10 ಲ್ಯಾಂಡ್ಸ್ಕೇಪ್ ಛಾಯಾಗ್ರಹಣದ ಮೂಲಭೂತ ವಿಚಾರಗಳು

“10 ಲ್ಯಾಂಡ್ಸ್ಕೇಪ್ ಛಾಯಾಗ್ರಹಣದ ಮೂಲಭೂತ ವಿಚಾರಗಳು”

  • ಆಲೋಚನೆ

ಇದು ಕಲೆಯನ್ನು ರಚಿಸುವ ಪ್ರಾರಂಭಿಕ ಹಂತವಾಗಿದೆ. ಇದು ಲ್ಯಾಂಡ್ಸ್ಕೇಪ್ ಛಾಯಾಚಿತ್ರಕ್ಕಾಗಿ ವಿಭಿನ್ನವಾಗಿಲ್ಲ. ನಿಮ್ಮ ಕಲ್ಪನೆ ಒಂದು ಮುಗಿದ ಕಲೆಯಾಗಿ ಹೊಂದಲು, ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಿಮ್ಮ ಮನಸಿನ ಆಲೋಚನೆಗಳು ಸದಾ ಚಾಲನೆಯಲ್ಲಿರಬೇಕು. ನಿಮ್ಮ ಆಲೋಚನೆಗಳ ಬಗ್ಗೆ ಸದಾ ಯೋಚಿಸುತ್ತಿರಿ, ಇದರಿಂದ ನಿಮಗೆ ಅವಕಾಶವನ್ನು ಸ್ವತಃ  ಪ್ರಸ್ತುತಗೊಂದಾಗ ನೀವು ಏನು ಮಾಡಬೇಕೆಂದು ನಿಮಗೆ ತಿಳಿಯುತ್ತದೆ.

ಪ್ರಖ್ಯಾತ ಎರ್ಲ್ ನೈಟಿಂಗೇಲ್ ಒಮ್ಮೆ ಹೇಳಿದ್ದರು, “ಮಾನವ ಮನಸ್ಸು ಭೂಮಿಯಲ್ಲಿ ಎಂದೂ ಪತ್ತೆಮಾಡದ ಒಂದು ಕೊನೆಯ ಮಹಾನ್ ಖಂಡವಾಗಿದೆ, ಅದು ನಿಮ್ಮ ವಿಸ್ಮಯಕರ ಕನಸುಗಳನ್ನು ಮೀರಿಸುವ ಸಂಪತ್ತಾಗಿದೆ”

  • ಏಕವ್ಯಕ್ತಿ ಪ್ರಯಾಣ

ನಿಮ್ಮ ಮನಸ್ಸಿನಲ್ಲಿ ನಿಮ್ಮ ಆಲೋಚನೆಗಳು ಸ್ವಯಂ ಒಳಗೊಂಡಿರುವುದು ಮುಖ್ಯವಾಗಿದೆ. ನಿಮ್ಮ ಕಲಾಕೃತಿಯನ್ನು ರಚಿಸುವ ಪ್ರಕ್ರಿಯೆಯಲ್ಲಿರುವಾಗ ನೀವು ಇತರ ಮನಸ್ಸಿನ ವ್ಯಕ್ತಿಗಳೊಂದಿಗೆ ಚರ್ಚೆಯನ್ನು ಹೊಂದಿದ್ದಲ್ಲಿ, ನೀವು ಇತರರ ಆಲೋಚನೆಗಳಲ್ಲಿ ನಿಮ್ಮನ್ನು ನೀವೇ ಕಳೆದುಕೊಳ್ಳಬಹುದು. ನಿಮ್ಮ ಸ್ವಂತ ಆಲೋಚನೆಗಳನ್ನು ಇತರರ ಆಲೋಚನೆಗಳೊಂದಿಗೆ ಮಾಲಿನ್ಯಗೊಳಿಸಬೇಡಿ. ಏಕಾಂಗಿಯಾಗಿರುವುದು ಚಿನ್ನ!

  • ಸೃಜನಶೀಲತೆ

ಈ ಸಾಧನೆಗಾಗಿ ಮೊದಲ ಹೆಜ್ಜೆ, “ಇದು ಹೇಗೆ” ಮತ್ತು ನಿಮಗೆ ಸ್ಫೂರ್ತಿ ನೀಡುವ ಛಾಯಾಚಿತ್ರದ ಎಕ್ಷಿಫ್ ಮಾಹಿತಿಯ ಬಗ್ಗೆ ಇತರ ಛಾಯಾಚಿತ್ರಕರನ್ನು ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯ ಕೇಳುವುದನ್ನು ನಿಲ್ಲಿಸುವುದು ಮತ್ತು ಅದರಿಂದ ಸ್ಫೂರ್ತಿಯನ್ನು ಮಾತ್ರ ಪಡೆದು, ನಿಮ್ಮ ಸ್ವಂತ ವಿಧಾನಗಳೊಂದಿಗೆ ರಚಿಸುವುದು. ಪ್ರಕೃತಿ ನಿಮ್ಮ ಭೂದೃಶ್ಯ ಪ್ರಯಾಣಕ್ಕಾಗಿ ಕಚ್ಚಾ ವಸ್ತುವಾಗಿದೆ. ನಿಮ್ಮ ಆಲೋಚನೆಯ ತಕ್ಕಂತೆ ರೂಪಿಸಲು ಕಲ್ಪನೆಯನ್ನು ಬಳಸುವುದು ನಿಮಗೆ ಬಿಟ್ಟದ್ದು. ನಿಮ್ಮ ಸಮಯದ ಬಗ್ಗೆ ಗಮನವಿರಲಿ, ಏಕೆಂದರೆ ನಿಮ್ಮ ಸುತ್ತಲಿರುವ ಪ್ರಕೃತಿಯ ಬಣ್ಣಗಳು, ಗೋಸುಂಬೆಯ ಚರ್ಮದಂತೆ ಬದಲಾಗುತ್ತಿರುತ್ತದೆ.

  • ಆಯಾಸ

ಇದನ್ನು ಕೇಳಲು ವಿಚಿತ್ರವಾಗಿದೆ, ನಾನು ಆಗಾಗ ಸೆರೆಹಿಡಿದ ಛಾಯಾಚಿತ್ರಗಳು, ಅದು ನನ್ನ ಆಲೋಚನೆಯಲ್ಲಿರದಿದ್ದರು, ನನ್ನಲ್ಲಿ ಈ ತರವಾದ ಚಿತ್ರಗಳ್ಳನ್ನು ಸೆರೆಹಿಡಿಯುವ ಸಾಮರ್ಥ್ಯ ನನ್ನಲ್ಲಿತ್ತೇ ಎಂಬ ಬಗ್ಗೆ ನನ್ನಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ. ನಿಮ್ಮ ದೇಹವು ಬದುಕುಳಿಯುವ ತವಕದಲ್ಲಿದ್ದಾಗ, ಸೃಜನಶೀಲತೆ ಅತೀ ಹಚ್ಚಿರುತ್ತದೆ. ನಿಮ್ಮ ಪ್ರಯೋಜನಕ್ಕಾಗಿ ಸೃಜನಶೀಲತೆ ಬಳಸುವ ಕಲೆ ಕಲಿಯಿರಿ ಆದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಖಚಿತಪಡಿಸಿಕೊಳ್ಳಿ.

  • ಪೂರ್ಣಗೊಳಿಸುವಿಕೆ

ನೀವು ರಚಿಸುವ ಎಲ್ಲಾ ಛಾಯಾಚಿತ್ರಗಳನ್ನು ಸಂಸ್ಕರಿಸುವುದು ಅತ್ಯಗತ್ಯ. ಸಂಸ್ಕರಿಸದ ಚಿತ್ರವು ಮರದಂತೆ. ಸಂಸ್ಕರಿಸಿದ ಚಿತ್ರವು ಮುಗಿಸಿ, ರೂಪಿಸಿ, ಮತ್ತು ನಿಮ್ಮ ಇಚ್ಚೆಯಂತೆ ಹೊಳಪುಗೊಂಡ ಪೀಠೋಪಕರಣಗಳಂತೆ.

ನಿಮ್ಮ ಚಿತ್ರವನ್ನು ಕ್ಯಾಮರಾದ ಪೂರ್ವನಿಯೋಜಿತ ನಡವಳಿಕೆಯಿಂದ ಸಂಯೋಜಿಸಲು ನೀವು ಬಯಸುವುದಿಲ್ಲವಾದಲ್ಲಿ. ಇದು ‘ನೀವು’ ಲೆನ್ಸ್ ಹಿಂದೆ ಸೃಷ್ಟಿಕರ್ತರಾಗಿರುವುದು. ನಿಮ್ಮ ಹಡಗಿನ ನಿಯಂತ್ರಣವನ್ನು ತೆಗೆದುಕೊಳ್ಳಿ, ಸಂಸ್ಕರಣೆ ಮತ್ತು ಮುದ್ರಿಸುವ ಹಂತಕ್ಕೆ ತೆಗೆದುಕೊಂಡು ಹೋಗಿ. ಮುದ್ರಿಸಲು ಉದ್ದೇಶವಿಲ್ಲದೆ ಒಂದು ಛಾಯಾಚಿತ್ರ ಅಪೂರ್ಣವಿದ್ದಂತೆ.

  • ತಿರಸ್ಕಾರ

ಇದು ಪುರುಷರಿಗೆ ಮಾತ್ರ ಅನ್ವಯಿಸಬಹುದು ಮತ್ತು ಹೆಚ್ಚು ಒಲವು ನಿಮ್ಮ ಉತ್ಸಾಹದೊಂದಿಗೆ ಇರುತ್ತದೆ. ಅದನ್ನು ನಿಭಾಯಿಸುವ ಸರಿಯಾದ ಮಾರ್ಗವನ್ನು ನೀವು ತಿಳಿದಿದ್ದರೆ, ತಿರಸ್ಕಾರದಲ್ಲಿ ಸಾಕಷ್ಟು ಧನಾತ್ಮಕತೆ ಇರುತ್ತದೆ. ಪುರುಷತ್ವವು ಸವಾಲುಗಳಿಂದ ಬೆಳೆಯುತ್ತದೆ. ನಿಮ್ಮ ಕಲೆಯಲ್ಲಿ ನೀವು ಉತ್ತಮಗೊಳ್ಳಲು, ತಿರಸ್ಕಾರವನ್ನು ಸವಾಲಿನಂತೆ ಎದುರಿಸಿ. ಉದಾಹರಣೆಗೆ, ನಿಮ್ಮ ಮುದ್ರಣಗಳ ಯೋಗ್ಯತೆಯನ್ನು ಪರೀಕ್ಷಿಸಲು ಪೂರ್ಣಗೊಂಡ ಮುದ್ರಣಗಳನ್ನು ನೇರ ಮಾರಾಟಕ್ಕಾಗಿ ತೆಗೆದುಕೊಂಡು ಹೋಗಿ. ನೀವು ಗ್ರಾಹಕರನ್ನು ಪಡೆದರೆ, ಅದು ನಿಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ತಿರಸ್ಕಾರವನ್ನು ಎದುರಿಸಿದರೆ, ಅದು ನಿಮ್ಮ ಪುರುಷತ್ವವನ್ನು ಪೋಷಿಸುತ್ತದೆ. ತಿರಸ್ಕಾರವು ರಕ್ತ, ನೀವು ಜಿಗಣೆ!

  • ಸಂವಹನ

ನೀವು ಅಂತರ್ಮುಖಿಯಾಗಿದ್ದರೆ ಅತೀ ಮುಖ್ಯವಾಗಿ ಪರಿಣಿತರಾಗಬೇಕಾದ ಕೌಶಲ್ಯವಾಗಿದೆ. ಹೆಚ್ಚಿನ ಕಲಾವಿದರು ಅಂತರ್ಮುಖಿಗಳಾಗಿರುತ್ತಾರೆ. ನಿಮ್ಮ ಸಂವಹನ ಕೌಶಲ್ಯಗಳನ್ನು ಹೆಚ್ಚಿಸುವುದರಿಂದ ನಿಮ್ಮನ್ನು ಹೆಚ್ಚು ಸುಲಭವಾಗಿ ತಲುಪಲು ನೆರವಾಗುತ್ತದೆ. ಆಹಾರ, ನೀರು ಮತ್ತು ಆಶ್ರಯದ ಮೂಲಭೂತ ಮಾನವ ಅಗತ್ಯಗಳ ಬಗ್ಗೆ ಕೇಳುವ ಸಂದರ್ಭಗಳಲ್ಲಿ, ಅಭಿಪ್ರಾಯ ಪಡೆಯುವಲ್ಲಿ, ದೂರಸ್ಥಳಗಳಲ್ಲಿ ನೀವು ಚಲಿಸುತ್ತಿರುವಾಗ, ನೀವು ಚಾಲನೆ ಮಾಡುವಾಗ ಅಥವಾ ನಿಮ್ಮ ಮಾರ್ಗವನ್ನು ಹುಡುಕುಲು ಸಹ ಇದು ಸಹಾಯ ಮಾಡುತ್ತದೆ. ನೀವು ಮಾತನಾಡುವಾಗ ಇನ್ನಷ್ಟು ನಗೆ ಬೀರುವುದನ್ನು ಕಲಿಯಿರಿ. ನಗೆ ಒಂದು ಸಾರ್ವತ್ರಿಕ ಭಾಷೆ, ಅದು ನೀವು ಅನ್ಯಲೋಕ ಸ್ಥಳದ ಛಾಯಾಚಿತ್ರ ಹಿಡಿಯುವಾಗ ಭಾಷೆಯ ಅಡೆತಡೆಗಳನ್ನು ಮುರಿಯುವುದಕ್ಕೆ ಸಹಾಯ ಮಾಡುತ್ತದೆ.

  • ಅವಕಾಶ

ನಿಮಗೆ ಅಗತ್ಯವಿರುವ ಚಿತ್ರವನ್ನು ರಚಿಸಲು ಸಾಧ್ಯವಾಗದೆ ಇರಬಹುದು, ಇದಕ್ಕೆ ಅಭ್ಯಾಸದ ಅವಶ್ಯಕತೆ ಇರುತ್ತದೆ. ಇದು ನಿಯಂತ್ರಿಸಲಾಗದ ಪರಿಸ್ತಿತಿಗಳಿಂದ, ಹವಾಮಾನದ ಪರಿಸ್ಥಿತಿಗಳು, ನೀವು ಆರಂಭದಲ್ಲಿ ಯೋಚಿಸಿ ನಂತರ ತಲುಪಲಾಗದ ಸ್ಥಳಗಳು ಅಥವಾ ನಿಮ್ಮ ಸೃಜನಶೀಲತೆಯನ್ನು ಅನ್ವಯಿಸಲು ಸರಿಯಾದ ದೃಷ್ಟಿಕೋನವನ್ನು ಕಂಡುಹಿಡಿಯಲು ಸಾಧ್ಯವಾಗದೇ ಇರುವುದು. ಸಂಪೂರ್ಣ ವಿಭಿನ್ನ ಸಂಯೋಜನೆಗಾಗಿ ನೀವು ಇತರ ಅವಕಾಶಗಳನ್ನು ಹುಡುಕುವ ಅಗತ್ಯವಿದೆ. ಕೆಲವೊಮ್ಮೆ ವಜ್ರವು ಸುಮ್ಮನೆ ನಿಮ್ಮ ಕಣ್ಣಿನ ಮೂಲೆಯಲ್ಲಿ ಬಿದ್ದಿರಬಹುದು.

  • ಉಪಕರಣಗಳು

ಒಂದು ಉತ್ತಮ ಗಟ್ಟಿಮುಟ್ಟಾದ ಟ್ರೈಪಾಡ್ ಗಾಳಿಯ ಹವಾಮಾನದ ಸಂದರ್ಭದಲ್ಲಿ ನಿಮ್ಮ ಕ್ಯಾಮೆರಾವನ್ನು ಸ್ಥಿರವಾಗಿಟ್ಟುಕೊಳ್ಳಲು ಅವಶ್ಯಕ. ಯಾವುದೇ ನಿಮಿಷದಲ್ಲಿ ಅಲ್ಲಾಡಿದರೆ ನೀವು ಸೆರೆಹಿಡಿದ ಚಿತ್ರಗಳನ್ನು ಹಾಳು ಮಾಡಬಹುದು. ಕ್ಕ್ಯಾಮರಾದ ಕುತ್ತಿಗೆ ಪಟ್ಟಿಗಳನ್ನು ತೆಗೆದುಹಾಕಿ, ಗಾಳಿಯ ಪರಿಸ್ಥಿತಿಗಳಲ್ಲಿ ಕ್ಯಾಮೆರಾ ಅಲ್ಲಾದುವುದನ್ನು ತಪ್ಪಿಸುತ್ತದೆ ಮತ್ತು ನಿಮ್ಮ ಚಿತ್ರಗಳ ತೀಕ್ಷ್ಣತೆಯನ್ನು ಕಡಿಮೆಗೊಳಿಸುತ್ತದೆ. ನೀವು ದೀರ್ಘಾವಧಿಯ ಕಾಲ ಸೆರೆಹಿಡಿಯುವುದಕ್ಕಾಗಿ, ನೀರಿನ ಆಳದಲ್ಲಿ ಸೆರೆಹಿಡಿಯಲು ಹಿಚ್ಚಿನ ಕಾಲ ಸಿಪಿಎಲ್ ಫಿಲ್ಟರ್ಗಳ ಅವಶ್ಯಕತೆ ಇರುತ್ತದೆ ಮತ್ತು ದೂರದನ್ನು ಸೆರೆಹಿಡಿಯಲು ಎನ್ಡಿ ಫಿಲ್ಟರ್ಗಳ ಅವಶ್ಯಕತೆ ಇರುತ್ತದೆ. ಲೆನ್ಸ್ ಬಟ್ಟೆ ನಿಮ್ಮ ಲೆನ್ಸ್ನಲ್ಲಿ ಸೂಕ್ಷ್ಮ ಮಣ್ಣನ್ನು ಸ್ವಚ್ಛಗೊಳಿಸಲು ಮತ್ತು ಲ್ಯಾಂಡ್ಸ್ಕೇಪ್ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವಾಗುತ್ತದೆ. ನಿಮ್ಮ ಲೆನ್ಸ್  ಅನ್ನು ಪ್ರತೀ ಛಾಯಾಚಿತ್ರ ಸೆರೆಹಿಡಿಯುವ ಸಂದರ್ಭಕೊಮ್ಮೆ ಶುಚಿಗೊಳಿಸಿ. ನಿಮ್ಮ ಚಿತ್ರಗಳಲ್ಲಿ ಚುಚ್ಚು ಬೆಳಕನ್ನು ತಪ್ಪಿಸಲು ಲೆನ್ಸ್ ಹುಡ್ ಸಹಾಯವಾಗುತ್ತದೆ.  ಚುಚ್ಚು ಬೆಳಕು ಮೃದು ಪ್ರತಿಗಳಲ್ಲಿ ಕಾಣದೆ ಇರಬಹುದು ಆದರೆ ನಿಮ್ಮ ದೊಡ್ಡ ಮುದ್ರಿಣದ ಮೇಲೆ ಕಾಣಿಸುತ್ತದೆ.

  • ಶೌರ್ಯ

ಒಬ್ಬ ನಾಯಕನಂತೆ ಆಗುವ ಅವಶ್ಯಕತೆ ಇಲ್ಲ ಆದರೆ ವಿವಿಧ ರೀತಿಯಲ್ಲಿ ಯೋಚಿಸುವ ಧೈರ್ಯ ಬೇಕಾಗುತ್ತದೆ. ಸೇಬಿನ ಬೀಜದ ನಿಕಟ ಚಿತ್ರವು ನೂರಾರು ಖರೀದಿದಾರರನ್ನು ಪಡೆಯವಂತೆ ಮಾಡಬಹುದು. ಅಥವಾ ಒಬ್ಬ ದೈತ್ಯಾಕಾರದ ಖರೀದಿದಾರನು ಅವನ ಹುಟ್ಟುಹಬ್ಬದಂದು, ಅವನ ದಹನ ಮಾಡಿದ ನಂತರವೂ, ಯಾರು ಎಂದು ಊಹಿಸಿ? ಯಾರೊಬ್ಬರಿಗೆ ಯಾವುದೇ ಹಾಸ್ಯಾಸ್ಪದ ಟಿಪ್ಪಣಿಯ ಭಯವಿಲ್ಲದೆ ಹೊಸದನ್ನು ಸೃಷ್ಟಿಸಲು ಧೈರ್ಯವಿದಲ್ಲಿ, ಅವರಿಗೆ ಸೃಷ್ಟಿಸಲು ಲಕ್ಷಾಂತರ ಅವಕಾಶ ದೊರೆಯುತ್ತದೆ ಮತ್ತು ಅವರು ಯಾವುದೇ ಸ್ಪರ್ಧೆಗೆ ಚಿಂತಿಸುವ ಅವಶ್ಯಕತೆಯಿಲ್ಲ.

 

Tollfreeroad.in 5-6-7 ಅಕ್ಟೋಬರ್ 2018ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡಿಯುವ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೃಂಗದಲ್ಲಿ ಪಾಲ್ಗೊಳುತ್ತಿದ್ದು, ವಿನೀತ್ ಅವರನ್ನು ಇಲ್ಲಿ ನೀವು ಮಾತನಾಡಿಸಬಹುದು ಹಾಗು ಅವರ ಕೆಲವು ಛಾಯಾಚಿತ್ರಗಳನ್ನು ಕಾಣಬಹುದು.

ವಿನೀತ್ ಪ್ರಧಾನ್
09008909779

ನಾನು ಲ್ಯಾಂಡ್ಸ್ಕೇಪ್ ಛಾಯಾಚಿತ್ರಗಳನ್ನು ಸೆರೆಹಿಡಿಯಲು ತುಂಬಾ ಹಂಬಲಿಸುತ್ತೇನೆ ಮತ್ತು ಆಫ್-ರೋಡ್ ಡ್ರೈವಿಂಗ್ನಲ್ಲಿ ತುಂಬಾ ಆಸಕ್ತಿ ಹೊಂದಿದ್ದೇನೆ. ಇವೆರೆಡು ಆಸಕ್ತಿಗಳು ನನಗೆ ಆಶಿರ್ವಾದವಿದ್ದಂತೆ ಏಕೆಂದರೆ ನಾನು ಇದರಲ್ಲಿ ಸಂತೋಷವನ್ನು ಕಂಡುಕೊಂಡಿದ್ದೇನೆ. ಜನರು ನನ್ನ ಛಾಯಾಚಿತ್ರಗಳನ್ನು ನೋಡಿ ಮೆಚ್ಚಿದಾಗ ಮತ್ತು ಅದು ಅವರ ಮನಸ್ಸಿನಲ್ಲಿ ಶಾಂತಿಯನ್ನುಂಟು ಮಾಡಿದಾಗ ನನಗೆ ಗೌರವವೆನಿಸುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ