ಕೆಸಿಸಿಯಿಂದ ದೂರ ಉಳಿದ ದರ್ಶನ್, ಕಿಚ್ಚ ಸುದೀಪ್ ಕೋಪಗೊಂಡಿದ್ದೇಕೆ!

ಬೆಂಗಳೂರು: ಕಳೆದ ವರ್ಷದ ಆರಂಭಗೊಂಡಿದ್ದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್(ಕೆಸಿಸಿ)ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲೀಗ್ ಆಯೋಚನೆಗೊಳ್ಳುತ್ತಿದೆ.
ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆದ ಕೆಸಿಸಿ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು ಕೆಸಿಸಿಗೆ ಕಳೆದ ವರ್ಷ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡನೇ ಬಾರಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಇದೇ ವೇಳೆ, ಟೂರ್ನಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆಸಿಸಿಯಿಂದ ದೂರ ಉಳಿದಿರುವುದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ನಾವು ಯಾರು ಬರಬಾರದು ಅಂತ ಗೇಟ್ ಹಾಕಿಲ್ಲ. ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು. ನಾವು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ ಎಂದು ಹೇಳಿದರು.
ಇನ್ನು ಟೂರ್ನಿಗೆ ಕಷ್ಟಪಟ್ಟು 6 ಅಂತಾರಾಷ್ಟ್ರೀಯ ಆಟಗಾರರನ್ನು ಕರೆತರಲಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಸಾಕ್ಷಿಯಾಗಿದ್ದು ಇಂತಹ ಒಂದು ಯೋಜನೆ ನನ್ನಿಂದ ಆರಂಭವಾದರೂ ಚಿತ್ರರಂಗದವರು ಇದನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ಇಂದು ಕೆಸಿಸಿ ದೊಡ್ಡದಾಗಿ ಬೆಳೆದಿದ್ದು ದೊಡ್ಡ ದೊಡ್ಡ ಪ್ರಯೋಜಕರು ನಮ್ಮೊಂದಿಗಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಕೆಸಿಸಿ ಎರಡನೇ ಆವೃತ್ತಿಯಿಂದ ಬರುವ ಲಾಭವನ್ನು ಕೊಡಗು ಸಂತ್ರಸ್ತರಿಗೆ ನೀಡಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ