ಕೂಲಿ ಮಾಡಿ ಬದುಕಲು ಬಿಡದೆ ಗೂಂಡಾ ಪಟ್ಟ

Varta Mitra News

ಬೆಂಗಳೂರು,ಸೆ.17- ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾ ಪೆÇಲೀಸರಿಗೆ ದೂರು ನೀಡಲು ಮುಂದಾಗಿರುವ ಕ್ರಮವನ್ನು ಕೂಡಲೇ ನಿಲ್ಲಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೂಲಿ ಕಾರ್ಮಿಕ ಆರ್.ರವಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ದ ಯಾವುದೇ ಕೇಸುಗಳು ಇಲ್ಲದಿದ್ದರೂ ರೌಡಿಶೀಟರ್, ಗೂಂಡಾ ಎಂದೆಲ್ಲ ಅವಮಾನಗೊಳಿಸಿ ನಿವೇಶನವೊಂದರ ಸ್ವಚ್ಛತೆ ವಿಚಾರದಲ್ಲಿ ಜಗಳ ತೆಗೆದ ರಾಧಾಕೃಷ್ಣ ಮತ್ತು ಪ್ರಭಾವತಿ ಅವರು ಇದೇ ವರ್ತನೆಯನ್ನು ಮುಂದುವರೆಸಿದರೆ ಮಾನ ನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ 6ನೇ ತಾರೀಖಿನಂದು ಕೆ.ಆರ್.ಪುರಂನ ಸೀಗೇಹಳ್ಳಿ ಮಲ್ಲಪ್ಪ ಲೇಔಟ್‍ನಲ್ಲಿನ ನಿವೇಶನವೊಂದರ ಮಾಲೀಕರಾದ ರಜನಿ ಎಂಬುವರು ಅಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಕೂಲಿ ಕಾರ್ಮಿಕರಾದ ತಮಗೆ ಹೇಳಿದ್ದರಿಂದ ಅಂದು ಜೆಸಿಬಿ ಸಹಾಯದೊಂದಿಗೆ ಸ್ವಚ್ಛತಾಗೊಳಿಸುತ್ತಿದ್ದಾಗ ಸ್ಥಳಕ್ಕೆ ಬಂದ ರಾಧಾಕೃಷ್ಣ ಮತ್ತು ಪ್ರಭಾವತಿ ತಕರಾರರು ತೆಗೆದು ಜಗಳ ಮಾಡಿ ಹಲ್ಲೆಗೆ ಮುಂದಾಗಿದ್ದರು. ನಂತರ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಾ ಪೆÇಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ವಿವರಿಸಿದರು.
ಆ ನಿವೇಶನಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ನಮ್ಮ ವಿರುದ್ಧ ವೃಥಾ ಆರೋಪ ಮಾಡುತ್ತಿರುವುದದಲ್ಲದೆ ನಮ್ಮ ಕೆಲಸಕ್ಕೂ ಅಡ್ಡಿಪಡಿಸಿದ್ದಾರೆ.ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಪಮಾನ ಮಾಡುವುದನ್ನು ನಿಲ್ಲಿಸದಿದ್ದರೆ ತಾವು ಗಂಭೀರ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ