ಫೇಸ್ ಬುಕ್ ಮೂಲಕ ಕಿರುಕುಳ; ನಟ ದರ್ಶನ್ ಪತ್ನಿ ಪೊಲೀಸರಿಗೆ ದೂರು

ಬೆಂಗಳೂರು: ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿ ತಮ್ಮ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.ವಿಜಯಲಕ್ಷ್ಮಿ ಅವರ ಮತ್ತು ಅವರ ಕುಟುಂಬದವರ ಚಿತ್ರ ಬಳಸಿ ಫೇಸ್ ಬುಕ್ ನಲ್ಲಿ ಕೀಳುಮಟ್ಟದ ಪದ ಬಳಕೆ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ದರ್ಶನ್ ಜೊತೆ ವಿಜಯಲಕ್ಷ್ಮಿ ಇರುವ ಚಿತ್ರವನ್ನು ಬಳಸಿಕೊಂಡು ದರ್ಶನ್ ಜಾಗದಲ್ಲಿ ತನ್ನ ಚಿತ್ರ ಸೇರಿಸಿ ಆರೋಪಿ ಆಕೆ ನನ್ನ ಪತ್ನಿ, ಮೈ ವೈಫ್ ಎಂದು ಬರೆದುಕೊಂಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.ಘಟನೆ ಸಂಬಂಧ ವಿಜಯಲಕ್ಷ್ಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 354(ಡಿ), 354ಎ(1)(4), (505), (507),(402) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ