ಕೆ.ಎಸ್.ಅರ್.ಟಿ.ಸಿ. ನಿಗಮದ ಭದ್ರತಾ ರಕ್ಷಕರಿಗೆ ಪೊಲೀಸ್ ಇಲಾಖೆಯಿಂದ ತರಭೇತಿ

ಬೆಂಗಳೂರು, ಅ.17- ಕರ್ನಾಟಕ ರಸ್ತೆ ಸಾರಿಗೆ ನಿಗಮದ ಭದ್ರತಾ ರಕ್ಷಕರಿಗೆ ಪೆÇಲೀಸ್ ಇಲಾಖೆ ವತಿಯಿಂದ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಹಾಸನದ ತಾತ್ಕಾಲಿಕ ಪೆÇಲೀಸ್ ತರಬೇತಿ ಶಾಲೆಯಲ್ಲಿ ಅ.22ರಿಂದ ಒಂದು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ತರಬೇತಿ ಪಡೆಯುವ ಸಿಬ್ಬಂದಿ ಅಂದು ಬೆಳಗ್ಗೆ ತರಬೇತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾಗಿ ತಮ್ಮ ಇರುವಿಕೆಯನ್ನು ದೃಢೀಕರಿಸಿಕೊಳ್ಳಬೇಕು.

ತರಬೇತಿಗೆ ಹಾಜರಾಗುವವರು ಕವಾಯತಿಗೆ 2 ಜೊತೆ ಖಾಕಿ ಸಮವಸ್ತ್ರ, ಗ್ರೌಂಡ್ ಶೀಟ್, ಲಾಠಿ, ಉಲ್ಲನ್ ಸಾಕ್ಸ್, ಬೂಟ್ ಪಾಲೀಶ್ ತರಬೇಕು.ದೈಹಿಕ ತರಬೇತಿಗೆ 2 ಜೊತೆ ತೋಳಿನ ಬನಿಯನ್, 2 ಜೊತೆ ಖಾಕಿ ನಿಕ್ಕರ್, 2 ಜೊತೆ ಬಿಳಿ ಕ್ಯಾನ್ವಾಸ್ ಶೂ ಮತ್ತು 2 ಜೊತೆ ಬಿಳಿ ಸಾಕ್ಸ್ ತರಬೇಕು.

ಒಂದು ಟ್ರಂಕ್, ಸೊಳ್ಳೆ ಪರದೆ, ಪ್ಲಾಸ್ಟಿಕ್ ಬಕೆಟ್, ಮಗ್ಗು, ಲಘು ಹಾಸಿಗೆ, 2 ಬೆಡ್ ಶೀಟ್, ಊಟದ ತಟ್ಟೆ, ಸ್ಟೀಲ್ ಲೋಟ, ಶೇವಿಂಗ್ ಕಿಟ್ ಮತ್ತು ಟಾರ್ಚ್ ತರಬೇಕು.ನಿಗಮದಿಂದ ವಿತರಿಸಲಾಗಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿ, ಪಾಸ್‍ಪೆÇೀರ್ಟ್ ಸೈಜಿನ 2 ಭಾವಚಿತ್ರ, ರಕ್ತದ ಗುಂಪನ್ನು ನಮೂದಿಸಿರುವ ಇತ್ತೀಚಿನ ವೈದ್ಯಕೀಯ ಪ್ರಮಾಣ ಪತ್ರ, ಲೇಖನ ಸಾಮಗ್ರಿಗಳನ್ನು ಅಭ್ಯರ್ಥಿಗಳು ತರಬೇಕು ಎಂದು ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ಅ.17-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಂದೇ ಆಯುಧಪೂಜೆ ಸಡಗರ.
ಬೆಳ್ಳಂಬೆಳಗ್ಗೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ನಗರಪಾಲಿಕೆಗೆ ಬಂದು ತಮ್ಮ ತಮ್ಮ ಕಚೇರಿಗಳಲ್ಲಿ ಆಯುಧಪೂಜೆ ನೆರವೇರಿಸಿ ತಕ್ಷಣವೇ ವಾಪಸ್ ದೌಡಾಯಿಸಿದರು.

ಅಧಿಕಾರಿಗಳಂತೂ ಒಬ್ಬರೂ ಕಚೇರಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ನಾಳೆ ಆಯುಧಪೂಜೆ, ನಾಳಿದ್ದು ಜಂಬೂ ಸವಾರಿ ಎರಡು ದಿನ ಸರ್ಕಾರಿ ರಜೆ.ಶನಿವಾರ ಒಂದು ದಿನ ಸಿಎಲ್ ಹಾಕಿಕೊಂಡರೆ ಇನ್ನು ಬೆಂಗಳೂರು, ಅ.17-ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧ ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧಪೂಜೆಯನ್ನು ನೆರವೇರಿಸಲಾಯಿತು.

ಸಚಿವರು, ಅಧಿಕಾರಿಗಳ ಕಚೇರಿಗಳನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಿ ಆಯುಧ ಪೂಜೆಯನ್ನು ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುತ್ತಿದ್ದರು.ನಾಳೆ ಸರ್ಕಾರಿ ರಜೆಯಾಗಿರುವುದರಿಂದ ಇಂದೇ ಆಯುಧಪೂಜೆ ನೆರವೇರಿಸಲಾಯಿತು.

ಶಾಸಕರ ಭವನ ಬಹುತೇಕ ಖಾಸಗಿ ಕಂಪೆನಿ ಸಂಸ್ಥೆಗಳು ಹಾಗೂ ಕಾರ್ಖಾನೆಗಳಲ್ಲೂ ಕೂಡ ಆಯುಧಪೂಜೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ವಿಧಾನಸೌಧ, ವಿಕಾಸಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧಪೂಜೆ ಸಿದ್ಧತೆ ಕಳೆದೆರಡು ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿತ್ತು. ಬಹುತೇಕ ಕಚೇರಿ ಸಂಸ್ಥೆಗಳ ಸಿಬ್ಬಂದಿ ಪೂಜೆ ನಂತರ ಪರಸ್ಪರ ಸಿಹಿಯನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಹೂವು ದುಬಾರಿ:ದಸರಾ, ಆಯುಧಪೂಜೆ, ನವರಾತ್ರಿ ಹೀಗೆ ಸರಣಿ ಹಬ್ಬಗಳ ಆಚರಣೆ ಇರುವುದರಿಂದ ಹೂವಿನ ಬೆಲೆ ದುಬಾರಿಯಾಗಿದೆ.ಅದೇ ರೀತಿ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಹೂವಿನ ಬೆಲೆ ಹೆಚ್ಚಾಗಿದ್ದು, ಗ್ರಾಹಕರ ಕೈ ಸುಡುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ