ನಿಧಿ ಶೋಧ: ಐವರ ಬಂಧನ

ಹುಬ್ಬಳ್ಳಿ:- ನಿಧಿ ಶೋಧನೆಗಾಗಿ ಮನೆಯಲ್ಲಿ ನೆಲ ಅಗೆದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರದ ತುಳಸವ್ವ ನಾಗಸಮುದ್ರ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ತುಳಸವ್ವ ಹಾಗೂ ಮಾರುತಿ ನಾಗಸಮುದ್ರ, ಉರ್ಪ ತುಕಾರಾಂ ಉಮಚಗಿ ಇವರು, ಬ್ಯಾಡಗಿ ಮೂಲದ ಸ್ವಾಮಿಯೊರ್ವನ ಮಾತಿನಂತೆ ನಿಧಿ ಶೋಧಕ್ಕೆ ಮುಂದಾಗಿದ್ದು, ಐದು ಜನರ ತಂಡ ನೆಲ ಅಗೆಯುವ ಕಾರ್ಯದಲ್ಲಿ ತೊಡಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಠಾಣೆ ಪೊಲೀಸರು, ರಾಜು ಜೋಳದ, ಮಲೇಶಪ್ಪ ಹರಿಜನ, ಶ್ರೀಕಾಂತ ಹುಟ್ಟಣ್ಣವರ, ಮದನಗೌಡ, ಯಲ್ಲಪ್ಪ ಹಳಕಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದವಾರ ಸ್ವಾಮಿಯೊರ್ವ ಮನೆಯಲ್ಲಿ 21 ಸಾವಿರ ನಗದು ಪಡದು ಪೂಜೆ ಸಲ್ಲಿಸಿದ್ದ. ಸ್ವಾಮಿ ಮಾತಿನಂತೆ ನಿಧಿ ಶೋಧ ಮಾಡ್ತಾಯಿದ್ದವರನ್ನ ಹಾಗೂ ಶೋಧಕ್ಕೆ ಬಳಸಿದ ಸಲಕರಣೆಗಳನ್ನ ಕೂಡ ಜಪ್ತಿ ಮಾಡಲಾಗಿದೆ. ಸಧ್ಯ ಐನಾತಿ ಐಡಿಯಾ ಕೊಟ್ಟ ಸ್ವಾಮೀಜಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ