ರೆಪೋ ದರ ಯಥಾಸ್ಥಿತಿಯಲ್ಲಿ ಮುಮ್ದುವರಿಕೆ: ಆರ್ ಬಿಐ

ನವದೆಹಲಿ: ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅನಿಶ್ಚಿತತೆಯಿಂದ ಕೂಡಿದ್ದು, ನಿರಂತರವಾಗಿ ಹೆಚ್ಚಾಗುತ್ತಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಅಭಿವೃದ್ಧಿ ಕುಂಠಿತವಾಗಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದ್ವೈಮಾಸಿಕ ಆರ್ಥಿಕ ನೀತಿಯಲ್ಲಿ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದಾಗಿ ಆರ್​ಬಿಐ ಸ್ಪಷ್ಟನೆ ನೀಡಿದೆ.

ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡ ಹಿನ್ನೆಲೆ ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ಭಾರಿ ತಲ್ಲಣ ಮೂಡಿಸಿತು. ಪರಿಣಾಮ ಮಧ್ಯಂತರ ವಹಿವಾಟಿನಲ್ಲಿ 34,202.22 ಅಂಕಗಳಿಗೆ ಕುಸಿದಿದ್ದ ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್​ಇ-ಸೆನ್ಸೆಕ್ಸ್ ) ಕೊನೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಒಟ್ಟಾರೆ 792.17 ಅಂಕ ಮುಟ್ಟಿತು. ಇದು ಕಳೆದ ಆರು ತಿಂಗಳಲ್ಲೇ ಸೆನ್ಸೆಕ್ಸ್ ದಾಖಲಾದ ಕನಿಷ್ಠ ಅಂಕವಾಗಿದೆ.

ರಾಷ್ಟ್ರೀಯ ಸಂವೇದಿ ಸೂಚ್ಯಂಕ (ಎನ್​ಎಸ್​ಇ-ನಿಫ್ಟಿ) ಕೂಡ ಮಧ್ಯಾವಧಿ 10,261.90 ಅಂಕಗಳಿಗೆ ಕುಸಿದಿತ್ತು. ನಂತರ ಚೇತರಿಸಿಕೊಂಡು ಒಟ್ಟಾರೆ 282.80 ಅಂಕಗಳ ಕುಸಿತದೊಂದಿಗೆ 10,316.45 ಅಂಕ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ