ಕೆಲಸ ಮಾಡಿ, ಇಲ್ಲ ಹುದ್ದೆ ಬಿಡಿ: ಕೆಪಿಸಿಸಿ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು, ಸೆ.23- ಕೆಲಸ ಮಾಡಿ, ಇಲ್ಲ ಹುದ್ದೆ ಬಿಡಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಯಾರು ಕೆಲಸ ಮಾಡುತ್ತಿಲ್ಲವೋ ಅವರ ಮಾಹಿತಿ ಪಡೆದು ಅವರನ್ನು ಹುದ್ದೆಯಿಂದ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಬೂತ್‍ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ಹಿನ್ನೆಲೆಯಲ್ಲಿ ಬೂತ್‍ಗಳಿಗೆ ಸಮರ್ಥರ ನೇಮಕ, ಗುರುತಿನ ಪತ್ರ ವಿತರಣೆ ಮಾಡಲಾಗುವುದು. ನಿಷ್ಕ್ರಿಯವಾಗಿರುವ ಬ್ಲಾಕ್ ಮತ್ತು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂದರು.

ಶಕ್ತಿ ಎಂಬ ವಿನೂತನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಇದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ರೀತಿ ರಿವಾಜುಗಳಿವೆ. ಅದರಂತೆ ಎಲ್ಲರೂ ನಡೆಯಬೇಕು. ಅದನ್ನು ಬಿಟ್ಟು ನಡೆದರೆ ಸಹಿಸುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾಥನ್, ಮಧು ಯಕ್ಷಿಗೌಡ, ಮಾಣಿಕ್ಯಂ ಠಾಕೂರ್, ಡಾ.ಸಾಕೆಶೈಲಜನಾಥ್, ಯಶೋಮತಿ ಠಾಕೂರ್ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ