ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 116ನೇ ಜನ್ಮ ದಿನಾಚರಣೆ

ಬೆಂಗಳೂರು, ಅ.11- ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 116ನೇ ಜನ್ಮ ದಿನಾಚರಣೆಯನ್ನು ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಆಚರಿಸಲಾಯಿತು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗೌಡರು, ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಹೆಸರನ್ನು ನಮ್ಮ ಪಕ್ಷದ ಕಚೆರಿಗೆ ಇಡಲಾಗಿದೆ. ರಾಷ್ಟ್ರದಲೆಲ್ಲೂ ಕೂಡ ಪಕ್ಷದ ಕಚೇರಿಗೆ ಈ ರೀತಿ ಹೆಸರು ಇಡಲಾಗಿಲ್ಲ. ಈ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಿದ್ದೇವೆ ಎಂದು ಹೇಳಿದರು.

ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ರಾಷ್ಟ್ರದಲ್ಲಿ ದೊಡ್ಡ ಚಳವಳಿಯನ್ನು ನಡೆಸಲಾಯಿತು. ಅವರು ರಾಷ್ಟ್ರಕಂಡ ಎರಡನೇ ಗಾಂಧಿ ಎಂದು ದೇವೇಗೌಡರು ಬಣ್ಣಿಸಿದರು.

ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಸಮಾನತೆಯ ಜಾತ್ಯತೀತ ರಾಷ್ಟ್ರ ಕಟ್ಟಬೇಕೆಂಬ ಕನಸು ಜಯಪ್ರಕಾಶ್ ನಾರಾಯಣ್ ಅವರದ್ದಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ್ದರು. ಪ್ರಧಾನಿ ಸ್ಥಾನವನ್ನು ನಿರಾಕರಿಸಿದ್ದ ಅವರು, ಭೂದಾನ ಚಳವಳಿ ಸೇರಿದಂತೆ ಜನಪರ ಹೋರಾಟಗಳಲ್ಲೆ ತಮ್ಮ ಜೀವನ ಕಳೆದರು ಎಂದು ಗುಣಗಾನ ಮಾಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ