ಭಾರತದ ವಾಯುನೆಲೆಯನ್ನು ಪ್ರವೇಶಿಸಿಲ್ಲ.. ಹೆಲಿಕಾಪ್ಟರ್​ ಹಾರಾಟಕ್ಕೆ ಪಾಕ್​ ಸ್ಪಷ್ಟೀಕರಣ

ನವದೆಹಲಿ: ಭಾನುವಾರದ ಮಧ್ಯಾಹ್ನ 12.30ರ ಸುಮಾರಿಗೆ ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್​ ಒಂದು ಗಡಿ ನಿಯಂತ್ರಣಕ್ಕೆ ರೇಖೆ ದಾಟಿ ಬಂದು ನಿಯಮ ಉಲ್ಲಂಘಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಧ್ಯಮಗಳು ಭಿನ್ನ ರೀತಿಯಲ್ಲಿ ವರದಿ ಮಾಡಿವೆ.

ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಏಕಾಏಕಿ ಕಾಣಿಸಿಕೊಂಡ ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್ ಕೆಲ ಸಮಯ ಆತಂಕ ಸೃಷ್ಟಿಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಈ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದು, ಗಡಿ ನಿಯಂತ್ರಣ ರೇಖೆಯನ್ನು ಪ್ರವೇಶಿಸುವ ಮೊದಲೇ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದಾಗಿ ಹೈದರ್ ಹೇಳಿದ್ದು, ಇದನ್ನೇ ಆಧಾರಾವಾಗಿಸಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಸಂಪುಟ ಸದಸ್ಯರೊಬ್ಬರನ್ನು ಭೇಟಿಯಾಗಲು ಹೈದರ್ ಈ ಮಾರ್ಗದಲ್ಲಿ ತೆರಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಪಾಕಿಸ್ತಾನದ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ 250 ಮೀ. ಒಳಗಡೆ ಬಂದಿತ್ತು ಎಂದು ಭಾರತೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾಗಿ ವಿಡಿಯೋ ಸಹ ಬಿಡುಗಡೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಏನಿದು ಗಡಿ ನಿಯಂತ್ರಣ ರೇಖೆ..?
ಗಡಿ ನಿಯಂತ್ರಣ ರೇಖೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಭಾರತ ಅಥವಾ ಪಾಕಿಸ್ತಾನದ ಹೆಲಿಕಾಪ್ಟರ್, ವಿಮಾನ ಹಾರಾಟ ನಡೆಸುವಂತಿಲ್ಲ. ಒಂದು ವೇಳೆ ಹಾರಾಟ ನಡೆಸಿದ್ದೇ ಆದಲ್ಲಿ ಆಯಾ ದೇಶಗಳು ದಾಳಿ ನಡೆಸಿ ನಿಯಮ ಉಲ್ಲಂಘನೆ ಆಧಾರದ ಮೇಲೆ ಹೆಲಿಕಾಪ್ಟರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ