ಆಯುಷ್ಮಾನ್ ಆರೋಗ್ಯ ಸೌಲಭ್ಯಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಸೂಚನೆ

ನವದೆಹಲಿ: ಮಾಸಿಕ 10,000 ರೂ.ಗಳಿಗೂ ಹೆಚ್ಚು ಆದಾಯ, ರೆಫ್ರಿಜರೇಟರ್, ದ್ವಿಚಕ್ರವಾಹನಗಳೂ ಸೇರಿ ಇತರ ಸೌಕರ್ಯಗಳನ್ನು ಹೊಂದಿದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಸೌಲಭ್ಯಗಳು ಲಭ್ಯವಾಗುವುದಿಲ್ಲ.
ಆಯುಷ್ಮಾನ್ ಯೋಜನೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‍ಎಚ್‍ಎ) ಕೆಲ ದಿನಗಳ ಹಿಂದಷ್ಟೇ ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆಗಳನ್ನು ಹೊರಡಿಸಿ, ಅರ್ಹ ಫಲಾನುಭವಿಗಳನ್ನೂ ಮಾತ್ರ ಗುರುತಿಸುವಂತೆ ಸೂಚಿಸಿದೆ.
ಬಡವರು ಮತ್ತು ಆರ್ಥಿಕ ದುರ್ಬಲರಿಗೆ ಉಪಯೋಗವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದು. ಇದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅನುಕೂಲವಿದ್ದವರೂ ಕೂಡ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು. ಅರ್ಹ ಫಲಾನುಭವಿಗಳನ್ನು ಮಾತ್ರ ಗುರುತಿಸಲು ಇತಿಮಿತಿ ನಿಗದಿಗೊಳಿಸಿದೆ.
ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ(ಎಸ್‍ಐಸಿಸಿ)ಯಲ್ಲಿ ಇದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಿ, ಈ ಮೂಲಕ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಇದರ ಪ್ರಕಾರ ಮನೆಯಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳನ್ನು, ಮೀನು ಹಿಡಿಯುವ ದೋಣಿಗಳು, ಯಾಂತ್ರೀಕೃತ ಕೃಷಿ ಉಪಕರಣಗಳು, ಕಿಸಾನ್ ಕ್ರೆಡಿಟ್ ಕಾರ್ಡ್‍ಗಳು, ಖಾತೆಯಲ್ಲಿ 50,000ಕ್ಕೂ ಹೆಚ್ಚು ಹಣ ಹೊಂದಿದ್ದಾರೆಯೇ ? ಫಲಾನುಭವಿಗಳು ಸರ್ಕಾರಿ ಉದ್ಯೋಗಸ್ಥರೇ ಎಂಬ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ತಿಂಗಳಿಗೆ 10,000 ರೂ.ಗಳಿಗೂ ಹೆಚ್ಚು ವರಮಾನ, ತೆರಿಗೆ ಪಾವತಿದಾರರು, ಮೂರು ಅಥವಾ ಅದಕ್ಕೂ ಹೆಚ್ಚು ಕೊಠಡಿಗಳ ಮನೆಯಲ್ಲಿ ಇರುವವರು, ರೆಫ್ರಿಜರೇಟರ್, ಲ್ಯಾಂಡ್ ಲೈನ್ ಫೆÇೀನ್ ಹೊಂದಿರುವವರು, ಸರ್ಕಾರಿ ಉದ್ಯೋಗಿಗಳು, ಉನ್ನತಾಧಿಕಾರಿಗಳನ್ನು ಈ ಸೇವೆಯಿಂದ ಹೊರಗೆ ಇಡಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ