ತೆಲುಗಿನ ನಟ ರವಿತೇಜಾಗೆ ‘ಪಟಾಕಿ’ ಬೆಡಗಿ ನಭಾ ನಟೇಶ್ ನಾಯಕಿ!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ನಭಾ ನಟೇಶ್ ಗೆ ಅದೃಷ್ಟ ಖುಲಾಯಿಸಿದ್ದು ಇದೀಗ ತೆಲುಗಿನ ಸ್ಟಾರ್ ನಟ ರವಿತೇಜಾಗೆ ನಾಯಕಿಯಾಗುತ್ತಿದ್ದಾರೆ.
ತೆಲುಗಿನ ನನ್ನು ದೊಚುಕುಂದುವಟೆ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ್ದ ನಭಾ ನಟೇಶ್ ಇದೀಗ ತಮ್ಮ ಎರಡನೇ ಚಿತ್ರದಲ್ಲೇ ರವಿತೇಜಾ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆ.
ಚಿತ್ರವನ್ನು ಆನಂದ್ ನಿರ್ದೇಶಿಸುತ್ತಿದ್ದಾರೆ. ಆನಂದ್ ಇದಕ್ಕೂ ಮುಂಚೆ ಒಕ ಕ್ಷಣಂ, ಎಕ್ಕಡಿಕಿ ಪೊತಾವು ಚಿನ್ನವಾಡ ಮತ್ತು ಟೈಗರ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ತಮ್ಮ ಚಿತ್ರಕ್ಕೆ ನಾಯಕಿಯಾಗಿ ನಭಾ ನಟೇಶ್ ರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಚಿತ್ರವನ್ನು ರಾಮ್ ತಲ್ಲೂರಿ ನಿರ್ಮಿಸುತ್ತಿದ್ದು ಎಸ್ ತಮನ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರ ನವೆಂಬರ್ ನಲ್ಲಿ ಸೆಟ್ಟೇರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ