ಎಕ್ಸಿಸ್ ಮ್ಯೂಚುವಲ್ ಫಂಡ್ ನಿಂದ ಎಕ್ಸಿಸ್ ಗ್ರೋತ್ ಆಪರ್ಚುನಿಟಿಸ್ ಫಂಡ್ ಬಿಡುಗಡೆ

Varta Mitra News

ಬೆಂಗಳೂರು, ಸೆ.30- ಭಾರತದ ಪ್ರಮುಖ ಅಸೆಟ್ ಮ್ಯಾನೇಜ್‍ಮೆಂಟ್ ಕಂಪೆನಿಗಳಲ್ಲಿ ಒಂದಾದ ಎಕ್ಸಿಸ್ ಮ್ಯೂಚುವಲ್ ಫಂಡ್ ತನ್ನ ಹೊಸ ಎಕ್ಸಿಸ್ ಗ್ರೋತ್ ಆಪರ್ಚುನಿಟಿಸ್ ಫಂಡ್ ಬಿಡುಗಡೆ ಮಾಡಿದೆ.
ವಿಶ್ವದ ಷೇರು ಮಾರುಕಟ್ಟೆಯಲ್ಲಿ ಭಾರತೀಯರ ಪಾಲು ಕೇವಲ ಶೇ.3ರಷ್ಟಿರುವುದನ್ನು ಗಮನಿಸಿದರೆ ದೇಶೀಯ ಮ್ಯೂಚುವಲ್ ಫಂಡ್ ಹೂಡಿಕೆದಾರರು ವಿಶ್ವದ ಮಾರುಕಟ್ಟೆಯ ಶೇ.97ರಷ್ಟು ಅವಕಾಶಗಳನ್ನು ಬಳಸಿಕೊಳ್ಳದಿರುವುದು ಸ್ಪಷ್ಟವಾಗುತ್ತದೆ.
ಈ ಹಿನ್ನೆಲೆಯಲ್ಲಿ ಎಕ್ಸಿಸ್‍ನ ಈ ಹೊಸ ಫಂಡ್ ಮೂಲಕ ಜಾಗತಿಕ ಮಟ್ಟದ ವೈವಿಧ್ಯಮಯ ಈಕ್ವಿಟಿಯನ್ನು ಬಳಸಿಕೊಳ್ಳಲು ಭಾರತೀಯರಿಗೆ ಅವಕಾಶ ದೊರೆತಿದೆ.
ಗರಿಷ್ಟ ಮಟ್ಟದಲ್ಲಿ ರಿಟನ್ರ್ಸ್ ಪಡೆಯಲು ಜಾಗತಿಕ ಮಟ್ಟದ ಈ ಹೂಡಿಕೆಯಲ್ಲಿ ಸಾಕಷ್ಟು ಅವಕಾಶಗಳಿವೆ.
ಈ ಫಂಡ್ ದೇಶೀಯ ಶೇ.30 ರಿಂದ 35 ರಷ್ಟು ಮತ್ತು ವಿದೇಶಿಯ ಶೇ.35ರಷ್ಟು ಪಾಲಿನ ಗುರಿ ಹೊಂದಿದೆ. ವಿದೇಶಿ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆ ತತ್ತ್ವದ ಆಧಾರದಲ್ಲಿ ಎಕ್ಸಿಸ್ ಕಾರ್ಯೋನ್ಮುಖವಾಗಿದ್ದು, ಇದರಿಂದ ಉತ್ತಮ ರೀತಿಯ ರಿಟನ್ಸ್ ಮತ್ತು ಪ್ರಗತಿ ಕಾಣಲು ಸಾಧ್ಯ.
ಎಕ್ಸಿಸ್ ಎಎಂಸಿ ವ್ಯವಸ್ಥಾಪಕ ನಿರ್ದೇಶಕ ಚಂದ್ರೇಶ್ ಕುಮಾರ್ ನಿಗಮ್ ಮಾತನಾಡಿ, ಭಾರತೀಯ ಹೂಡಿಕೆದಾರರು ಜಾಗತಿಕ ಮಟ್ಟದ ಬ್ರ್ಯಾಂಡ್‍ಗಳ ಗ್ರಾಹಕರಾಗಿದ್ದರೆ ಅವರು ಜಾಗತಿಕ ಮಟ್ಟದ ಪ್ರಗತಿಯ ಪಾಲುದಾರರಾಗಲಿದ್ದಾರೆ.
ಈ ಫಂಡ್‍ನ ಕನಿಷ್ಠ ಅರ್ಜಿಯ ಮೊತ್ತ 5,000 ರೂ. ಆಗಿದ್ದು, ಇದು ಡೈರೆಕ್ಟ್ ಮತ್ತು ರೆಗ್ಯುಲರ್ ಪ್ಲಾನ್‍ಗಳನ್ನು ಹೊಂದಿದೆ. ಇವೆರಡರಲ್ಲೂ ಗ್ರೋತ್ ಮತ್ತು ಡಿವಿಡೆಂಡ್ ಅವಕಾಶವಿದ್ದು, ನಿಗದಿತ 12 ತಿಂಗಳೊಳಗೆ ವಾಪಸ್ ತೆಗೆದುಕೊಂಡರೆ ಶೇ.1ರಷ್ಟು ಎಕ್ಸಿಟ್ ಲೋಡ್ ಹಣ ಕಡಿತಗೊಳಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ