ವಲ್ಲಭಭಾಯ್ ಪಟೇಲ್ ಜನ್ಮ ಜಯಂತಿ ಪ್ರಯುಕ್ತ ಏಕತಾ ಓಟ

ಬೆಂಗಳೂರು,ಅ.31- ಅಖಂಡ ಭಾರತ ಒಂದಾಗಬೇಕೆಂಬುದು ಎಲ್ಲರ ಭಾವನೆ. ದೇಶದ ಜನರನ್ನು ಒಂದು ಮಾಡಬೇಕು ಎನ್ನುವುದು ಸರ್ದಾರ್ ವಲ್ಲಭಬಾಯ್ ಪಟೇಲರ ಒತ್ತಾಸೆಯಾಗಿತ್ತು. ಹಾಗಾಗಿ ಅವರ ಆಸೆಯಂತೆ ದೇಶದ ಯುವಕರು ಒಂದಾಗಲಿ ಎನ್ನುವುದೇ ಏಕತಾ ಓಟ ಕಾರ್ಯಕ್ರಮದ ಉದ್ದೇಶ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಉಕ್ಕಿನಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲ್ ಜನ್ಮದಿನ ಹಿನ್ನೆಲೆಯಲ್ಲಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿದರು.

500ಕ್ಕಿಂತ ಹೆಚ್ಚು ಸಾಮಂತ ರಾಜರನ್ನ ಒಂದು ಮಾಡಿ ಅಖಂಡ ಭಾರತ ನಿರ್ಮಿಸಿದವರು ಸರ್ದಾರ್ ಪಟೇಲರು.ದೇಶದಲ್ಲಿ ಏಕತೆ ರೂಪಿಸುವುದು, ಒಗ್ಗಟ್ಟಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಕೂಡ ಹೌದು.ರಾಜ್ಯ ರಾಜ್ಯಗಳ ಮಧ್ಯೆ ಬೇರೆ ವಾದ ವಿವಾದಗಳು ಬರಬಹುದು. ಹಾಗಾಗಿ ಅದನ್ನು ಒಟ್ಟು ಗೂಡಿಸುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ರೆಡ್ಡಿ ವಿರುದ್ಧ ಬಿಜೆಪಿ ಅಸಮಾಧಾನ: ಪುತ್ರನ ಸಾವಿನ ವಿಷಯ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧ ಸ್ವಪಕ್ಷೀಯ ನಾಯಕರಿಂದಲೇ ತೀವ್ರ ಅಸಮಧಾನ ವ್ಯಕ್ತವಾಗಿದ್ದು, ಚುನಾವಣಾ ಪ್ರಚಾರಕ್ಕೆ ರೆಡ್ಡಿ ಇಂತಹ ವಿಷಯ ಬಳಸಿಕೊಂಡಿರುವುದಕ್ಕೆ ಕಿಡಿಕಾರಿದ್ದಾರೆ.

ನನ್ನ ಪ್ರಕಾರ ರಾಜಕೀಯ ವಿಷಯದಲ್ಲಿ ಚುನಾವಣಾ ಭಾಷಣದ ಮಟ್ಟವನ್ನು ಮತ್ತೊಮ್ಮೆ ಅವಲೋಕಿಸಬೇಕಿದೆ.ಯಾವುದೇ ರೀತಿಯಿಂದ ಕೆಳಗೆ ಬೀಳದಂತೆ, ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳೋದು ಎಲ್ಲರ ಕರ್ತವ್ಯ.ಜನಾರ್ಧನ ರೆಡ್ಡಿ ಖುದ್ದು ಸ್ಪಷ್ಟನೆ ನೀಡಿದ್ದಾರೆ. ಆದರೂ ಇಂತಹ ಹೇಳಿಕೆ ಸಲ್ಲದು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಪುತ್ರ ಸಾವಿನ ವಿಚಾರ ಕುರಿತ ಜನಾರ್ಧನ ರೆಡ್ಡಿ ಹೇಳಿಕೆಗೆ ಸಂಸದ ಪಿ.ಸಿ.ಮೋಹನ್ ಕೂಡ ಗರಂ ಆದರು. ಚುನಾವಣೆಯಲ್ಲಿ ಸಾಧನೆ ಬಗ್ಗೆ ಚರ್ಚೆ ಆಗಲಿ.ಅದು ಬಿಟ್ಟು ಕುಟುಂಬದ ಸಾವಿನ ಕುರಿತು ನೋವಾಗುವ ರೀತಿ ಭಾಷಣ ಮಾಡೋದು ತಪ್ಪು.ಇದರಿಂದ ರಾಜಕಾರಣಿಗಳ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಾರೆ.ಜನಾರ್ಧನ ರೆಡ್ಡಿ ಆ ಪದವನ್ನ ಉಪಯೋಗಿಸಬಾರದಿತ್ತು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ