30ನೆ ವಸತಂಕ್ಕೆ ಕಾಲಿಟ ಧ್ರುವ ಸರ್ಜಾ

ಬೆಂಗಳೂರು, ಅ.6- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು 30ನೆ ವಸತಂಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ರಾತ್ರಿಯಿಂದಲೇ ಆ್ಯಕ್ಷನ್ ಪ್ರಿನ್ಸ್ ಮನೆ ಮುಂದೆ ಜಮಾಯಿಸಿ ಶುಭಾಶಯ ಕೋರಿದರು.
ಅಭಿಮಾನಿಗಳು ಧೃವಸರ್ಜಾ ಕಟೌಟ್‍ಗಳಿಗೆ ಬೃಹತ್ ಹಾರಗಳನ್ನು ಹಾಕಿ ಅಭಿಮಾನ ವ್ಯಕ್ತಪಡಿಸಿದರು.ಧೃವಸರ್ಜಾ ಅಭಿನಯದ ಚಿತ್ರದ ಡೈಲಾಗ್‍ಗಳನ್ನು ಹೇಳುವ ಮೂಲಕ ಸಂಭ್ರಮಿಸಿದರು.

ಅದ್ಧೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಧೃವಸರ್ಜಾ ನಂತರ ಬಹದ್ದೂರ್, ಭರ್ಜರಿ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು.
ನಿರ್ದೇಶಕ ನಂದಕಿಶೋರ್ ನಿರ್ದೇಶಿಸುತ್ತಿರುವ ಪೆÇಗರು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಹುಟ್ಟುಹಬ್ಬದ ಅಂಗವಾಗಿ ಪೆÇಗರು ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಸೋದರ ಮಾವ ಅರ್ಜುನ್ ಸರ್ಜಾ, ಸಹೋದರ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಸೇರಿದಂತೆ ಕುಟುಂಬದ ಸದಸ್ಯರು, ಚಿತ್ರರಂಗದ ನಟ-ನಟಿಯರು ಆ್ಯಕ್ಷನ್ ಪ್ರಿನ್ಸ್‍ಗೆ ಶುಭಾಶಯ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ