ಜಾನಪದ ಸಮಗ್ರ ಅಧ್ಯಯನ ನಡೆಸಿ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಬೆಳೆಯುವಂತೆ ಮಾಡಿದರು ದೇಜಗೌ

ಬೆಂಗಳೂರು, ಸೆ.30-ವಿಶ್ವ ಮಾನವ ಕುವೆಂಪು ಅವರ ಶಿಷ್ಯರಾಗಿದ್ದ ದೇಜಗೌ ಅವರು ದಕ್ಷಿಣ ಭಾರತದಲ್ಲಿ ಜಾನಪದ ಕುರಿತಂತೆ ಸಮಗ್ರ ಅಧ್ಯಯನ ನಡೆಸಿ ಅದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಬೆಳೆಯುವಂತೆ ಮಾಡಿದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಕಾರದ ಅಧ್ಯಕ್ಷ ಪೆÇ್ರ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕøತಿಕ ವೇದಿಕೆ ವತಿಯಿಂದ ನಗರದ ಕಸಾಪ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ನಾಡೋಜ ಡಾ.ದೇಜಗೌ ಅವರ ಜನ್ಮಶತಮಾನೋತ್ಸವ, ವಿಶ್ವಚೇತನ ಪ್ರಶಸ್ತಿ ಪ್ರದಾನ, ಗೀತಗಾಯ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿ ಜಾನಪದ ಅಧ್ಯಯನ ನಡೆಯಬೇಕು ಎಂಬ ಮಹತ್ವದ ಗುರಿಯನ್ನು ಹೊಂದಿದ್ದ ದೇಜಗೌ ಅವರು ಈ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಿ ಯಶಸ್ವಿಯಾದರು. ಆದರೆ ಇಂದು ವಿಶ್ವವಿದ್ಯಾಲಯಗಳಲ್ಲಿ ಜನಪದದ ಬಗ್ಗೆ ಆಳವಾದ ಅಧ್ಯಯನ ನಡೆಯುತ್ತಿಲ್ಲ ಎಂದು ವಿಷಾದಿಸಿದರು.

ದೇಜಗೌ ಅವರ ಪ್ರಯತ್ನದಿಂದಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ವಸ್ತುಸಂಗ್ರಹಾಲಯ ಸ್ಥಾಪನೆಯಾಯಿತು. ಇದರ ಕೀರ್ತಿ ಅವರಿಗೇ ಸಲ್ಲಬೇಕು. ವಿಶ್ವವಿದ್ಯಾಲಯದ ಕುಲಪತಿ ಇದನ್ನು ಇನ್ನಷ್ಟು ಎತ್ತರಕ್ಕೆ ಬೆಳಸಬೇಕು ಎಂದು ಮನವಿ ಮಾಡಿದರು.

ಕುವೆಂಪು ಅವರ ನಾಡಗೀತೆ ಇಂದು ಭಾಷಾಂತರದ ಮೂಲಕ ಇಡೀ ಜಗತ್ತಿಗೆ ಕನ್ನಡದದ ಲೋಕದರ್ಶನ ಮಾಡಿಸಿದೆ. ರಾಮಾಯಣವನ್ನು ವಾಲ್ಮೀಕಿ ಒಬ್ಬ ಮಾತ್ರ ಸೃಷ್ಟಿಸಿಲ್ಲ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯರು ರಾಮಾಯಣವನ್ನು ಸೃಷ್ಟಿಸಿದರು. ಮೂಲ ರಾಮಾಯಣದಲ್ಲಿ ಶೋಷಿತರಾಗಿದ್ದವರನ್ನು ಕುವೆಂಪು ತಮ್ಮ ರಾಮಾಯಣದಲ್ಲಿ ಪವಿತ್ರರನ್ನಾಗಿಸಿದರು. ಇದೇ ಕಾರಣಕ್ಕೆ ಕುವೆಂಪು ಜಗತ್ತಿಗೆ ಇಷ್ಟವಾಗುತ್ತಾರೆ ಎಂದರು.
ಕಥೆಗಾರ ಡಾ.ಕೆ.ಸತ್ಯನಾರಾಯಣ, ಹಾಸನ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ, ಬಿಬಿಎಂಪಿ ಮುಖ್ಯ ಅಭಿಯಂತರ ಕೆ.ಟಿ. ನಾಗರಾಜ್, ಲೆಕ್ಕಪರಿಶೋಧಕ ರಾಘವೇಂದ್ರ ಪುರಾಣಿಕ್, ಸಮಾಜ ಸೇವಕ ಕೃಷ್ಣೇಗೌಡ ಅವರಿಗೆ ವಿಶ್ವಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಕøತಿ ವಿವಿ ಕುಪತಿ ಡಾ.ಪದ್ಮಾ ಶೇಖರ್, ಕವಿ ಡಿ.ಸತೀಶ್ ಜವರೇಗೌಡ, ಕುವೆಂಪು ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ