ದಸರಾ ಸಂಭ್ರಮ ಭರದ ಸಿದ್ಧತೆ ರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ

ಮೈಸೂರು,ಅ.4- ಅರಮನೆಯಲ್ಲಿದಸರಾ ಸಂಭ್ರಮ ಕಳೆಗಟ್ಟಿದ್ದು ಭರದ ಸಿದ್ಧತೆ ನಡೆದಿದೆ. ಮೊದಲನೆ ಕಾರ್ಯವಾಗಿಇಂದುರತ್ನಖಚಿತ ಸಿಂಹಾಸನ ಜೋಡಣೆಗೆ ಚಾಲನೆ ನೀಡಲಾಯಿತು.
ಬೆಳಗ್ಗೆ 10 ಗಂಟೆಗೆಅರಮನೆಯ ಭದ್ರತಾಕೊಠಡಿಯಲ್ಲಿದ್ದಇತಿಹಾಸ ಪ್ರಸಿದ್ಧ ಈ ಸಿಂಹಾಸನವನ್ನು ಬಿಗಿ ಭದ್ರತೆಯಲ್ಲಿ ಹೊರತೆಗೆದುದರ್ಬಾರ್‍ಹಾಲ್‍ನಲ್ಲಿಜೋಡಿಸಲಾಯಿತು.
ಈ ಸಂದರ್ಭದಲ್ಲಿಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ಗಣಪತಿ ಪೂಜೆ, ನವಗ್ರಹ ಹೋಮ, ಅರಮನೆ ಪುರೋಹಿತರ ಸಮ್ಮುಖದಲ್ಲಿ ನೆರವೇರಿಸಿ ಸಿಂಹಾಸನ ಜೋಡಣೆಕಾರ್ಯಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಸರ್ಕಾರ ನಾಡಹಬ್ಬವಾಗಿದಸರಾ ಆಚರಿಸಿದರೆ ರಾಜಮನೆತನದವರು ಖಾಸಗಿ ದರ್ಬಾರ್ ನಡೆಸುತ್ತಾರೆ. ಖಾಸಗಿ ದರ್ಬಾರ್‍ನ್ನುರತ್ನಖಚಿತ ಸಿಂಹಾಸನಾರೋಹಣ ಮಾಡುವ ಮೂಲಕ ಮಹಾರಾಜಯದುವೀರಕೃಷ್ಣದತ್ತಚಾಮರಾಜಒಡೆಯರ್ ನಡೆಸುವರು. ಅವರಿಗೆಇದು ನಾಲ್ಕನೆ ಖಾಸಗಿ ದರ್ಬಾರ್‍ಆಗಿದೆ.
ಹಿನ್ನೆಲೆ: ಸಿಂಹಾಸನವು ಕ್ರಿ.ಶ.1338ರಲ್ಲಿ ವಿಜಯನಗರದಚಕ್ರಾಧಿಪತ್ಯದ ಸ್ಥಾಪಕರಾದ ಹಕ್ಕ-ಬುಕ್ಕರದ್ದೆಂದು ಹೇಳಲಾಗುತ್ತದೆ.ನಂತರ 150 ವರ್ಷಗಳ ಕಾಲ ಆನೆಗುಂದಿಯಲ್ಲಿಇರಿಸಲಾಗಿತ್ತು. ವಿಜಯನಗರದಅವನತಿ ವೇಳೆ ಈ ರತ್ನಖಚಿತ ಸಿಂಹಾಸನವನ್ನು ಶ್ರೀರಂಗಪಟ್ಟಣದ ಶ್ರೀರಂಗಪಟ್ಟಣದರಾಯಭಾರಿಅರಮನೆಗೆತರಲಾಯಿತು. 1610ರಲ್ಲಿ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಈ ಸಿಂಹಾಸನ ಮೈಸೂರಿನಅರಮನೆತಲುಪಿತು.
ಸಿಂಹಾಸನವನ್ನು ಚಿನ್ನದ ಬಾಳೆಯ ಕಂಬ ಮತ್ತು ಮಾವಿನ ಎಲೆಗಳಿಂದ ಶೃಂಗರಿಸಲಾಗಿದೆ. ಮೇಲ್ಭಾಗದಲ್ಲಿ ಅಳವಡಿಸಿರುವ ಛತ್ರಿಯಲ್ಲಿರತ್ನ, ವಜ್ರ, ಮುತ್ತುಗಳನ್ನು ಇರಿಸಲಾಗಿದೆ. ಇದೇಛತ್ರಿಯಲ್ಲಿ ಸಂಸ್ಕøತ ಶ್ಲೋಕಗಳನ್ನು ಕೆತ್ತಲಾಗಿದೆ.
ಸಿಂಹಾಸನವನ್ನು ಏರುವ ಮೆಟ್ಟಿಲುಗಳ ಎರಡೂ ಭಾಗದಲ್ಲಿ ಸ್ತ್ರೀಗೊಂಬೆಗಳಿದ್ದು, ಅತ್ಯಂತ ಸುಂದರವಾಗಿದೆ.
ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ನಿಷೇಧಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ