ಗೋವಾದಿಂದ ಬಂದಿದ್ದ ವ್ಯಕ್ತಿ ನಾಪತ್ತೆ

ಬೆಂಗಳೂರು, ಅ.17- ಗೋವಾದಿಂದ ಬೆಂಗಳೂರಿಗೆ ಬಂದಿದ್ದ ಬರ್ನಾಡ್ ಜಾನ್ಸನ್ (65) ಎಂಬ ವ್ಯಕ್ತಿ ಅ.15ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅ.13ರಂದು ಗೋವಾದಿಂದ ಬೆಂಗಳೂರಿಗೆ ಬಂದಿದ್ದ ಇವರು ಪ್ರಭಾಕರ್ ಮಾನ್ಸನ್ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದರು.
ಅ.15ರಂದು ಬೆಳಗ್ಗೆ 9.30ರ ಸುಮಾರಿಗೆ ಔಷಧಿ ತೆಗೆದುಕೊಂಡು ಬರುವುದಾಗಿ ಹೇಳಿ ರೂಮ್‍ನಿಂದ ಹೋಗಿದ್ದು, ವಾಪಸ್ ಮರಳಿ ಬಂದಿಲ್ಲ ಎಂದು ಇವರ ಮಾವ ಯಶವಂತಪುರ ಪೆÇಲೀಸರಿಗೆ ದೂರು ನೀಡಿದ್ದಾರೆ.

ರೂಮ್‍ನಿಂದ ಹೋದಾಗ ನೀಲಿ ಹಾಗೂ ಬಿಳಿಬಣ್ಣದ ತುಂಬುತೋಳಿನ ಶರ್ಟ್ ಮತ್ತು ಪ್ಯಾಂಟ್ ಹಾಗೂ ಕನ್ನಡಕ ಧರಿಸಿದ್ದಾರೆ.ಎಡಭಾಗದ ತುಟಿ ಬಳಿ ಬಿಳಿ ಪ್ಯಾಚಸ್ ಗುರುತು ಇದೆ.
ಹಿಂದಿ, ಇಂಗ್ಲಿಷ್, ಕೊಂಕಣಿ ಭಾಷೆ ಮಾತನಾಡುವ ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ದೂರವಾಣಿ 080-22942526 ಅಥವಾ ಕಂಟ್ರೋಲ್ ರೂಮ್‍ಗೆ ತಿಳಿಸಲು ಮನವಿ ಮಾಡಿದ್ದಾರೆ.

ಕಸ ವಿಲೆವಾರಿ ಬಗ್ಗೆ ಜಾಗೃತಿ:
Áರ್ವಜನಿಕರಲ್ಲಿ ಬೆಂಗಳೂರು, ಅ.17- ¸ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲು ಎಲ್ಲ 198 ವಾರ್ಡ್‍ಗಳಲ್ಲಿ ಕಾಂಪೆÇೀಸ್ಟ್ ಸಂತೆ ಹಮ್ಮಿಕೊಳ್ಳುವಂತೆ ಕಮಿಷನರ್ ಮಂಜುನಾಥ್ ಪ್ರಸಾದ್ ಅವರಿಗೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮನವಿ ಮಾಡಿಕೊಂಡಿದ್ದಾರೆ.
ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಈಗಾಗಲೇ ಪಾಲಿಕೆಯಿಂದ ಹಲವಾರು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈ ಸಂದರ್ಭದಲ್ಲಿ ಕಾಂಪೆÇೀಸ್ಟ್ ಸಂತೆ ಹಮ್ಮಿಕೊಳ್ಳುವುದು ಸೂಕ್ತ ಎಂದು ಶಿವರಾಜ್ ಅವರು ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕಳೆದ ಫೆ.2017ರಿಂದ ಇಲ್ಲಿಯವರೆಗೂ 27 ಕಾಂಪೆÇೀಸ್ಟ್ ಸಂತೆಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.ಹೀಗಾಗಿ ಸಾರ್ವಜನಿಕರಿಗೆ ಕಸ ವಿಲೇವಾರಿ ಕುರಿತಂತೆ ಜಾಗೃತಿ ಮೂಡಿಸಲು ಎಲ್ಲ ವಾರ್ಡ್‍ಗಳಲ್ಲೂ ಕಾಂಪೆÇೀಸ್ಟ್ ಸಂತೆ ಹಮ್ಮಿಕೊಳ್ಳಬೇಕು.
ಸಂತೆಗಳಲ್ಲಿ ಸಾರ್ವಜನಿಕರಿಗೆ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಮರುಬಳಕೆ ಮಾಡಿಕೊಳ್ಳುವುದು ಹೇಗೆ ಹಾಗೂ ಘನತ್ಯಾಜ್ಯವನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಹಮ್ಮಿಕೊಂಡರೆ ಅದರಿಂದ ಉಪಯೋಗವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೂಡಲೇ ಆಯುಕ್ತರು ನನ್ನ ಈ ಮನವಿಗೆ ಸ್ಪಂದಿಸಿ ಎಲ್ಲ 198 ವಾರ್ಡ್‍ಗಳಲ್ಲೂ ಸಂತೆಗಳನ್ನು ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಶಿವರಾಜ್ ಮನವಿ ಮಾಡಿಕೊಂಡಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಜೊತೆ ಪ್ರಾಣಿ ಪಕ್ಷಿಗಳ ಪ್ರಾಣಕ್ಕೂ ಹಾನಿ:
ಬೆಂಗಳೂರು,ಅ.17-ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ ಪ್ರಾಣಿ-ಪಕ್ಷಿಗಳ ಪ್ರಾಣಕ್ಕೂ ಸಂಚಕಾರ ವಾಗಿರುವುದರಿಂದ ಸರ್ಕಾರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಸಬೇಕೆಂದು ಮಾಜಿ ಮೇಯರ್ ಜಿ.ಪದ್ಮಾವತಿ ಮನವಿ ಮಾಡಿದ್ದಾರೆ.

ಸ್ಥಳೀಯ ಮುಖಂಡ ರಾಧಾಕೃಷ್ಣ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರಿಗೆ ಶುಭ ಹಾರೈಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟಿಕ್ ತ್ಯಾಜ್ಯ ಚರಂಡಿಗಳಿಗೆ ಸೇರಿ ಸರಾಗವಾಗಿ ನೀರು ಹರಿಯಲು ಸಾಧ್ಯವಾಗುವುದಿಲ್ಲ. ಜೊತೆಗೆ ನಗರ ಪ್ರದೇಶಗಳಲ್ಲಿ ಜಲಕಾಯಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಸಾರ್ವಜನಿಕರು ಕೂಡ ಪ್ಲಾಸ್ಟಿಕ್ ಕವರ್‍ಗಳನ್ನು ಬಳಕೆ ಮಾಡದೆ ಬಟ್ಟೆ ಬ್ಯಾಗಳನ್ನು ಬಳಸಬೇಕು. ಅಲ್ಲದೆ ಬಿಬಿಎಂಪಿ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಕವರ್‍ಗಳನ್ನು ಮಾರಾಟ ಮಾಡುವ ಹಾಗೂ ಸರಬರಾಜು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪದ್ಮಾವತಿ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ