ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ನೂತನ ಕಟ್ಟಡಗಳ ಶಂಕುಸ್ಥಾಪನೆ

ಬೆಂಗಳೂರು, ಸೆ.18-ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನಾಳೆ (ಸೆ.19) ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಚಾಮರಾಜಪೇಟೆಯ ಆವರಣದಲ್ಲಿ ಹಮ್ಮಿಕೊಂಡಿದೆ.
ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಟ್ಟಡಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ.ಮೋಹನ್, ವಕ್ಫ್ ಸಚಿವ ಬಿ.ಝಡ್.ï ಜಮೀರ್ ಅಹಮದ್ ಖಾನ್ ಆಗಮಿಸಲಿದ್ದು, ಕರ್ನಾಟಕ ಸಂಸ್ಕøತ ವಿವಿ ಕುಲಪತಿ ಪೆÇ್ರ.ಪದ್ಮಾಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಚಟುವಟಿಕೆಗಳು:
ಸಂಸ್ಕøತದ ಪ್ರಭಾವ ಕನ್ನಡದ ಮೇಲೆ ಅಪಾರವಾಗಿದೆ. ಕನ್ನಡವು ಸಂಸ್ಕøತಕ್ಕೆ ನಾನಾ ಸ್ತರಗಳಲ್ಲಿ, ನಾನಾ ಮುಖಗಳಲ್ಲಿ ಅಮಿತವಾಗಿ ಋಣಿಯಾಗಿದೆ. ಸಂಸ್ಕøತಿ,ಭಾಷೆ, ಸಾಹಿತ್ಯ ಈ ಮೂರೂ ನಿಟ್ಟಿನಲ್ಲಿ ಸಂಸ್ಕøತ ಕನ್ನಡವನ್ನು ಪ್ರಭಾವಿಸಿದೆ.
ಸಂಸ್ಕøತದ ಅಭಿವ್ಯಕ್ತಿಗಿರುವ ಸಾಧ್ಯತೆ ಮತ್ತು ಮಹತ್ವವನ್ನು ಗಮನಿಸಿದ ಕರ್ನಾಟಕ ಸರ್ಕಾರ 2010ರಲ್ಲಿ ಕರ್ನಾಟಕ ಸಂಸ್ಕøತ ವಿವಿಯನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿತು. ಅಂದಿನಿಂದಲೂ ವಿವಿಯು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮುಖ್ಯವಾಗಿ ಸಂಸ್ಕøತ ಭಾಷೆಯ ಬೆಳವಣಿಗೆ, ಪ್ರಚಾರ, ಪ್ರಸಾರ, ಅಭಿವೃದ್ಧಿ, ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದೆ.
ಆಯ್ದ ಕೃತಿಗಳ ಪ್ರಕಟಣೆ, ಅನುವಾದ, ಅನ್ಯಭಾಷಾ ಸಾಹಿತ್ಯದೊಡನೆ ಇರಬಹುದಾದ ಭಾಷಿಕ-ಸಾಹಿತ್ಯಿಕ ಸಂಬಂಧಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ; ಪ್ರಮುಖ ಕೃತಿಗಳನ್ನು, ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ