ಆಟಗಾರನಾಗಿ, ನಾಯಕನಾಗಿ ಪ್ರತಿಯೊಂದು ಪಂದ್ಯದಲ್ಲೂ ಯಾವುದಾದರೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ನಾಯಕ ಕೊಹ್ಲಿ ವಿಂಡೀಸ್ ವಿರುದ್ಧ 39 ರನ್ಗಳಿಸಿದರೆ ಮಾಜಿ ನಾಯಕ ಅಜರುದ್ಧೀನ್ ದಾಖಲೆ ಮುರಿಯಲಿದ್ದಾರೆ.
ಅಜರ್ ವಿಂಡೀಸ್ ವಿರುದ್ಧ 539 ರನ್ಗಳಿಸಿದ್ದಾರೆ. ಇದೀಗ ಮಾಜಿ ನಾಯಕ ಧೋನಿ(476) ದಾಖಲೆ ಮುರಿದಿರುವ ಕೊಹ್ಲಿ 502 ರನ್ಗಳಿಸಿದ್ದಾರೆ. ಮೊದಲ ಟೆಸ್ಟ್ನಲ್ಲಿ 39 ರನ್ಗಳಿಸಿದರೆ ಅಜರ್ ದಾಖಲೆ ಪುಡಿಗಟ್ಟಲಿದ್ದಾರೆ.
ಇನ್ನು ಸುನೀಲ್ ಗವಾಸ್ಕರ್ 2749,ದ್ರಾವಿಡ್ 1978, ಲಕ್ಷ್ಮಣ್ 1715, ಸಚಿನ್ 1630 ಗಳಿಸಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧ ಕೇವಲ 10 ಪಂದ್ಯಗಳನ್ನಾಡಿದ್ದು,38.61 ಸರಾಸರಿಯಲ್ಲಿ 502 ರನ್ಗಳಿಸಿದ್ದಾರೆ. 200 ವಯಕ್ತಿಕ ಸ್ಕೋರ್ ಆಗಿದೆ.
ವಿಂಡೀಸ್ ವಿರುದ್ದ ಈ ಟೂರ್ನಿಯಲ್ಲಿ ಕೊಹ್ಲಿಪಡೆ 5 ಏಕದಿನ, 2 ಟೆಸ್ಟ್, ಮೂರು ಟಿ20 ಪಂದ್ಯವನ್ನಾಡಲಿದೆ.