವಿಲ್ ಪೆÇಲೀಸ್, ಡಿಎಆರ್ ಮತ್ತು ಕೆಎಸ್‍ಆರ್‍ಪಿಯ 25 ಪ್ಲಟೂನ್‍ಗಳನ್ನು ಕೂಡ ಚುನಾವಣಾ ಕಾರ್ಯಕ್ಕೆ ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಐಜಿಪಿ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತರಾದ ಹರಿಶೇಖರನ್ ಅವರು ಉಪ ಚುನಾವಣೆ ಬಂದೋಬಸ್ತ್‍ನ ನೋಡಲ್ ಅಧಿಕಾರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ