ಗಾಂಜಾ ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆ ಬಂಧನ

ಬೆಂಗಳೂರು,ಸೆ.14-ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 40 ಸಾವಿರ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕೆವಿನ್(30) ಬಂಧಿತ ಕಾಂಗೋ ಪ್ರಜೆಯಾಗಿದ್ದು, ಈತನಿಂದ ಒಂದು ಕೆಜಿ ತೂಕದ ಗಾಂಜಾ, ಮೊಬೈಲ್, 500 ರೂ. ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಣ್ಣೂರು ವ್ಯಾಪ್ತಿಯ ಚಿನ್ನಪ್ಪ ಲೇಔಟ್‍ನ 1ನೇ ಸಿ ಕ್ರಾಸ್ ರಸ್ತೆಯಲ್ಲಿ ಕಾಂಗೊ ದೇಶದ ವ್ಯಕ್ತಿಯೊಬ್ಬ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಸಿಬಿ ಪೆÇಲೀಸರಿಗೆ ಲಭಿಸಿದೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪೆÇಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಈತ ಕಾಂಗೊ ದೇಶದಿಂದ ಭಾರತಕ್ಕೆ ಬಂದು ಹೆಣ್ಣೂರಿನಲ್ಲಿ ವಾಸ್ತವ್ಯ ಹೂಡಿ ತನ್ನದೇ ವ್ಯವಸ್ಥಿತ ರೀತಿಯಲ್ಲಿ ಜಾಲವನ್ನು ಸಂಘಟಿಸಿಕೊಂಡು ಪರಿಚಿತರಿಂದ ಗಾಂಜಾವನ್ನು ಖರೀದಿ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮ ಸಂಪಾದನೆ ಮಾಡುತ್ತಿದ್ದ ಅಂಶ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿ ವಿರುದ್ದ ಹೆಣ್ಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ