ಪ್ರಧಾನಿ ಮೋದಿ ಮನ್ ಕೀ ಬಾತ್

ನವದೆಹಲಿ: ನಮಗೆ ಶಾಂತಿ ಮುಖ್ಯ. ಆದರೆ ಶಾಂತಿಗಾಗಿ ಆತ್ಮ ಗೌರವ ಹಾಗೂ ಸಾರ್ವಭೌಮತ್ವವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಜಿಕಲ್ ಸ್ಟ್ರೈಕ್ ಗೆ ಎಡನೇ ವರ್ಷ ಪೂರ್ಣಗೊಂಡ ಬೆನ್ನಲ್ಲೇ ಆಯೋಜಿಸಲಾಗಿದ್ದ ಪರಾಕ್ರಮ ಪರ್ವ ಕುರಿತು ಮಾತನಾಡಿದರು. ನಮಗೆ ವಿಶ್ವ ಶಾಂತಿ ಮುಖ್ಯ. ದೇಶದ ಶಾಂತಿ ಕಾಪಾಡಲು ನಾವು ಬದ್ಧರಾಗಿದ್ದು, ಆತ್ಮ ಗೌರವ ಹಾಗೂ ದೇಶದ ಸಾರ್ವಬ್ಪುಮತ್ವದ ವಿಚಾರದಲ್ಲಿ ರಾಜಿ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮೂಲಕ ನಮ್ಮ ಯೋಧರು ಶತ್ರುಗಳಿಗೆ ನೀಡಿದ ತಕ್ಕ ಉತ್ತರವನ್ನು ಪ್ರಧಾನಿ ಶ್ಲಾಘಿಸಿದರು. ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಗೂ ಸೂಕ್ತ ಉತ್ತರ ನೀಡಲಿದ್ದಾರೆ ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ದೇಶದ ಶಾಂತಿ ಕದಡಲು ನಮ್ಮ ಸೈನಿಕರು ಎಂದಿಗೂ ಬಿಡುವುದಿಲ್ಲ ಎಂದರು.

ಪರಾಕ್ರಮ ಪರ್ವ ನಮ್ಮ ಸಶಸ್ತ್ರ ಪಡೆಗಳ ಸಮೃದ್ಧ ಪರಂಪರೆಯನ್ನು ನೆನಪಿಸುತ್ತದೆ. ದೇಶದ ಭದ್ರತೆ, ಏಕತೆ ಕುರಿತು ಇದು ಯುವಕರಿಗೆ ಸ್ಪೂರ್ತಿಯಾಗಿದೆ. ದೇಶದ ಪ್ರತೀ ಯುವಕನೂ ಭಾರತೀಯ ಸೇನೆ ಕುರಿತು ಅರಿಯಬೇಕು ಎಂದು ಹೇಳಿದರು. ವಿಶ್ವಯುದ್ಧದ ಸಂದರ್ಭದಲ್ಲಿ ದೇಶದ 2 ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಬಲಿದಾನ ಮಾಡಿದ್ದಾರೆ. ಸಂಬಂಧವೇ ಇಲ್ಲದ ಯುದ್ಧದಲ್ಲಿ ದೇಶದ ಸೈನಿಕರು ಹುತಾತ್ಮರಾದರು ಇದು ನಮಗೆ ವಿಶ್ವ ಶಾಂತಿ ಮುಖ್ಯ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ