ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯ್ತಿ ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗ

ಜೇವರ್ಗಿ,ಸೆ.3- ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯ್ತಿ ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗವಾಗಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
ಒಟ್ಟು 23ಸ್ಥಾನಗಳಲ್ಲಿ ಬಿಜೆಪಿ 13, ಕಾಂಗ್ರೆಸ್-ಜೆಡಿಎಸ್ ತಲಾ ಎರಡು ಸ್ಥಾನ ಪಡೆದಿದ್ದರೆ ಉಳಿದ ವಾರ್ಡ್‍ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಶಾಸಕ ಡಾ.ಅಜಯ್‍ಸಿಂಗ್ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದುಘಿ, ಮಾಜಿ ಶಾಸಕ ನರಿಬೋಳ ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಾ.ಅಜಯ್ ಸಿಂಗ್ ಗೆಲುವಿನ ನಗೆ ಬೀರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ