ಇಂದಿನ ರಾಜಕಾರಣಿಗಳಿಗೆ ಆತ್ಮಸಾಕ್ಷಿ ಮತ್ತು ಜ್ಞಾನ ಇಲ್ಲ: ಸಾಹಿತಿ ಡಾ.ಕುಂ.ವೀರಭದ್ರಪ್ಪ

ಬೆಂಗಳೂರು, ಸೆ.29-ಇಂದಿನ ರಾಜಕಾರಣಿಗಳಿಗೆ ಆತ್ಮಸಾಕ್ಷಿ ಮತ್ತು ಜ್ಞಾನ ಎರಡೂ ಇಲ್ಲದಂತಾಗಿದೆ ಎಂದು ಸಾಹಿತಿ ಡಾ.ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ತಮ್ಮ ಕಿಲುಬು ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಸೂಕ್ಷ್ಮ ಸಂವೇದನೆ ಒಳಗೊಂಡಿರಬೇಕು. ಜನಸಾಮಾನ್ಯರ ಸೇವೆ ತಮ್ಮ ಮೊದಲ ಆದ್ಯತೆ ಎಂಬ ಭಾವನೆಯಲ್ಲಿರಬೇಕು. ಆಡಳಿತಕ್ಕೆ ಸಂಬಂಧಪಟ್ಟ ಅಧ್ಯಯನ ಶೀಲರಾಗಿರಬೇಕು. ಆದರೆ, ಅವರೆಡೂ ಇಲ್ಲದಂತಹ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಸಮಾಜ ನಾಚಿಕೆ ಪಡುವ ಕೃತ್ಯ. ದುರಂತ ಎಂದರೆ ಹತ್ಯೆ ಮಾಡಿದ ಆರೋಪಿಗಳ ಪರವಾಗಿ ಮಾತನಾಡುವ ಜನರು ನಮ್ಮ ಸಮಾಜದಲ್ಲಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಮತ್ತು ಸಂವಿಧಾನಕ್ಕೆ ಮಾಡಿದ ದ್ರೋಹ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ತಾವು ಪ್ರಶಸ್ತಿಗಾಗಿ ಯಾವುದೇ ಲಾಬಿ ನಡೆಸುವುದಿಲ್ಲ. ಪ್ರಶಸ್ತಿಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂಬುದು ನಿಜ. ಆದರೆ ಲಾಬಿಯಿಂದ ತೆಗೆದುಕೊಳ್ಳುವ ಪ್ರಶಸ್ತಿಗಳು ಯಾವ ವಿಶ್ವಾಸವನ್ನೂ ಮೂಡಿಸುವುದಿಲ್ಲ. ಕರ್ನಾಟಕ ಸರ್ಕಾರ ಸೇರಿದಂತೆ ಹತ್ತು ಹಲವು ಸಂಘ-ಸಂಸ್ಥೆಗಳು ನನ್ನನ್ನು ಗುರುತಿಸಿ ಪೆÇ್ರೀ ಅದಕ್ಕೆ ನಾನು ಚಿರಋಣಿ. ಸಾಹಿತಿಗಳು ಮತ್ತು ಲೇಖಕರ ವಿಷಯದಲ್ಲಿ ಕರ್ನಾಟಕ ಆಶಾದಾಯಕ ರಾಜ್ಯವಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಖ್ಯಾತ ಲೇಖಕರು ಬರೆದ ಪುಸ್ತಕಗಳ 500 ಪ್ರತಿಗಳೂ ಮಾರಾಟವಾಗುವುದಿಲ್ಲ. ಆದರೆ, ನಮ್ಮಲ್ಲಿ ಉತ್ತಮ ಪೆÇ್ರೀ ಎಂದು ಹೇಳಿದರು.
ಮಕ್ಕಳಲ್ಲಿ ನೈತಿಕತೆ ಬೆಳೆಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರಾಥಮಿಕ ಶಿಕ್ಷಕರ ಕೊಡುಗೆ ಆಪಾರಯವಾಗಿದೆ. ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು, ಅದನ್ನು ಆತ್ಮತೃಪ್ತಿಗಾಗಿ ಮಾಡಬೇಕೆಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಕುಂ.ವೀರಭದ್ರಪ್ಪ ಅವರು ಸಾಮಾಜಿಕ ನ್ಯಾಯದ ಪರವಾಗಿ ಬರೆಯುವ ಲೇಖಕರು. ಅವರು ಬರೆದಿರುವ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಅವರ ಸಾಹಿತ್ಯ ಉತ್ಕøಷ್ಟವಾಗಿದ್ದು, ಜ್ಞಾನಪೀಠ ಪ್ರಶಸ್ತಿಗೆ ಅರ್ಹವಾಗಿದೆ. ಕುಂ.ವೀರಭದ್ರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕುಂವಿ ಅವರ ಕಿಲುಬು ಕಾದಂಬರಿ ರಾಜಕಾರಣಿಗಳು ಓದಲೇ ಬೇಕಾದ ಪುಸ್ತಕವಾಗಿದೆ. ಪಂಚಾಯತ್ ಸದಸ್ಯನಿಂದ ಮುಖ್ಯಮಂತ್ರಿವರೆಗೂ ಎಲ್ಲರೂ ಇದನ್ನು ಓದಲೇಬೇಕು. ರಾಜಕೀಯದಲ್ಲಿರುವ ಅನೈರ್ಮಲ್ಯಗಳು ಸ್ವಚ್ಛವಾಗಬೇಕು ಎಂದು ಹೇಳಿದರು.

ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ರಾಜಕೀಯ ಪರಿಸ್ಥಿತಿಯ ವಿಡಂಬನಾತ್ಮಕ ಪ್ರಯತ್ನವೇ ಕಿಲುಬು ಕಾದಂಬರಿ. ಸಮಾಜದ ಎಲ್ಲಾ ಹಂತದಲ್ಲೂ ಸೇರಿಕೊಂಡಿರುವ ಕಿಲುಬನ್ನು ಅತ್ಯಂತ ಪರಿಣಾಮಕಾರಿಯಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಕುಂ.ವೀರಭದ್ರಪ್ಪ ಅವರು ಮಾಡಿದ್ದಾರೆ. ಕಥೆ, ಬಂಡಾಯ, ಸಾಹಿತ್ಯ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಬರೆದಿರುವ ಅವರು, ತಮ್ಮ 21ನೇ ಕಾದಂಬರಿ ಕಿಲುಬುವಿನಲ್ಲಿ ಪ್ರಸ್ತುತ ಸವಾಲಿನ ವಿಶ್ಲೇಷನಾತ್ಮಕ ಮತ್ತು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ನಡೆಸುವ ರಾಜತಾಂತ್ರಿಕತೆಯನ್ನು ಪುಸ್ತಕ ಒಳಗೊಂಡಿದೆ. ಹಾಗೆ ಅನಿರೀಕ್ಷಿತವಾಗಿ ಮುಕ್ತಾಯಗೊಳ್ಳುತ್ತದೆ ಎಂದರು.
ಸಾಹಿತಿ ದೊಡ್ಡರಂಗೇಗೌಡ, ಸಪ್ನ ಬುಕ್‍ಹೌಸ್‍ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ