ನ. 11ರಿಂದ 16 ವರೆಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೊಡಗಿಗಾಗಿ ರಂಗ ಸಪ್ತಾಹ ಆಯೋಜನೆ

Varta Mitra News

ಬೆಂಗಳೂರು,ಅ.31-ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೊಡಗಿಗಾಗಿ ನ.11ರಿಂದ 16ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗ ಸಪ್ತಾಹ ಆಯೋಜಿಸಲಾಗಿದೆ.

ಸಪ್ತಾಹದ ಅಂಗವಾಗಿ ಸಂಗೀತ ಜಾತ್ರೆ ಮತ್ತು ನಿರಾಶ್ರಿತರೊಂದಿಗೆ ಮಾತುಕತೆ ಮತ್ತಿತರ ಕಾರ್ಯಕ್ರಮಗಳು ಪ್ರತಿದಿನ ಸಂಜೆ 5.30ರಿಂದ ಆರಂಭವಾಗಲಿದೆ.
ಕೊಡಗಿನೆಡೆಗೆ ಹರಿಯುತ್ತಿರವ ಮಾನವೀಯತೆಯನ್ನು ಸದಾ ಜಾಗೃತವಾಗಿಡಲು ಹಾಗೂ ನಿರಾಶ್ರಿತ ಮಕ್ಕಳಿಗೆ ಸಹಾಯಾಸ್ತ ಚಾಚುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ನವೆಂಬರ್ 11ರಂದು ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಪ್ತಾಹ ಉದ್ಘಾಟನೆ ಮಾಡಲಿದ್ದು, ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕ ವಿಶುಕುಮಾರ್, ವಿಜಯನಗರ ಬಿಂಬ ಸಂಸ್ಥಾಪಕರಾದ ಶೋಭಾ ವೆಂಕಟೇಶ್, ನಟ ಡಾಲಿ ಧನಂಜಯ್ಯ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕೊಡಗು ನಿವೃತ್ತ ಜಿಲ್ಲಾಧಿಕಾರಿ ಡಾ.ಡಿ.ಸಿ.ಅಶ್ವಥ್, ಕೆಎಂಎಫ್ ಮಾಜಿ ಅಧ್ಯಕ್ಷ ಪ್ರೇಮ್‍ನಾಥ್, ರೈತ ನಾಯಕ ಪಚ್ಚೆ ನಂಜುಂಡಸ್ವಾಮಿ, ಭಾನುಪ್ರಕಾಶ್ ಮತ್ತಿತರರು ಪಾಲ್ಗೊಳ್ಳುವರು.
ಅಂದು ಸಂಜೆ 5.30ಕ್ಕೆ ಜನಪದ ಗೀತ ಜಾತ್ರೆಯಲ್ಲಿ ಅನನ್ಯ ಭಟ್ ಕಾರ್ಯಕ್ರಮ ನಡೆಸಿಕೊಡಲಿದ್ದು, 7 ಗಂಟೆಗೆ ನಟನಾ ತಂಡದಿಂದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಪ್ರದರ್ಶನಗೊಳ್ಳಲಿದೆ.

ನ.12ರಂದು ಸಂಜೆ 6.15ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಶಾಸಕ ಮುನಿರತ್ನ, ಮಾಜಿ ಶಾಸಕ ವಿಶ್ವನಾಥ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಡಾ.ಎಚ್.ಎನ್.ರವೀಂದ್ರ ಗೌಡ, ಸಂಚಾರಿ ತಂಡದ ಸಂಸ್ಥಾಪಕಿ ಮಂಗಳ ಪಾಲ್ಗೊಳ್ಳುವರು.

ವಿಶೇಷ ಆಹ್ವಾನಿತರಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ನಿವೃತ್ತ ಪೆÇಲೀಸ್ ಅಧಿಕಾರಿ ಗೋಪಾಲ್ ಹೊಸೂರು, ಬಂಟರ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ , ಹೆರಿಟೇಜ್ ವೈನರಿ ಮುಖ್ಯಸ್ಥ ವೆಂಕಟರಾಮ ರೆಡ್ಡಿ , ರೈತ ಮುಖಂಡ ಸತೀಶ್ ಕಡತನಮಲೆ, ಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಭಾಗವಹಿಸುವರು.

ಅಂದು 7 ಗಂಟೆಗೆ ವಚನ ವಿಶೇಷ ಕಾರ್ಯಕ್ರಮದಲ್ಲಿ ಸ್ಪರ್ಶ ಆರ್.ಕೆ.ಗಾನಲಹರಿ ಪ್ರಸ್ತುತಪಡಿಸುವರು.
ನಂತರ ಗಿರೀಶ್ ಕಾರ್ನಾಡ್ ವಿರಚಿತ ಹಯವದನ ನಾಟಕ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಪ್ರಸಾರಗೊಳ್ಳಲಿದೆ.
13ರಂದು ನಡೆಯುವ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಟ ವಿಜಯ್ ರಾಘವೇಂದ್ರ, ಚಿಂತಕರಾದ ಡಾ.ವಿಜಯಮ್ಮ ಮತ್ತಿತರರು ಪಾಲ್ಗೊಳ್ಳುವ ಜೊತೆಗೆ ಅನುಭವಿ ಗೀತೆಗಳನ್ನು ಸುಮ ಶಾಸ್ತ್ರಿ ಹಾಡಲಿದ್ದಾರೆ. ಕೂಲಿ ಹಿಡಿದ ಕಡಸು ಎಂಬ ನಾಟಕ ನಂಜುಂಡೇಗೌಡ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

14ರಂದು ಪಂಚಮಶಾಲಿ ಪೀಠ ಜಯ ಮೃತ್ಯುಂಜಯ ಸ್ವಾಮೀಜಿ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಶಾಸಕಿ ಸೌಮ್ಯ ರೆಡ್ಡಿ , ಚಲನಚಿತ್ರ ನಟ ಅನಿರುದ್ಧ , ಪತ್ರಕರ್ತ ಮಂಜುನಾಥ್ ಅದ್ಧೆ ಮತ್ತಿತರರು ಭಾಗವಹಿಸುವರು.
ಅಂದು ಸಂಜೆ ಅವತರಿಸು ಬಾ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಸಹೋದರರಾದ ಪ್ರವೀಣ್ ಮತ್ತು ಪ್ರದೀಪ್ ತಮ್ಮ ಗಾನಸುಧೆ ಹರಿಸಲಿದ್ದಾರೆ.ರಾಜಗುರು ಹೊಸಕೊಟೆ ನಿರ್ದೇಶನದ ಶರೀಫ ನಾಟಕ ಪ್ರದರ್ಶನ ನಡೆಯಲಿದೆ.

15ರಂದು ಮಾಜಿ ಸಚಿವ ಎಚ್.ಡಿ.ಮಹದೇವಪ್ಪ, ಶಾಸಕ ಡಾ. ಅಶ್ವಥ್ ನಾರಾಯಣ್, ಮಾಜಿ ಶಾಸಕ ಆರ್.ವಿ.ದೇಶಪಾಂಡೆ, ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಪಾಲ್ಗೊಳ್ಳಲಿದ್ದು ಅಂದು ಸಂಜೆ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಅನುರಾಧ ಭಟ್ ಕಾರ್ಯಕ್ರಮ ನೀಡಲಿದ್ದಾರೆ. ಮಂಜುನಾಥ್ ಬೆಳಕೆರೆ ವಿರಚಿತ ನನ್ನೊಳು ನೀ, ನಿನ್ನೊಳು ನಾ ಎಂಬ ನಾಟಕ ಬಿತ್ತರಗೊಳ್ಳಲಿದೆ.

16ರಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ವಹಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವರು. ಬಿಜೆಪಿ ನಾಯಕಿ ತಾರಾ ಅನುರಾಧ, ರಂಗಕರ್ಮಿ ಮಂಡ್ಯ ರಮೇಶ್, ಮಾಜಿ ಶಾಸಕ ಪ್ರಿಯಕೃಷ್ಣ, ಕಾಂಗ್ರೆಸ್ ಮುಖಂಡರಾದ ನಟರಾಜ್ ಗೌಡ, ಚಿತ್ರ ಸಾಹಿತಿ ಕವಿರಾಜ್, ಹಿರಿಯ ಪೆÇಲೀಸ್ ಅಧಿಕಾರಿ ಡಿಸಿಪಿ ದೇವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ರಾಮಚಂದ್ರ ಹಡಪದ ಅವರಿಂದ ಗಜಲ್ ನಡೆಯಲಿದ್ದು, ರಾಜಗುರು ಹೊಸಕೋಟೆ ನಿರ್ದೇಶನದ ಗುಲಾಬಿ ಗ್ಯಾಂಗ್ ಪ್ರದರ್ಶನಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ