ಅ.31 ಸರ್ದಾರ್ ವಲ್ಲಭ ಬಾಯಿ ಪಟೇಲ್ ರ ಏಕತಾ ಪ್ರತಿಮೆ ಅನಾವರಣ

ನವದೆಹಲಿ: ಭಾರತದ ಮೊದಲ ಗೃಹ ಸಚಿವ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 31 ರಂದು ಅನಾವರಣಗೊಳಿಸಲಿದ್ದಾರೆ.

ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಇದು. ಗುಜರಾತ್ ಮೂಲದ ಸರ್ದಾರ್ ಅವರ ಬೃಹತ್ ಪ್ರತಿಮೆ ನಿರ್ಮಿಸಬೇಕೆಂಬ ಕನಸಿನೊಂದಿಗೆ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕನಸೀಗ ಸಾಕಾರಗೊಂಡಿದೆ.

ನರೇಂದ್ರ ಮೋದಿ ಅವರ ಕಲ್ಪನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಕೇವಲ ಪ್ರತಿಮೆಯಾಗಿರದೆ ಶೈಕ್ಷಣಿಕ, ಐತಿಹಾಸಿಕ, ರಾಷ್ಟ್ರೀಯ, ಆಧ್ಯಾತ್ಮ ಮೌಲ್ಯಗಳೊಂದಿಗೆ ಪ್ರವಾಸಿ ತಾಣವಾಗಿ ಜಗತ್ಪ್ರ್ರಸಿದ್ಧ ಕೆಲವೇ ಸ್ಮಾರಕಗಳ ನಡುವೆ ಒಂದಾಗಿ ಗಮನಸೆಳೆಯಲಿದೆ.
182 ಮೀಟರ್ ಎತ್ತರದ ಪ್ರತಿಮೆ ಇದಾಗಿದ್ದು, 2389 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಈ ಪ್ರತಿಮೆ ಎದ್ದುನಿಂತಿದೆ. ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 3400 ಕಾರ್ಮಿಕರು ಹಾಗೂ 250 ಎಂಜಿನಿಯರ್‍ಗಳು ಹಗಲು- ರಾತ್ರಿ ಎನ್ನದೇ ದುಡಿದಿದ್ದಾರೆ.ಈ ಪ್ರತಿಮೆಯಲ್ಲೇ ವೀಕ್ಷಣಾ ಸ್ಥಳವೂ ಇರಲಿದೆ. 153 ಮೀಟರ್ ಎತ್ತರದಲ್ಲಿ ಒಮ್ಮೆಲೆ 200 ಮಂದಿ ವೀಕ್ಷಿಸಲು ಅವಕಾಶವಿರುತ್ತದೆ. ಅಲ್ಲಿಗೆ ಜನರನ್ನು ಕರೆದೊಯ್ಯಲು ಎರಡು ಲಿಫ್ಟ್‍ಗಳು ಕೂಡ ಇರುತ್ತವೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು 2013ರ ಅ.31ರಂದು ಏಕತಾ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಪ್ರತಿಮೆಗಾಗಿ ದೇಶಾದ್ಯಂತ ರೈತರಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು. 2014ರ ಡಿ.3ರಂದು ಪ್ರತಿಮೆ ನಿರ್ಮಾಣ ಗುತ್ತಿಗೆಯನ್ನು ಎಲ್ ಆ?ಯಂಡ್ ಟಿ ಕಂಪನಿಗೆ ವಹಿಸಲಾಗಿತ್ತು. 42 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕ್ಲಿಷ್ಟಕರ ವಿನ್ಯಾಸ ಹಂತದಲ್ಲಿ ಸಾಕಷ್ಟು ಸಮಯ ಹಿಡಿದಿದ್ದರಿಂದ ಗಡುವು ಕೆಲ ತಿಂಗಳು ಮುಂದಕ್ಕೆ ಹೋಗಿತ್ತು.ಕಾಮಗಾರಿ ಪೂರ್ಣಗೊಂಡ ಬಳಿಕ ನಿತ್ಯ 15 ಸಾವಿರ ಪ್ರವಾಸಿಗರು ಏಕತಾ ಪ್ರತಿಮೆ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ. ಪ್ರವಾಸಿಗರಿಗಾಗಿ ತ್ರಿ ಸ್ಟಾರ್ ಹೋಟೆಲ್ ಹಾಗೂ ಟೆಂಟ್‍ಗಳನ್ನೂ ನಿರ್ಮಾಣ ಮಾಡಲಾಗಿದೆ.

ಉತ್ಕೃಷ್ಟ ಪ್ರತಿಮೆ
ಸರದಾರ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಹೇಳುವಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಸಹಜ ಕೊಡುಗೆಯೊಂದಿಗೆ ನಡೆಯುವ ಭಂಗಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಸಹಜ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ.ಕಂಚಿನ ಲೇಪನ ಮೂರ್ತಿಗೆ ಮೆರಗು ನೀಡಲಿದೆ. ಇನ್ನು ಪ್ರತಿಮೆಯು ಮೂರು ಅಂತಸ್ತಿನಿಂದ ಕೂಡಿದ್ದು, ತಳಭಾಗ ಪ್ರದರ್ಶನ ಮಹಡಿ, ಪ್ರದರ್ಶನ ತಳಮನೆ, ನಡುಮನೆ ಮತ್ತು ಮೇಲ್ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಸ್ಮಾರಕ, ಉದ್ಯಾನ ಮತ್ತು ಅದ್ಬುತ ಪ್ರದರ್ಶನದ ಸಭಾಂಗಣವಿದೆ.

ಸುಮಾರು 200 ಜನ ಏಕಕಾಲದಲ್ಲಿ ನಿಂತು ವೀಕ್ಷಿಸಲು ಅನುಕೂಲವಾಗುವಂತೆ ವೀಕ್ಷಣಾ ಮಹಡಿ(ಪ್ರೇಕ್ಷಕರ ಗ್ಯಾಲರಿ)ಯನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ಪ್ರವಾಸಿಗರು ಸತ್ಪುದ ಮತ್ತು ವಿಂದ್ಯಾಚಲ ಪರ್ವತ ಶ್ರೇಣಿ ಸರೋವರಗಳನ್ನೊಳಗೊಂಡ ನಿಸರ್ಗ ಸೌಂದರ್ಯವಲ್ಲದೆ, ಅರಬ್ಬಿ ಸಮುದ್ರವನ್ನು ವೀಕ್ಷಿಸಲು ಸಾಧ್ಯವಾಗಲಿದೆ.

ಇದೆಲ್ಲದರ ಜೊತೆಗೆ ಅತ್ಯಾಧುನಿಕ ಶೈಲಿಯ ನೀರಡಿಯ ಮತ್ಸಾಲಯ ನಿರ್ಮಿಸುವ ಉದ್ದೇಶವಿದೆ. ಇದರೊಂದಿಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಹಾಗೂ ಜನರ ಜೀವನಾಧಾರಕ್ಕೆ ಅನುಕೂಲವಾಗುವಂತೆ ಮಳಿಗೆಗಳ ಸಂಕೀರ್ಣವನ್ನು ನಿರ್ಮಾಣ ಮಾಡಿ ಅಲ್ಲಿ ಹೋಟೆಲ್, ಅಂಗಡಿ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ಪ್ರತಿಮೆ ನಿರ್ಮಾಣದ ನಂತರ ಪ್ರತಿದಿನವೂ 15 ಸಾವಿರ ಪ್ರೇಕ್ಷಕರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಅದನ್ನು ಹೆಚ್ಚಿಸುವ ಹಾಗೂ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಮಾರ್ಗದ ನಿರ್ದಿಷ್ಟ ಸ್ಥಳಗಳಲ್ಲಿ ಚಾಕ್ಷುಕ ಮತ್ತು ಶ್ರವ್ಯ ಪ್ರಾದರ್ಶಿಕೆಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಸುಮಾರು 3ಸಾವಿರ ಜನ ಪ್ರತಿಮೆಯನ್ನೇರಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ವೀಕ್ಷಣಾ ಸ್ಥಳವನ್ನು ತಲುಪಲು ಸಾಧ್ಯವಾಗಲಿದೆ.

ಇದರಲ್ಲಿ 1347 ಕೋಟಿ ರೂ. ಮುಖ್ಯ ಪ್ರತಿಮೆಗೆ ಖರ್ಚಾಗಲಿದೆ. 235 ಕೋಟಿ ರೂ. ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಗೆ ತಗಲಿದೆ. 83 ಕೋಟಿ ರೂ. ಹಣವು ಪ್ರತಿಮೆ ಮತ್ತು ಸೇತುವೆಗೆ ಸಂಪರ್ಕ ಕಲ್ಪಿಸಲು ಖರ್ಚಾಗಲಿದೆ. ಎಲ್ ಅಂಡ್ ಟಿ ಸಂಸ್ಥೆ 15 ವರ್ಷಗಳ ಕಾಲ ನಿರ್ವಹಣೆ ಹೊಣೆ ಹೊಂದಿದೆ.75 ಸಾವಿರ ಕ್ಯೂಬೆಕ್ ಮೀಟರ್ ಕಾಂಕ್ರಿಟ್, 5700 ಮೆಟ್ರಿಕ್ ಟನ್ ಕಬ್ಬಿಣ, 18,500 ಉಕ್ಕು, 22,500 ಕಂಚು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದಲೇ ವಿವಿಧ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನಿ ಮೋದಿ ಅವರು ಸರ್ದಾರ್ ಪಟೇಲ್ ಪ್ರತಿಮೆಯನ್ನು ನಿರ್ಮಿಸುವ ಕುರಿತು ಘೋಷಣೆ ಮಾಡಿದಾಗ ಪ್ರತಿಪಕ್ಷಗಳು ಟೀಕಿಸಿದ್ದವು. ಆದರೆ ಇದೀಗ ವಿಶ್ವದ ಅತ್ಯಂತ ಎತ್ತರದ ಪಟೇಲ್ ಪ್ರತಿಮೆ ನಿರ್ಮಿಸಿ ಸಾಧನೆ ಮಾಡಿದ್ದೇವೆ. ಕಾಂಗ್ರೆಸ್ ಸರ್ದಾರ್ ಪಟೇಲ್ ಅವರನ್ನು ದೂರವಿರಿಸಿತ್ತು. ಆದರೆ ಬಿಜೆಪಿ ಅವರ ಸಾಧನೆಗಳನ್ನು ಮುನ್ನೆಲೆಗೆ ತಂದಿದೆ.

2013ರ ಗುಜರಾತ್ ನಲ್ಲಿ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಆಗೀನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಮೇಲೆ ದೇಶದಾದ್ಯಂತ ಕಬ್ಬಿಣ, ಮರಳು ಮತ್ತು ನೀರನ್ನು ಒಟ್ಟು ಮಾಡಲಾಗಿತ್ತು. ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಣೆ ಮಾಡಿದಾಗ, ಇದು ಖಾಲಿ ಮಾತಷ್ಟೇ ಎಂದು ವಿರೋಧ ಪಕ್ಷಗಳು ಹೀಗಳೆದಿದ್ದವು. ಆದರೆ ಈಗ ವಿಶ್ವ ಮಟ್ಟದ ವ್ಯವಸ್ಥೆಯೊಂದಿಗೆ ತಲೆ ಎತ್ತಿದೆ.

ವಿಶೇಷತೆಗಳು
ಗುಜರಾತಿನ ನರ್ಮದಾ ಜಿಲ್ಲೆಯ ಕೇವಡಿಯಾದ ಸರ್ದಾರ ಸರೋವರ ಅಣೆಕಟ್ಟೆಯ ದಕ್ಷಿಣದಲ್ಲಿ ಸುಮಾರು 3.5 ಕಿ.ಮೀ. ದೂರದ ಸಾಧು ದ್ವೀಪದಲ್ಲಿ ನಿರ್ಮಣಗೊಂಡಿರುವ ಸರ್ದಾರ್ ವಲಭಭಾಯಿ ಪಟೇಲರ ಸುಮಾರು 182 ಮೀಟರ್ ಎತ್ತರದ ಪ್ರತಿಮೆ ಮುಗಿಲೆತ್ತರಕ್ಕೆ ನಿಂತ ವಿಂದ್ಯಾಚಲ ಮತ್ತು ಸತ್ಪುದ ಬೆಟ್ಟ ಶ್ರೇಣಿಗಳ ನಡುವೆ ಉಕ್ಕಿ ಹರಿವ ನರ್ಮದಾ ನದಿ, ವಿಶಾಲಾಗಿ ಹರಡಿಕೊಂಡಿರುವ ಗರುಡೇಶ್ವರ ಸರ್ದಾರ ಸರೋವರ ಅಣೆಕಟ್ಟು… ಹೀಗೆ ನಿಸರ್ಗ ಸೌಂದರ್ಯದ ನೆಲೆವೀಡಾಗಿರುವ ಪ್ರದೇಶವನ್ನೇ ಪ್ರತಿಮೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇನ್ನು ಈ ಪ್ರತಿಮೆ ಸುತ್ತಮುತ್ತ ಭಾರತದ ರಾಷ್ಟ್ರೀಯ ಚಳುವಳಿಯನ್ನು ನೆನಪಿಸುವ ಹಾಗೂ ಭಾರತ ಏಕೀರಣದ ಅಲ್ಲದೆ, ಸರ್ದಾರ್ ವಲ್ಲಭಭಾಯಿ ಅವರ ಕೊಡುಗೆಗಳನ್ನು ತಿಳಿಸುವ ಅತ್ಯಮೂಲ್ಯ ಮಾಹಿತಿಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಸಾಧು ದ್ವೀಪದ ನಡುವಿನ ಪ್ರತಿಮೆಗೆ ಸಂಪರ್ಕ ಕಲ್ಪಿಸಲು ಸುಂದರ ಸೇತುವೆ ಹಾಗೂ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರೇಕ್ಷಕರ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ.

ಪ್ರತಿಮೆ ನಿರ್ಮಾಣ ಪ್ರದೇಶದ ಸನಿಹವಿರುವ ಕೇವಾಡಿಯಾ ನಗರದ ಅಭಿವೃದ್ದಿಗೂ ಕ್ರಮಕೈಗೊಳ್ಳಲಾಗಿದೆ. ಸುಧಾರಿತ ರಸ್ತೆ ನಿರ್ಮಾಣ, ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಹನ ನಿಲ್ದಾಣ, ಹೋಟೆಲ್ ನಿರ್ಮಾಣವನ್ನು ಮೊದಲ ಹಂತದಲ್ಲಿ ಮಾಡಿದರೆ, ಎರಡನೇ ಹಂತದಲ್ಲಿ ಭರೂಚ ನಗರದವರೆಗೆ ನರ್ಮದಾ ನದಿಯ ಎರಡು ಬದಿಯ ದಂಡೆಗಳ ಅಭಿವೃದ್ಧಿ, ರಸ್ತೆ, ರೈಲು, ಹೆಲಿಪ್ಯಾಡ್ ನಿರ್ಮಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸುವುದು, ಗರುಡೇಶ್ವರದಿಂದ ಬಾಡಬೂತ್ವರೆಗೆ ಪ್ರವಾಸ ಮಾರ್ಗ, ಸ್ವಚ್ಛ ತಾಂತ್ರಿಕ ಸಂಶೋಧನಾ ಸಂಕೀರ್ಣ ಮತ್ತು ಕೃಷಿ ತರಬೇತಿ ಕೇಂದ್ರಗಳನ್ನು ನಿರ್ಮಾಣ ಮಾಡುವುದರೊಂದಿಗೆ ಪ್ರತಿಮೆ ತಲೆ ಎತ್ತಲಿರುವ ಸ್ಥಳ ಕೇವಲ ಪ್ರವಾಸಿ ತಾಣ ಮಾತ್ರವಾಗಿರದೆ, ಸಕಲ ರೀತಿಯಲ್ಲೂ ಅಭಿವೃದ್ಧಿ ಹೊಂದಿದ ಪ್ರದೇಶವಾಗ ಬೇಕೆಂಬುದು ಸರದಾರ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ನ ಉದ್ದೇಶವಾಗಿತ್ತು.

ವಿಶ್ವದ ಅತಿ ಎತ್ತರದ ಪ್ರತಿಮೆ!
ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನೆರವೇರಿದರೆ ಸ್ಟ್ಯಾಚ್ಯೂ ಆಫ್ ಯೂನಿಟಿ ನ್ಯೂಯಾರ್ಕ್ ನಲ್ಲಿರುವ ಸ್ವಾತಂತ್ರ್ಯ ಮೂರ್ತಿಗಿಂತ ಎರಡುಪಟ್ಟು ಹಾಗೂ ರಿಯೊ-ಡಿ-ಜನೈರೋದಲ್ಲಿರುವ ವಿಮೋಚಕ ಕ್ರಿಸ್ತನ ಮೂರ್ತಿಯ ಎತ್ತರಕ್ಕಿಂತ ಐದು ಪಟ್ಟು ಎತ್ತರವನ್ನು ಹೊಂದಲಿದೆಯಲ್ಲದೆ, ಆ ಮೂಲಕ ವಿಶ್ವದಲ್ಲಿರುವ ಎಲ್ಲಾ ಪ್ರತಿಮೆಗಳಿಗಿಂತ ಅತಿ ಹೆಚ್ಚು ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಸದ್ಯ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಚೀನಾದಲ್ಲಿದೆ. ಅಲ್ಲಿನ ಲೂಶಾನ್‍ನಲ್ಲಿರುವ ಬುದ್ಧನ ಪ್ರತಿಮೆ 128 ಮೀಟರ್ ಎತ್ತರವಿದೆ.
ಗುಜರಾತಿನ ಏಕತಾ ಪ್ರತಿಮೆಯು ಚೀನಾ ಬುದ್ಧನ ಪ್ರತಿಮೆಗಿಂತ 54 ಮೀಟರ್ ಅಧಿಕ ಎತ್ತರದ್ದಾಗಿದೆ.

ಭೂಕಂಪ, ಬಿರುಗಾಳಿಯನ್ನೂ ಏಕತಾ ಪ್ರತಿಮೆ ತಡೆದುಕೊಳ್ಳಬಹುದು. ಇದರ ನಿರ್ಮಾಣಕ್ಕೆ 22500 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.

ಎಲ್ಲಿದೆ ಪ್ರತಿಮೆ
ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 1 ಕಿ.ಮೀ ದೂರದಲ್ಲಿರುವ ¾ಸಾಧು ಬೆಟ್¿ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಈ ಪ್ರತಿಮೆ ನಿರ್ಮಾಣದ ಹಿಂದೆ 250 ಎಂಜಿನಿಯರ್‍ಗಳು ಹಾಗೂ 3,400 ಕಾರ್ಮಿಕರ ಸತತ ಪರಿಶ್ರಮದ ಫಲವಿದೆ.

ಎಲ್ ಆ?ಯಂಡ್ ಟಿ ಹೆಗ್ಗಳಿಕೆ
ನ್ಯೂಯಾರ್ಕ್‍ನ ¾ಲಿಬರ್ಟಿ ಆಫ್ ಸ್ಟ್ಯಾಚ್ಯು¿ವಿನ ಎತ್ತರದ (93 ಮೀಟರ್) ದಾಖಲೆಯನ್ನು ಅಳಿಸಿಹಾಕಲಿರುವ ¾ಯುನಿಟಿ ಆಫ್ ಸ್ಟ್ಯಾಚ್ಯು¿ವಿನ ಯೋಜನಾ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದು ಎಲ್ ಆ?ಯಂಡ್ ಟಿ ಕಂಪನಿ.

182 ಮೀಟರ್ ಏಕೆ?
ಗುಜರಾತ್‍ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿದ್ದು, ಇದರ ರೂಪಕವಾಗಿ ಪ್ರತಿಮೆಯ ಎತ್ತರವನ್ನು ಇಷ್ಟಕ್ಕೇ ನಿರ್ದಿಷ್ಟಗೊಳಿಸಲಾಗಿದೆ. ಅಂದಹಾಗೆ, 7 ಕಿ.ಮೀ ದೂರದಿಂದಲೇ ಪ್ರತಿಮೆಯನ್ನು ಗುರುತಿಸಬಹುದಾಗಿದೆ.

ಯೋಜನೆಗೆ ಖರ್ಚಾದ ಮೊತ್ತ : 2,389 ಕೋಟಿ ರೂ.
ಮುಂದಿನ ದಿನಗಳಲ್ಲಿ ಈ ತಾಣಕ್ಕೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ಅಂದಾಜು ಸಂಖ್ಯೆ : 15 ,000
ಮೊದಲ ಹಂತದ ಯೋಜನಾ ವಿಸ್ತಾರ ಪ್ರದೇಶ : 19,000 ಚ.ಮೀ.
ಬಳಸಿರುವ ಸಿಮೆಂಟ್ : 90,000 ಟನ್
ಬಳಸಿರುವ ಉಕ್ಕು : 25,000 ಟನ್
ಏನೆಲ್ಲಾ ಇಲ್ಲಿದೆ
52 ಕೊಠಡಿಗಳ ¾ಶ್ರೇಷ್ಠ ಭಾರತ್ ಭವನ್¿ ಹೋಟೆಲ್, 250 ಟೆಂಟ್‍ಗಳಿರುವ ¾ಟೆಂಟ್ ಸಿಟಿ¿.
ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯ.
306 ಮೀಟರ್ ಉದ್ದದ ಮಾರ್ಬಲ್ ಫೆÇ್ರೀ ವಾಕ್‍ವೇ. ವೀಕ್ಷಣಾ ಗ್ಯಾಲರಿ.
ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೊ ಗ್ಯಾಲರಿ, ಸಂಶೋಧನಾ ಕೇಂದ್ರ.
ಪ್ರತಿಮೆಗೆ ಲೇಸರ್ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿ ಪ್ರದರ್ಶನ.

ಬಾಲ್ಯ ಜೀವನ
ಸರ್ದಾರ್ ವಲ್ಲಭಭಾಯ್ ಪಟೇಲ್ (ಅಕ್ಟೋಬರ್ 31, 1875 – ಡಿಸೆಂಬರ್ 15, 1950) ಉಕ್ಕಿನ ಮನುಷ್ಯ – ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ. ಇವರು ಗಾಂಧೀಜಿಯವರ ಕೆಳಗೆ ಭಾರತೀಯ ರಾಷ್ಟೀಯ ಕಾಂಗ್ರೆಸ್‍ನ ಮುಖ್ಯ ನಿರ್ವಾಹಕರು ಇವರೇ ಆಗಿದ್ದರು. ಇವರ ಪ್ರಯತ್ನಗಳಿಂದಲೇ 1937ರ ಮತದಾನದಲ್ಲಿ ಕಾಂಗ್ರೆಸ್ 100% ಜಯವನ್ನು ಸಾಧಿಸಿತು. ವಸ್ತುಶಃ ಸರ್ದಾರ್ ಪಟೇಲ್‍ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಗೆ ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ 31 ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.

ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲರು ಶಾಲೆ ಸೇರಿದ್ದು ತಡವಾಗಿ. ಇವರ ಕುಟುಂಬದವರು ಅವರ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನಾಗಲೀ, ಅದಕ್ಕೆ ಬೆಂಬಲವನ್ನಾಗಲೀ ಕೊಟ್ಟಂತೆ ಕಾಣುವುದಿಲ್ಲ. ನಡಿಯಾದಿನಿಂದ, ಪೇಟ್ಲಾಡ್, ಹಾಗೂ ಮುಂದೆ ಬೋರ್ಸಾಡ್ ಎಂಬಲ್ಲಿ ಅವರ ವಿದ್ಯಾಭ್ಯಾಸ ಮುಂದುವರಿಯಿತು.

ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ ! ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಸ್ವತಃ ಪಟೇಲರಿಗೆ ಪ್ಲೀಡರ್ ಪರೀಕ್ಷೆ ಪಾಸು ಮಾಡಿ ವಕೀಲರಾಗಬೇಕೆಂದು ಅಪೇಕ್ಷೆಯಿತ್ತು. ಅದಕ್ಕಾಗಿ ಹಣ ಒಟ್ಟುಮಾಡಿ , ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.

ಜೀವನ
ನಂತರ ಪಟೇಲರು, ಹೆ0ಡತಿ ಝವೇರಬಾರೊಂದಿಗೆ, ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು, ಸಂಸಾರ ಹೂಡಿದರು. ಅವರಿಗೆ ಇಬ್ಬರು ಮಕ್ಕಳಾದರು. 1904ರಲ್ಲಿ ಮಣಿ ಎಂಬ ಮಗಳು ಮತ್ತು 1906ರಲ್ಲಿ ದಹ್ಯಾ ಎಂಬ ಮಗ. ಬ್ಯುಬೋನಿಕ್ ಪ್ಲೇಗಿನಿಂದ ನರಳುತ್ತಿದ್ದ ಗೆಳೆಯನೊಬ್ಬನ ಆರೈಕೆ ಮಾಡುತ್ತ, ಪಟೇಲರು ಸ್ವತಃ ಆ ರೋಗಕ್ಕೆ ತುತ್ತಾದಾಗ, ತಮ್ಮ ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ, ತಮ್ಮ ಮನೆಯನ್ನು ತ್ಯಜಿಸಿ, ನಡಿಯಾದಿನ ಮನೆಯೊಂದರಲ್ಲಿ ( ಪಾಳುಬಿದ್ದ ದೇವಸ್ಥಾನ ಎಂದೂ ಕೆಲವರು ಹೇಳುತ್ತಾರೆ) ಚೇತರಿಕೊಳ್ಳುವವರೆಗೆ ನೆಲೆಸಿದರು. 1909ರಲ್ಲಿ ಅವರ ಪತ್ನಿ ತೀರಿಕೊಂಡರು. ಪಟೇಲರ ಅಂತರ್ಮುಖಿ ಸ್ವಭಾವದಿಂದ ಅವರ ಹೆಂಡತಿಯ ಬಗ್ಯೆ ಸಾರ್ವಜನಿಕರಿಗೆ ತಿಳಿದಿರುವುದು ಅತ್ಯಲ್ಪ. ಪಟೇಲರು ಮರುಮದುವೆ ಮಾಡಿಕೊಳ್ಳಲಿಲ್ಲ.
ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಲೇ , ಪಟೇಲರು ಇಂಗ್ಲೆಂಡ್ ಪ್ರಯಾಣಕ್ಕೆ ಹಣ ಶೇಖರಿಸತೊಡಗಿದರು. ಮುಂದೆ ಇಂಗ್ಲೆಂಡ್ ಪ್ರಯಾಣದ ಅವಕಾಶ ಸಿಕ್ಕಿದಾಗ ಆ ಅವಕಾಶವನ್ನು ತಮ್ಮ ಅಣ್ಣ, ವಿಠ್ಠಲಭಾಯಿ ,ಗೆ ಬಿಟ್ಟುಕೊಟ್ಟದ್ದಷ್ಟೇ ಅಲ್ಲ, ಅದಕ್ಕೆ ತಾವು ಕೂಡಿಟ್ಟಿದ್ದ ಹಣವನ್ನೂ ನೀಡಿದರು. ಅದು ಆದದ್ದು ಹೀಗೆ: ಪರದೇಶ ಪ್ರಯಾಣದ ತಿಕೀಟುಗಳು ಮತ್ತು ಪಾಸು ¾¾ವಿ.ಜೆ.ಪಟೇಲ್¿¿ ( ಅಣ್ಣ , ತಮ್ಮ ಇಬ್ಬರ ಇನಿಷಿಯಲ್ಲುಗಳು ವಿ.ಜೆ. ಎಂದೇ ಇತ್ತು) ಎಂಬ ಹೆಸರಿಗೆ ಅವರ ಅಣ್ಣನ ಮನೆಯ ವಿಳಾಸಕ್ಕೆ ತಲುಪಿತು. ಅಣ್ಣನಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಹಿಂದೆಗೆಯದ ವಲ್ಲಭಭಾಯ್ ಅಣ್ಣನ ಪ್ರವಾಸದ ಖರ್ಚನ್ನೂ ನಿಭಾಯಿಸಿದರು.

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಒಂದು ಪಕ್ಷಕ್ಕೆ ಸೀಮಿತವಾದ ನಾಯಕ ಅಲ್ಲ. ಬದಲಾಗಿ ಇಡೀ ದೇಶದ ನಾಯಕ. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ದಿನವನ್ನು ¾¾ಏಕತಾ ದಿನ¿¿ವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ದೇಶದಲ್ಲೆಡೆ ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಲಾಗುತ್ತದೆ!! ಆದರೆ ಅದೇ ದಿನ ಮಾಜಿ ಪ್ರಧಾನಿ ಇಂದಿರಾ ಗಾಂಧೀ ಅವರ ಪುಣ್ಯತಿಥಿಯಾಗಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ಸಿಗರು ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು!! ಆದರೂ ಅಂದೇ ¾¾ರಾಷ್ಟ್ರೀಯ ಏಕತಾ ದಿವಸ್¿¿ ಆಚರಿಸಲು ಕೇಂದ್ರ ನಿರ್ಧಾರಿಸಿದ್ದಾದರೂ ಯಾಕೆ? ಅದರ ಮಹತ್ವವಾದರೂ ಏನು ಗೊತ್ತೇ?.

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದರೋ ಅಂದಿನಿಂದ ದೇಶದ ಇಡೀ ಚಿತ್ರಣವೇ ಬದಲಾಗಿ ಹೋಗಿದ್ದಂತೂ ಅಕ್ಷರಶಃ ನಿಜ. ಹಾಗಾಗಿ ನರೇಂದ್ರ ಮೋದಿ ಸರಕಾರವು ನಮ್ಮಗಲಿದ ದೇಶದ ನಾಯಕರ ಹುಟ್ಟುಹಬ್ಬ, ಜಯಂತಿ ಆಚರಣೆ ಬಗ್ಗೆ ದೃಢ ನಿರ್ಧಾರ ಕೈಗೊಂಡಿದ್ದು, ಮಹಾತ್ಮ ಗಾಂಧೀಜಿ ಹೊರತು ಪಡಿಸಿ ಇನ್ಯಾವುದೇ ನಾಯಕರ ಜಯಂತಿ, ಪುಣ್ಯತಿಥಿ ದಿನಾಚರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ಪರಿಗಣಿಸದಿರಲು ಕ್ರಮ ಕೈಗೊಂಡಿದ್ದರು!! ಹೀಗಾಗಿ ಉಳಿದ ನಾಯಕರು ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಮುಂತಾದವರ ಹುಟ್ಟುಹಬ್ಬ, ಪುಣ್ಯತಿಥಿಗಳನ್ನು ಆಯಾ ಟ್ರಸ್ಟ್, ಸಂಘಟನೆಗಳು ಆಚರಿಸಬಹುದು ಎಂದು ಘೋಷಿಸಲಾಗಿತ್ತು!!

ಸರ್ದಾರ್ ವಲ್ಲಭಬಾಯಿ ಪಟೇಲ್ ಆಧುನಿಕ ಭಾರತದ ನಿಜವಾದ ವಾಸ್ತುಶಿಲ್ಪಿ. ಅವರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ ಮತ್ತು ದೇಶ ಪ್ರೇಮ ಸರ್ವಕಾಲಕ್ಕೂ ಮಾದರಿಯಾಗಿದೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಅವರ ಹೆಸರು ಭಾರತದ ಇತಿಹಾಸದಲ್ಲಿ ಎಂದೆಂದೂ ಅಮರ. ಇಂದು ಅವರ ಜನ್ಮದಿನ. ತಮ್ಮ ಜೀವನವನ್ನು ದೇಶಕ್ಕೆ ಸರ್ಮಿಪಿಸಿದ, ಪಟೇಲರ ಕೊಡುಗೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ಪಟೇಲ್ ಏಕತೆಗಾಗಿ ಶ್ರಮಿಸಿದ್ದರು. ದೇಶವನ್ನು ಒಗ್ಗೂಡಿಸುವಲ್ಲಿ ಅವರ ಸೇವೆಯನ್ನು ಸ್ಮರಿಸಿಕೊಂಡು, ಅವರ ಜನ್ಮದಿನವಾದ ಅಕ್ಟೋಬರ್ 31ನ್ನು ¾ಏಕತೆಯ ದಿನ¿ವನ್ನಾಗಿ ಆಚರಿಸಲಾಗುತ್ತದೆ¿¿ ಎಂದು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದರು.

ಅಷ್ಟೇ ಅಲ್ಲದೇ, ¾¾ಭಾರತದ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. ಇತಿಹಾಸ ಮರೆತ ದೇಶ, ಇತಿಹಾಸವನ್ನು ಸೃಷ್ಟಿಸಲಾರದು. ನಮ್ಮ ಸಿದ್ಧಾಂತಗಳಿಗೆ ತಕ್ಕಂತೆ ನಾವು ಇತಿಹಾಸವನ್ನು ಬದಲಿಸಲಾಗದು. ಭಾರತದ ಇತಿಹಾಸದಲ್ಲಿ ಪಟೇಲರ ಹೆಸರನ್ನು ಅಳಿಸಲಾಗದು. ಅವರೆಂದಿಗೂ ಅಜರಾಮರ. ಗಾಂಧಿ ಮತ್ತು ಪಟೇಲರ ಜೋಡಿ ಅದ್ಬುತವಾಗಿತ್ತು. ಪಟೇಲರಿಲ್ಲದೆ ಗಾಂಧಿ ಅಪೂರ್ಣ¿¿ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದರು.

ರಾಷ್ಟ್ರೀಯ ಏಕತಾ ದಿವಸ ಏಕೆ ಗೊತ್ತೇ?
ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದರೂ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಸ್ವಾತಂತ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇವರು ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದಂತಹ ಒರ್ವ ಧೀಮಂತ ವ್ಯಕ್ತಿ!!

ಇಂತಹ ಪಟೇಲರ ಕುರಿತು ಇತಿಹಾಸದ ಪುಸ್ತಕಗಳಲ್ಲಿ ಹೆಚ್ಚಿನ ವಿವರವನ್ನೇ ನೀಡಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳ ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮವನ್ನು ನಾವು ಸ್ಮರಿಸಲೇಬೇಕು. ದೇಶದ ಏಕತೆಗಾಗಿ ಸರ್ಧಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶವನ್ನು ಸಾರುವುದು ಈ ದಿನಾಚರಣೆಯ ಉದ್ದೇಶ. ಈ ನಿಟ್ಟಿನಲ್ಲಿ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು ¾¾ರಾಷ್ಟ್ರೀಯ ಏಕತಾ ದಿನ¿¿ವನ್ನಾಗಿ ಆಚರಿಸಲು ಪ್ರಧಾನಿ ನಿರ್ಧರಿಸಿದ್ದಾರೆ.

ಇನ್ನು ಈ ¾¾ರಾಷ್ಟ್ರೀಯ ಏಕತಾ ದಿನ¿¿ದ ನಿಮಿತ್ತ ಎಲ್ಲ ಶಾಲಾ ಮಕ್ಕಳು, ¾¾ನಾನು ಸತ್ಯ ನಿಷ್ಠೆಯಿಂದ ಪ್ರಮಾಣೀಕರಿಸುವುದೇನೆಂದರೆ, ನಾನು ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆ ಕಾಪಾಡಲು ಹಾಗೂ ಈ ಸಂದೇಶವನ್ನು ನನ್ನ ದೇಶವಾಸಿಗಳಲ್ಲಿ ಹರಡಲು ಶ್ರದ್ಧಾಪೂರ್ವಕ ಪ್ರಯತ್ನಿಸುತ್ತೇನೆ. ನಾನು ಈ ಪ್ರತಿಜ್ಞೆಯನ್ನು ದಿವಂಗತ ಸರದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಏಕತೆಗಾಗಿ ಹೊಂದಿದ್ದ ದೂರದಷ್ಟಿ ಹಾಗೂ ಕೈಗೊಂಡ ದಿಟ್ಟ ಕ್ರಮಗಳನ್ನು ಸ್ಮರಿಸುತ್ತ ಸ್ವೀಕರಿಸುತ್ತೇನೆ. ಇದರ ಜತೆಗೆ ನಾನೂ ದೇಶದ ಆಂತರಿಕ ಭದ್ರತೆ ಕಾಪಾಡಲು ಮನಃಪೂರ್ವಕ ಹಾಗೂ ಸತ್ಯನಿಷ್ಠೆಯಿಂದ ಸಂಕಲ್ಪ ಮಾಡುತ್ತೇನೆ¿¿ ಎಂದು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲಿದ್ದಾರೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ!!

ಪಟೇಲರು 1875ನೇ ಇಸವಿ ಅಕ್ಟೋಬರ್ 31ರಂದು ಗುಜರಾತ್‍ನಲ್ಲಿ ಜನಿಸಿದರು.ನಿರ್ಣಯಗಳಲ್ಲಿ ¾ಉಕ್ಕಿನ ಮನುಷ್ಯ¿ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ.

ಪಟೇಲ್ ಸಮುದಾಯದ ಸಂಪ್ರದಾಯದಂತೆ ಹುಡುಗನಿಗೆ 18ರ ಹರೆಯದಲ್ಲೇ ಮದುವೆಯಾಯಿತು.ಪಟೇಲರು ಶಾಲೆ ಸೇರಿದ್ದು ತಡವಾಗಿ. ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ! ಈ ಘಟ್ಟದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಸ್ವತಃ ಪಟೇಲರಿಗೆ ಪ್ಲೀಡರ್ ಪರೀಕ್ಷೆ ಪಾಸು ಮಾಡಿ ವಕೀಲರಾಗಬೇಕೆಂದು ಅಪೇಕ್ಷೆಯಿತ್ತು. ಅದಕ್ಕಾಗಿ ಹಣ ಒಟ್ಟುಮಾಡಿ, ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಅವರು ಮೂವತ್ತಾರು ತಿಂಗಳುಗಳ ಬ್ಯಾರಿಸ್ಟರ್ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿ, ಕಾಲೇಜು ವಿದ್ಯಾಭ್ಯಾಸದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ತರಗತಿಗೆ ಪ್ರಥಮರಾಗಿ ಉತ್ತೀರ್ಣರಾದರು. ಅಲ್ಲಿಂದ ಹಿಂತಿರುಗಿ ಅಹಮದಾಬಾದಿನಲ್ಲಿ ನೆಲೆನಿಂತು, ಅಲ್ಲಿನ ಅಗ್ರಮಾನ್ಯ ಬ್ಯಾರಿಸ್ಟರುಗಳಲ್ಲಿ ಒಬ್ಬರೆಂದು ಹೆಸರಾದರು.

ಕುಟುಂಬ ದೊಡ್ಡದು. ಜೀವನ ನಿರ್ವಹಣೆಗೆ ಶಕ್ತಿಮೀರಿ ದುಡಿಯುವುದು ಅನಿವಾರ್ಯ ಕರ್ಮವಾಗಿದ್ದ ಕಾಲ. ಪಟೇಲರು ಸ್ವಂತ ಪರಿಶ್ರಮದಿಂದ ಓದಿ, ಪದವಿ ಪಡೆದು, ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋಗುವ ಕನಸು ಕಂಡಿದ್ದರು. ಅವರ ಕನಸಿಗೆ ನೀರೆರೆಯುವಂತೆ ಇಂಗ್ಲೆಂಡಿನಿಂದ ವಕೀಲಿ ವ್ಯಾಸಂಗದ ಪ್ರವೇಶಾತಿಯ ಕಾಗದಪತ್ರಗಳೂ ಪ್ರಯಾಣದ ಟಿಕೇಟೂ ಬಂದವು. ಆ ಎಲ್ಲ ದಾಖಲೆಗಳಲ್ಲೂ ಪಟೇಲರ ಹೆಸರನ್ನು ವಿ.ಜೆ. ಪಟೇಲ್ ಎಂದು ನಮೂದಿಸಲಾಗಿತ್ತು.
ಆಗ, ಇಂಗ್ಲೆಂಡಿಗೆ ಹೋಗಿ ಕಲಿಯಲು ತನಗೂ ಆಸೆಯಿದೆ ಎಂದು ಸೋದರ ವಿಠಲಭಾಯಿ ಝಾವೆರ್ಬಾಯಿ ಪಟೇಲ್ ಮುಂದೆ ಬಂದು ಅಣ್ಣನ ಬಳಿ ಹೇಳಿಕೊಂಡ. ಅಣ್ಣ ವಲ್ಲಭಭಾಯಿ ತಮ್ಮನ ಆಸೆ ಮನ್ನಿಸಿ ಆತನಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟು ತಾನು ಭಾರತದಲ್ಲೆ ಉಳಿದರು. ವಜ್ರದಂಥ ವ್ಯಕ್ತಿಯ ಮನಸ್ಸು ಹೂವಿನಷ್ಟು ಮೃದುವೂ ಆಗಿತ್ತೆನುವುದಕ್ಕೆ ಈ ಘಟನೆ ಸಾಕ್ಷಿ.

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ