ಛಬ್ಬಿಯ ಕೆಂಪು ಗಣಪತಿಗೆ ಇಂದು ವಿದಾಯ

ಹುಬ್ಬಳ್ಳಿ- ಬೇಡಿದವರಿಗೆ ಬೇಡಿದ್ದನ್ನು ವರ ನೀಡುವ ಗಣೇಶ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣಪನಿಗೆ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಭಕ್ತರ ಇಷ್ಟಾರ್ಥ ಪೂರೈಸುವ ವಿಘ್ನೇಶ ಎಂದೇ ಖ್ಯಾತಿ ಪಡೆದಿರುವ ಛಬ್ಬಿ ಗಣೇಶ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದು ಹೆಸರುವಾಸಿಯಾಗಿದ್ದಾನೆ.
ಛಬ್ಬಿಯ ಕೆಂಪು ಗಣಪತಿ ಎಂದೇ ಪ್ರಸಿದ್ಧ ಪಡೆದಿರುವ ಗಣಪತಿಗೆ ತನ್ನದೇ ಇತಿಹಾಸ ಮಹತ್ವ ಪಡೆದಿದ್ದಾನೆ. ಗ್ರಾಮದ ಕುಲಕರ್ಣಿ ಮನೆತನದವರ ಮನೆಯಲ್ಲಿ ಗಣಪತಿ ಪ್ರತಿಷ್ಠಾನೆ ಮಾಡುತ್ತಾರೆ. ಇಲ್ಲಿ ಮೊದಲು ಗ್ರಾಮದ ಮೂರೇ ಕುಲಕರ್ಣಿ ಮನೆತನದಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದ್ರೆ ಈಗ ಅದು 9 ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 9 ಗಣಪತಿಗಳು ಕೆಂಪು ಬಣ್ಣದ್ದಾಗಿರುವದು ವಿಶೇಷ. ಕಳೆದ 2 ದಶಕಗಳಿಂದ ಛಬ್ಬಿ ಗಣೇಶನ ಪ್ರಸಿದ್ದಿ ಹೆಚ್ಚಿದೆ. ಕುಲಕರ್ಣಿ ಮನೆತನ ಈ ಗಣೇಶನನ್ನು ತಲಾತಲಾಂತದಿಂದ ಮೂರು ದಿನಗಳ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗಣೇಶ ಹಬ್ಬ ಇಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದೆ. ಕುಲಕರ್ಣಿ ಮನೆತನದ ನಾಲ್ಕು ಮನೆತನದಲ್ಲಿ ಕೇವಲ 3 ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಈಗ ಮನೆತನಗಳು ಹೆಚ್ಚಾಗುತ್ತಿದಂತೆ 9 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಆದ್ರೆ ಎಲ್ಲಾ ಗಣೇಶನ ಬಣ್ಣ ಹಾಗೂ ಆಕಾರ ಒಂದೆಯಾಗಿದೆ. ಈ ಗ್ರಾಮಕ್ಕೆ ಗಣೇಶನ ದರ್ಶನಕ್ಕೆ ಬರುವ ಎಲ್ಲಾ ಭಕ್ತರು ಎಲ್ಲಾ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳ ದರ್ಶನ ಪಡೆದುಕೊಂಡು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ.
ಗ್ರಾಮದ ಮೂರು ದಿನಗಳ ಕಾಲ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಆಗಮಿಸಿ ಗಣಪತಿ ದರ್ಶನ ಪಡೆಯುತ್ತಾರೆ. ಕರ್ನಾಟಕ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹಲವು ಕಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮೂರು ದಿನಗಳ ಕಾಲ ಇಲ್ಲಿ ಗಣಪತಿ ಮಹೋತ್ಸವವೇ ನಡೆಯುತ್ತದೆ. ಇದೊಂದು ಗಜಾನನ ಪುಣ್ಯಕ್ಷೇತ್ರ ಎಂಬ ಖ್ಯಾತಿ ಪಡೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗಣಪತಿಯಷ್ಟೇ ಖ್ಯಾತಿಯನ್ನು ಪಡೆದಿದೆ.
ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಗಾದವರಿಗೆ ಸಂತಾನ ಭಾಗ್ಯ, ಬೇಡಿದವರಿಗೆ ಬೇಡಿದ ವರ ನೀಡುವ ಛಬ್ಬಿ ಗಣೇಶ ತನ್ನದೇ ಆದ ವಿಶಿಷ್ಠತೆಯಿಂದ ಭಕ್ತರ ಮನದಲ್ಲಿ ನೆಲೆಸಿದ್ದಾನೆ. ಪ್ರತಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎಲ್ಲಾ ಕಡೆ ಐದು, ಒಂಬತ್ತು ದಿನಗಳಿಗೆ ಗಣಪತಿ ವಿಸರ್ಜನೆ ಮಾಡಿದರೆ ಇಲ್ಲಿ ಮಾತ್ರ ಮೂರೇ ದಿನದಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆಯಲ್ಲಿಯೂ ಲಕ್ಷಾಂತರ ಜನರು ಗಣೇಶನ ದರ್ಶನ ಪಡೆದು ಪುನೀತರಾಗುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ