ಕ್ವಿಕ್ ಹೀಲ್ ಟೋಟಲ್ ಸೆಕ್ಯೂರಿಟಿ ಫೆಸ್ಟಿವ್ ಪ್ಯಾಕ್ ಬಿಡುಗಡೆ

ಬೆಂಗಳೂರು, ಅ.28- ಮಾಹಿತಿ ತಂತ್ರಜ್ಞಾನ ಸೇವೆ ಮತ್ತು ಪರಿಹಾರಗಳನ್ನು ಒದಗಿಸುವ ಕ್ವಿಕ್ ಹೀಲ್ ಟೆಕ್ನಾಲಜೀಸ್ ಸಂಸ್ಥೆಯು ಕ್ವಿಕ್ ಹೀಲ್ ಟೋಟಲ್ ಸೆಕ್ಯೂರಿಟಿ ಫೆಸ್ಟಿವ್ ಪ್ಯಾಕ್ ಬಿಡುಗಡೆ ಮಾಡಿದೆ.

ಈ ಪ್ಯಾಕ್ ಮೂಲಕ ಗ್ರಾಹಕರ ಇನ್ನೂ ನಾಲ್ಕು ತಿಂಗಳ ಸೇವೆ ಪಡೆಯಬಹುದಾಗಿದೆ. ಮುಖ್ಯವಾಗಿ ದೀಪಾವಳಿ (ನವೆಂಬರ್ 4ರಿಂದ ನವೆಂಬರ್ 10), ಕ್ರಿಸ್ ಮಸ್ (ಡಿಸೆಂಬರ್ 25) ಮತ್ತು ಹೊಸ ವರ್ಷ (ಡಿಸೆಂಬರ್ 31) ರವರೆಗೆ ಈ ಸೇವೆ ಇರಲಿದೆ.

ಹಬ್ಬದ ಋತುವಿನ ಅಂಗವಾಗಿ ಬಹುತೇಕ ಸಂಸ್ಥೆಗಳು ವಿವಿಧ ಕೊಡುಗೆಗಳನ್ನು ಘೋಷಿಸಿರುವುದರಿಂದ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ ವಸ್ತುಗಳನ್ನು ಖರೀದಿಸುವ ಆನ್‍ಲೈನ್ ವಹಿವಾಟುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತವೆ. ಹೀಗಾಗಿ ಸೂಕ್ತ ಸುರಕ್ಷತೆ ಇಲ್ಲದೇ ಆನ್ ಲೈನ್ ವಹಿವಾಟು ನಡೆಸುವುದು ಗ್ರಾಹಕರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಇದು ಅಪಾಯ ತಂದೊಡ್ಡುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ ಯಾವುದೇ ಕುತಂತ್ರಾಂಶಗಳ ಹಾವಳಿಗೆ ಒಳಗಾಗದಂತೆ ಸುರಕ್ಷಿತವಾಗಿ ಆನ್ ಲೈನ್ ವಹಿವಾಟು ನಡೆಸಲು ಕ್ವಿಕ್ ಹೀಲ್ ಸಂಸ್ಥೆಯು ಟೋಟಲ್ ಸೆಕ್ಯೂರಿಟಿ ಫೆಸ್ಟೀವ್ ಪ್ಯಾಕ್ ಬಳಕೆಗೆ ತಂದಿದೆ.

ಕೇವಲ ಸುರಕ್ಷಿತ ಬ್ಯಾಂಕಿಂಗ್‍ಗೆ ಅಷ್ಟೇ ಅಲ್ಲದೇ, ಪ್ಯಾರೆಂಟಲ್ ಕಂಟ್ರೋಲ್, ರಾನ್ಯಸಮ್ ವೇರ್, ದತ್ತಾಂಶ ಕಳವು, ಫೈರ್ ವಾಲ್, ಪಿಸಿ ಟರ್ನರ್‍ನಂತಹ ಹಲವು ಸಮಸ್ಯೆಗಳಿಂದ ರಕ್ಷಿಸುವಂತಹ ಹಲವು ವಿಧಧ ಸುರಕ್ಷತಾ ಕ್ರಮಗಳನ್ನು ಬಳಕೆಗೆ ತರುತ್ತಿದೆ ಎಂದು ಕ್ವಿಕ್ ಹೀಲ್ ಟೆಕ್ನಾಲಜೀಸ್ ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ ವಿಜಯ್ ಮಷ್ಕರ್ ತಿಳಿಸಿದ್ದಾರೆ.

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನರಿಂದ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ: ಸಿಸಿಟಿವಿ ದೃಶ್ಯ ಬಹಿರಂಗ
ಬೆಂಗಳೂರು, ಅ.28- ನಟ ದುನಿಯಾ ವಿಜಯ್ ಅವರ ಕುಟುಂಬ ಕಲಹ ದಿನದಿಂದ ದಿನಕ್ಕೆ ಹೊಸ ತಿರುವುಗಳೊಂದಿಗೆ ತೀವ್ರತೆ ಪಡೆದುಕೊಳ್ಳುತ್ತಿದೆ. ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿ ಇದೀಗ ಹೊರಬಿದ್ದಿದೆ.
ಕೈಯಲ್ಲಿ ಚಪ್ಪಲಿ ಹಿಡಿದು ಏಕಾಏಕಿ ಹೊಸಕೆರೆ ಹಳ್ಳಿಯಲ್ಲಿ ಇರುವ ಪತಿ ದುನಿಯಾ ವಿಜಿ ಮನೆಗೆ ನುಗ್ಗಿದ್ದ ನಾಗರತ್ನ, ಒಳಗೆ ಕುಳಿತಿದ್ದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾಗರತ್ನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ. ನಟ ವಿಜಯ್ ಅವರ ಮನೆಗೆ ಪೆÇಲೀಸರು ಭೇಟಿ ನೀಡಿ ಹೇಳಿಕೆ ಪಡೆದುಕೊಂಡಿದ್ದಾರೆ.
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿಗೌಡರನ್ನು ಅಪಹರಣ ಮಾಡಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ವಿಜಯ್ ನ್ಯಾಯಾಂಗ ಬಂಧನದಲ್ಲಿದ್ದರು. ಸೆ.23ರಂದು ಕೀರ್ತಿಗೌಡ ಮನೆಗೆ ಬಂದಿದ್ದ ನಾಗರತ್ನ ಚಪ್ಪಲಿಯಿಂದ ಏಕಾಏಕಿ ಹಲ್ಲೆ ನಡೆಸಿದ್ದರು. ತಾವೇ ಹಲ್ಲೆ ಮಾಡಿದ್ದರೂ ಗಿರಿನಗರ ಪೆÇಲೀಸರಿಗೆ ಕೀರ್ತಿಗೌಡ ನನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ, ದೂರು ನೀಡಿದ್ದರು.
ಈ ಬಗ್ಗೆ ವಿಜಯ್ ಅವರ ವಕೀಲ ಶಿವಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದ ನಾಗರತ್ನ ಅವರೇ ಕೀರ್ತಿಗೌಡ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ವಿಜಯ್ ತನ್ನ ಮಕ್ಕಳನ್ನು ಯಾವತ್ತೂ ದೂರ ಮಾಡಿಲ್ಲ. ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ನಾಗರತ್ನ ಅವರಿಂದ ವಿಜಯ್ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಆದ್ದರಿಂದ ಪೆÇಲೀಸರು ವಿಜಯ್‍ಗೆ ನ್ಯಾಯ ದೊರಕಿಸಿಕೊಡಬೇಕು. ನಾಗರತ್ನ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಗೌಡ ಮಾತನಾಡಿ, ನನ್ನನ್ನು ಸಾಯಿಸುವ ಉದ್ದೇಶದಿಂದ ನಾಗರತ್ನ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದವರು ನನ್ನನ್ನು ರಕ್ಷಿಸಿದರು. ಪುತ್ರಿ ಮೋನಿಕಾ ಮತ್ತು ನಾಗರತ್ನ ಯೋಜನೆ ರೂಪಿಸಿ ನಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೀರ್ತಿಗೌಡ ಅವರ ಮೇಲೆ ಹಲ್ಲೆ ನಡೆಸಿದ್ದ ನಾಗರತ್ನ ಅವರು ಪುತ್ರಿ ಮೋನಿಕಾ ಮೂಲಕ, ಕೀರ್ತಿ ಗೌಡ ಮತ್ತು ವಿಜಯ್ ಅವರ ವಿರುದ್ಧವೇ ಗಿರಿನಗರ ಪೆÇಲೀಸರಿಗೆ ದೂರು ನೀಡಿದ್ದರು. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ದುನಿಯಾ ವಿಜಯ್ ಮಾತನಾಡಿ, ನನ್ನ ಕುಟುಂಬದ ವಿರುದ್ದ ವ್ಯವಸ್ಥಿತ ಸಂಚು ರೂಪಿಸಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕೀರ್ತಿ ಗೌಡ ಅವರ ವಿರುದ್ಧವೇ ನಾಗರತ್ನ ಹಲ್ಲೆ ನಡೆಸಿದ್ದಾರೆ. ನನ್ನ ಮಕ್ಕಳನ್ನು ಇಟ್ಟುಕೊಂಡು ಅವರು ನಾಟಕವಾಡುತ್ತಿದ್ದಾರೆ. ಈ ಎಲ್ಲಾ ನಾಟಕಗಳನ್ನು ಶೀಘ್ರವೇ ಬೆಳಕಿಗೆ ತರುತ್ತೇನೆ ಎಂದು ತಿಳಿಸಿದ್ದಾರೆ.

ನಾಗರತ್ನ ಅವರ ಸಹೋದರ ಕೂಡ ಬೆದರಿಕೆ ಹಾಕಿದ್ದು, ಕೀರ್ತಿ ಗೌಡ ಅವರನ್ನು ಸಾಯಿಸುವುದಾಗಿ ಹೇಳಿದ್ದಾನೆ ಎಂದು ವಿಜಯ್ ಆರೋಪಿಸಿದರು.
ಈ ಮಧ್ಯೆ ನಟ ದುನಿಯಾ ವಿಜಯ್ ಕುಟುಂಬ ಕಲಹದಿಂದ ಬೇಸತ್ತಿರುವ ಗಿರಿನಗರ ಪೆÇಲೀಸರು ವಿಜಯ್ ಹಾಗೂ ನಾಗರತ್ನ ಕುಟುಂಬದ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

107 ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು, ದೂರು ಮತ್ತು ಪ್ರತಿದೂರು ನೀಡಿರುವ ವಿಜಯ್ ಹಾಗೂ ನಾಗರತ್ನ ಕುಟುಂಬಕ್ಕೆ ಪಾಠ ಕಲಿಸಲು ಮುಂದಾಗಿದ್ದು, ಇಬ್ಬರನ್ನು ಬಂಧಿಸುವ ಸಾಧ್ಯತೆಯೂ ಇದೆ.

ಈ ಎರಡು ಕುಟುಂಬ ಸದಾ ಬೀದಿ ರಂಪಾಟ ಮಾಡಿಕೊಳ್ಳುತ್ತಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಸೆಲೆಬ್ರೆಟಿಗಳು ಸಮಾಜಕ್ಕೆ ಮಾದರಿ ಆಗಬೇಕು. ಆದರೆ ಇವರ ಕುಟುಂಬ ಮಾತ್ರ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಹೀಗಾಗಿ ನಾಗರತ್ನ ಹಾಗೂ ದುನಿಯಾ ವಿಜಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ನಾಗರತ್ನ ಅವರ ಕತ್ರಿಕುಪ್ಪೆಯ ಮನೆಗೆ ಬೀಗ ಹಾಕಲಾಗಿದೆ. ನಾಗರತ್ನ ಅವರನ್ನು ಪೆÇಲೀಸರು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರು ಮನೆಗೆ ಬೀಗ ಹಾಕಿ ಬೇರೆಗೆ ಹೋಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ