ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಹೃದಯದ ರಕ್ಷಕರು ಅಭಿಯಾನ

ಬೆಂಗಳೂರು, ಸೆ.30- ಹೃದಯ ರಕ್ತನಾಳಗಳ ರೋಗಗಳ ಕುರಿತು ಶಿಕ್ಷಣ ನೀಡಿ,ಮತ್ತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಭಾರತದ ಮುಂಚೂಣಿಯ ಆರೋಗ್ಯ ಶುಶ್ರೂಷೆ ಪೂರೈಕೆದಾರ ಸಂಸ್ಥೆಯಾದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವಿಶ್ವ ಹೃದಯ ದಿನದ ಅಂಗವಾಗಿ ಗಾರ್ಡಿಯನ್ಸ್ ಆಫ್ ಹಾರ್ಟ್(ಹೃದಯದ ರಕ್ಷಕರು) ಅಭಿಯಾನವನ್ನು ಅನಾವರಣಗೊಳಿಸಿದೆ.

ವಿಶ್ವ ಹೃದಯ ದಿನ ಮತ್ತು ಶಿಕ್ಷಕರ ದಿನಗಳ ಅನನ್ಯ ಸಹಭಾಗಿತ್ವವಾದ ಅಭಿಯಾನ 25000 ಹಾರ್ಟ್ ಸ್ಮಾರ್ಟ್ ಟೀಚರ್‍ಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಇವರು ಯುವ ಪೀಳಿಗೆಯಲ್ಲಿ ಹೃದಯರಕ್ತನಾಳಗಳ ರೋಗ(ಸಿವಿಡಿ) ಕುರಿತು ಜಾಗೃತಿ ಮೂಡಿಸಲಿದ್ದಾರೆ. ವಿಜಯವಾಡ, ಮಂಗಳೂರು, ಗೋವಾ, ಜೈಪುರ್ ಮತ್ತು ದ್ವಾರಕ(ಹೊಸದಿಲ್ಲಿ) ಮುಂತಾದ ಕಡೆಗಳಲ್ಲಿರುವ ಮಣಿಪಾಲ್ ಸಂಸ್ಥೆಯ ವಿವಿಧ ಕೇಂದ್ರಗಳಲ್ಲಿ ಈ ಸಾಂಸ್ಥಿಕ ಅಭಿಯಾನವನ್ನು ನಡೆಸಲಾಗುತ್ತಿದೆ.
ಈ ಅನನ್ಯ ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರ ಮತ್ತು ಟಿವಿ ನಿರ್ದೇಶಕ, ನಿರ್ಮಾಪಕ ಮತ್ತು ನಟ ಟಿ.ಎನ್. ಸೀತಾರಾಮ್ ಮತ್ತು ಎಂಎಲ್‍ಸಿ ಪುಟ್ಟಣ್ಣ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಹಾಜರಿದ್ದರು.

ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಚೇರ್ಮನ್ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ವಿಶ್ವವ್ಯಾಪಿಯಾಗಿ ಹೃದಯರೋಗದ ಹೊರೆ ಹೆಚ್ಚುತ್ತಿದ್ದು ಭಾರತ ಇದಕ್ಕೆ ಹೊರತಾಗಿಲ್ಲ. ಬಹುತೇಕ ಹೃದಯರೋಗಗಳು ಗಡ್ಡೆಗಳಂತೆ ದೇಹದೊಳಗೆ ಉಂಟಾಗುವುದಿಲ್ಲ. ಬದಲಿಗೆ ಇವು ನಮ್ಮ ಜೀವನಶೈಲಿಯ ಫಲಿತಾಂಶಗಳಾಗಿವೆ. ಆಹಾರಕ್ರಮ, ವ್ಯಾಯಾಮ, ಧೂಮಪಾನದಿಂದ ದೂರವಿರುವುದು, ಜೀವನಶೈಲಿಯಲ್ಲಿನ ಬದಲಾವಣೆಗಳು ಈ ರೋಗ ಜೀವಕ್ಕೆ ಮಾರಕವಾಗದಂತೆ ತಡೆಯಬಹುದು ಎಂದು ಸಂಶೋಧನೆ ತಿಳಿಸಿದೆ. ಈ ಅಭಿಯಾನದ ಮೂಲಕ ರೋಗತಡೆಯುವ ಆರೈಕೆಯನ್ನು ಎಳೆಯ ವಯಸ್ಸಿನಲ್ಲಿಯೇ ಪೆÇ್ರೀ ನಾವು ಇಚ್ಛಿಸುತ್ತೇವೆ ಎಂದರು.

ಕಾರ್ಯಕ್ರಮದ ಸಮಾರೋಪ ಫೆಬ್ರವರಿ 1, 2019ರಂದು ರಾಷ್ಟ್ರೀಯ ಕೆಂಪು ದಿನದಂದು ನಡೆಯಲಿದ್ದು, ಅಂದು 25,000 ಶಿಕ್ಷಕರು ಹಾರ್ಟ್ ಸ್ಮಾರ್ಟ್ ಪ್ರಮಾಣಪತ್ರ ಪಡೆಯಲಿದ್ದಾರೆ.
ಕನ್ನಡ ಚಲನಚಿತ್ರ ಮತ್ತು ಟಿವಿ ನಟ, ನಿರ್ದೇಶಕ, ನಿರ್ಮಾಪಕ ಟಿ.ಎನ್. ಸೀತಾರಾಮ್, ವಿಭಾಗೀಯ ಮುಖ್ಯಸ್ಥರು ಮತ್ತು ಹೃದಯ ಮತ್ತು ಎದೆಭಾಗದ ಶಸ್ತ್ರಚಿಕಿತ್ಸಾ ಸಲಹಾತಜ್ಞರಾದ ಡಾ. ದೇವಾನಂದ ಎನ್.ಎಸ್., ಹೃದಯರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಂಜನ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ