ನಿಮ್ಮ ಆಹಾರದಲ್ಲಿ ದಾಲ್ಚಿನ್ನಿ ಅಥವ ಚಕ್ಕೆ ಕೊಡುವ ಮಹತ್ವಗಳು

ದಾಲ್ಚಿನ್ನಿ ಮರ- ಇದು ಸುಮಾರು 30 ಅಡಿಗಳ ಎತ್ತರ ಬೆಳೆಯುವ ಮರವಾಗಿದ್ದು, ಚೀನಾದೇಶ, ಶ್ರೀಲಂಖ ಹಾಗು ನಮ್ಮ ದೇಶದ ಬಿಹಾರ್, ಒರಿಸ್ಸ ಭಾಗ ಹಾಗು ಕರ್ನಾಟಕಲ್ಲಿ ಬೆಳದಿದೆ. ಇದರ ತೂಗಡೆ ಕಂದು ಮಿಶ್ರಿತ ಬಣ್ಣವಾಗಿದ್ದು, ಇದರ ರುಚಿ ಕಹಿ ಹಾಗು ಒಗರಾಗಿರುತ್ತದೆ. ಭಾರತ ದೇಶದಲ್ಲಿ ಬಹುತೇಕ ಖಾರ ತಿನಿಸು ಹಾಗು ಸಾಂಬಾರ್ ಪದಾರ್ಥಗಳಲ್ಲಿ ಸೇರಿಸುವ ಚಕ್ಕೆ, ಆ ಪದಾರ್ಥಗಳ ರುಚಿ ಹಾಗು ಸುವಾಸನೆ ಹೆಚ್ಚಿಸವ ಸಲುವಾಗಿ ಇದನ್ನು ಬಳಸುತ್ತಾರೆ.

ಚೆಕ್ಕೆ ಅಪಾರವಾದ ಭಕ್ಷಣೀಯ ಗುಣಗಳನ್ನೂಂದಿದ್ದು, ಇದನ್ನು ಆಹಾರದೂಡನೆ ಸೇವಿಸಿದಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ. ಇದರ ಬಳಕೆಯಿಂದ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ಇದನ್ನು ಹೇಗೆ ಯಾವಯಾವ ಕಾಯಿಲೆಗಳಿಗೆ ಬಳಸಬಹುದೆಂಬ ವಿವರ ಈ ಕೆಳಗಿನಂತಿದೆ.

  • ಚಕ್ಕೆಯ ಎಣ್ಣೆಯನ್ನು, ಅರ್ಧತಲೆನೋವಿನಿಂದ ಬಳಲುತ್ತಿರುವವರು ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ.
  • 500 ಎಮ್.ಜಿ ಚಕ್ಕೆಪುಡಿಯೊಂದಿಗೆ, 1 ಚಮಚ ಜೇನುತುಪ್ಪ ಬೆರಸಿ, ಪ್ರತಿ ದಿನ ಖಾಲಿ ಹೂಟ್ಟೆಯಲ್ಲಿ ಸೇವಿಸಿದಲ್ಲಿ, ಉಬ್ಬಸರೋಗವನ್ನು ಕಡಿಮೆಮಾಡಬಹುದು.
  • 1 ಗ್ರಾಮ್ ಚಕ್ಕೆಪುಡಿಯೊಂದಿಗೆ, 1 ಗ್ರಾಮ್ ಕಾಳುಮೆಣಸಿನ ಪುಡಿ, ಅರ್ಧಚಮಚ ಶುಂಠಿ ರಸವನ್ನು ಸೇರಿಸಿ, ಪ್ರತಿ ನಿತ್ಯ ಖಾಲಿ ಹೂಟ್ಟೆಯಲ್ಲಿ ಸೇವಿಸಿದಲ್ಲಿ. ಕಫ ಕಡಿಮೆಯಾಗುತ್ತದೆ ಹಾಗು ಕ್ಷಯ ರೋಗ ತಡೆಗಟ್ಟಲು ಸಹಕಾರಿಯಾಗುತ್ತದೆ.
  • 1/4 ಚಮಚ ಚಕ್ಕೆ ಪುಡಿಯನ್ನು, 1 ಲೀ ನೀರಿನಲ್ಲಿ ಹಾಕಿ, ಅದನ್ನು 1/2 ಲೀ ಆಗುವವರೆಗು ಕುದಿಸಿ, ಪ್ರತಿ ನಿತ್ಯ ಕಾಲಿ ಹೂಟ್ಟೆಯಲ್ಲಿ ಸೇವಿಸುವುದರಿಂದ, ಋತುಚಕ್ರವಾದಾಗ ಕಾಣಿಸಿಕೂಳ್ಳುವ ಹೆಚ್ಚು ಊಟ್ಟೆ ನೋವು ಅಥವ ಡಿಸ್‍ಮೆನೋರಿಯ ನಿವಾರಣೆಯಾಗಲು ಸಹಕಾರಿಯಾಗುತ್ತದೆ.
  • ಮೂತ್ರಕೂಶದ ಸೊಂಕನ್ನು ತಡೆಗಟ್ಟಲು, 1 ಚಮಚ ಚಕ್ಕೆ ಪುಡಿಯನ್ನು, 1 ಲೀ ನೀರಿನಲ್ಲಿ ಬೆರಸಿ, ಆಗಿಂದಾಗ ಕುಡಿಯುತ್ತಾ ಬಂದಲ್ಲಿ, ಸೂಂಕು ಕಡಿಮೆಯಾಗುತ್ತದೆ.
  • ಸೇವಿಸುವ ಕಾಫಿ, ಚಹದ ಜೋತೆ, 1 ಚಿಟಕಿ ಚಕ್ಕೆ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.
  • 1 ಚಿಟಕಿ ಚೆಕ್ಕೆಯ ಪುಡಿಯನ್ನು, ಜೇನುತುಪ್ಪದೂಂದಿಗೆ ಮಿಶ್ರಣಮಾಡಿ ಮೂಡವೆಗಳ ಮೇಲೆ ಲೇಪಿಸುವುದರಿಂದ, ಮೂಡವೆಗಳು ನಿವಾರಣೆಯಾಗುತ್ತದೆ.
  • 1 ಲೀ ನೀರಿಗೆ, 1/4 ಚಮಚ ಚಕ್ಕೆ ಪುಡಿಯನ್ನು ಹಾಕಿ, ಬೆಳಗೆ ಖಾಲಿ ಹೂಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕ ಕಡಿಮೆಗೂಳಿಸಬಹುದು.
  • ತಲೆಕೂದಲಿನಲ್ಲಿ ಹೇನಿನ ಕಾಟವಿದ್ದಲ್ಲಿ, 1/2 ಚಮಚ ಚಕ್ಕೆ, 1/2 ಚಮಚ ನಿಂಬ್ಬೆ ಹಣ್ಣಿನ ಸಿಪ್ಪೆಯ ಪುಡಿ, 1/2 ಚಮಚ ಬೇವಿನೆಲೆಯ ಪುಡಿಯೊಂದಿಗೆ ಮೊಸರನ್ನು ಸೇರಿಸಿ, ವಾರದಲ್ಲಿ 2-3 ಭಾರಿ ತಲೆಗೆ ಹಚ್ಚುತ್ತಾ ಬಂದಲ್ಲಿ, 1 ತಿಂಗಳ ಅವಧಿಯಲ್ಲಿ ಹೇನುಗಳು ನಿರ್ಮೊಲವಾಗುತ್ತದೆ.

 

– ಡಾ.ಸಿಂಧು ಪ್ರಶಾಂತ್
ದೂರವಾಣಿ-9743857575
www.yogaforpregnant.com

ಲೇಖಕರ ಬಗ್ಗೆ

ಡಾ. ಸಿಂಧು ಪ್ರಶಾಂತ್ ರವರು ತಮ್ಮ ಆಯುರ್ವೇದ ಪದವಿಯನ್ನು ಹೊಂದಿದ್ದು ಜೊತೆಗೆ ಎಮ್.ಡಿ (ಆಲ್ಟರ್ನೇಟಿವ್ ಮೆಡಿಸನ್) ಮತ್ತು ಎಮ್.ಎಸ್ಸಿ(ಯೋಗ) ಪದವಿಯನ್ನು ಪಡೆದಿದ್ದಾರೆ.

ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ.ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ