ಗೋಮಾಳ ಅತಿಕ್ರಮದಲ್ಲಿ ಕಲಘಟಗಿ ತಹಶಿಲ್ದಾರ, ಪಿಡಿಓ, ತಲಾಟಿ ಕೈವಾಡ: ಎಸ್.ಶಂಕರಣ್ಣ ಆರೋಪ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಗ್ರಾಮೀಣ ಜನರ ಹಾಗೂ ರೈತ ಸಮುದಾಯದ ಉಪಯೋಗಕ್ಕಾಗಿ ಗೋಮಾಳ ಜಾಗೆಯನ್ನು ಮೀಸಲಿಟ್ಟಿರುತ್ತಾರೆ ಆದರೇ ಕಲಘಟಗಿಯ ಸ್ಥಳೀಯ ಕೆಲವು ಜನರು ತಹಶಿಲ್ದಾರ ಜೆ.ಬಿ‌.ಚಿಕ್ಕನಗೌಡರ ಸಹಕಾರದಿಂದ ಅತಿಕ್ರಮ ಮಾಡಿದ್ದಾರೆಂದು ಉತ್ತರ ಕರ್ನಾಟಕ ಜನಶಕ್ತಿ ಸೇವಾ ಸಂಘಟನೆ ರಾಜ್ಯಾಧ್ಯಕ್ಷ ಎಸ್.ಶಂಕರಣ್ಣ ಆರೋಪಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ರೈತ ಸಮುದಾಯದವರು ಜಾನುವಾರಗಳ ಪಾಲನೇ ಪೋಷಣೆ ಕಷ್ಟಕರವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನುವಾರಗಳ ಸಾಕುವ ಹಿತದೃಷ್ಟಿಯಿಂದ ಗೋಮಾಳ ಜಾಗೆಯನ್ನು ಮೀಸಲಿಡಲಾಗಿದೆ ಆದರೇ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಮತ್ತು ಬೀರವಳ್ಳಿ ಸೇರಿದಂತೆ ಸುಮಾರು ಗ್ರಾಮಗಳಲ್ಲಿ ನೂರಾರು ಏಕರೆ ಅತಿಕ್ರಮ ನಡೆದಿದೆ. ಅತಿಕ್ರಮದಲ್ಲಿ ಕಲಘಟಗಿ ತಹಶಿಲ್ದಾರ ಜಕ್ಕನಗೌಡ್ರ ಕೈವಾಡವಿದೆ ಎಂದರು.
ಗೋಮಾಳ ಜಾಗೆಗೆ ಬೇಲಿ ಹಾಕಿಕೊಂಡು ಸಾಗುವಳಿ ಹಾಗೂ ಇನ್ನಿತರ ವಾಣಿಜ್ಯ ಕೆಲಸಕ್ಕೆ ಬಳಸುತ್ತಿದ್ದಾರೆ. ರೈತರು ಗೋಮಾಳ ಜಾಗೆಗೆ ಕಾಲಿಟ್ಟರೇ ಜೀವ ಬೆದರಿಕೆ ಹಾಕಿ ಅವರನ್ನು ಹೊರದುಡಿರುವ ಕಾರ್ಯ ಜವಾಬ್ದಾರಿಯುತ ತಹಶಿಲ್ದಾರರ ಮೂಲಕ ನಡೆದಿರುವುದು ಅಮಾನವೀಯವಾಗಿದೆ ಎಂದರು.
ಅಷ್ಟೇಅಲ್ಲದೇ ಪಿ.ಡಿ.ಓ ಶಿವಾನಂದ ಹಾಗೂ ತಲಾಟಿ ಮೋಹನ ಇವರ ಕೈವಾಡ ಇದೆ ಅತಿಕ್ರಮಮಾಡಿರುವ ಗೋಮಾಳ ಜಾಗೆಯನ್ನು ಸರಾಯಿ ಮಾರಾಟಕ್ಕೆ ಬಳಸುವ ಮೂಲಕ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದರು.
ಯಲ್ಲಪ್ಪ ತಿಪ್ಪಣ್ಣ, ಶಿವಪ್ಪ, ಸುರೇಶ ಬ, ಬಸಪ್ಪ ಬ, ಶಿವಪ್ಪ ಪಿ.ಎಲ್., ಗೋವಿಂದ ಎಚ್.ಎಲ್., ಸಿಕು ಪಿ.ಎಲ್., ಸುಭಾಸ ಲಂಬುಜಿ, ಪಿಮೆಳೆವ ತಿ.ಲ ಎಂಬುವರೇ ಅತಿಕ್ರಮ ಮಾಡಿಕೊಂಡಿದ್ದಾರೆಂದು ಆರೋಪಿಸಿದರು. ಈಗಾಗಲೇ ಮುಗ್ಧ 45 ಮುಗ್ಧ ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಂಜು ಚವ್ಹಾಣ, ಬಸಲಿಂಗಯ್ಯ ಹಿರೇಮಠ, ಮಂಜುನಾಥ ಮದಿಹಳ್ಳಿ, ಸಂತೋಷ ಕಮಲಕರ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ