ಪರಿಶಿಷ್ಟ ವರ್ಗಗಳ ವಾಣಿಜ್ಯೋದ್ಯಮಿಗಳಿಗೆ ಮಾರ್ಗದರ್ಶನ

ವಸಂತನಗರ, ಬೆಂಗಳೂರು; ಆಗಸ್ಟ್ 30 ರಂದು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಎಸ್ಸಿ/ಎಸ್ಟಿ ಅರಂಭಿಕ ವಾಣಿಜ್ಯೋದ್ಯಮಿಗಳ ಜಾಗೃತಿ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಪರಿಶಿಷ್ಟ ವರ್ಗಗಳಿಗೆ ಉದ್ಯಮ ಅವಕಾಶಗಳನ್ನು ವಿವಿಧ ಇಲಾಖೆಯ ಗಣ್ಯರು ಸವಿವರವಾಗಿ ತಿಳಿಸಿಕೊಟ್ಟರು. ಪರಿಶಿಷ್ಟ ವರ್ಗಗಳು ಉದ್ಯಮಿ ವಲಯದಲ್ಲಿ ಅವಕಾಶಗಳನ್ನು ಬಳಸಿಕೊಂಡು ಉತ್ಪಾದನಾ ವಲಯಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದೊಂದಿಗೆ ನರೇಂದ್ರ ಮೋದಿ ಸರ್ಕಾರ ಕಳೆದ ವರ್ಷದಿಂದ ವಿಶೇಷ ಆಂದೋಲನ ಕ್ಯೆಗೊಂಡಿದೆ.


ಇದರ ಒಂದು ಭಾಗವಾಗಿ ಎಸ್ಸಿ/ಎಸ್ಟಿ ಹಬ್ ಎಂಬ ನೂತನ ಜಾಲ ಘಟಕಗಳನ್ನು ಪ್ರತಿ ರಾಜ್ಯದಲ್ಲಿಯೂ ಸ್ಥಾಪಿಸಿ ಅಗತ್ಯ ನೆರವು ನೀಡಲು ಕ್ರಮ ಕ್ಯೆಗೊಂಡಿದೆ. ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಅಭ್ಯರ್ಥಿಗಳ ಸಂದೇಹಗಳನ್ನು ಪ್ರಶ್ನೋತ್ತರ ರೂಪದಲ್ಲಿ ಪರಿಹರಿಸಿಕೊಟ್ಟರು.

  • ಶ್ರೀ.ಪಿ.ಸಿ.ಮೋಹನ್, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ.
  • ಶ್ರೀ.ಜಗದೀಶ್ ಹೀರೆಮಣಿ, ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಸದಸ್ಯ.
  • ಶ್ರೀಮತಿ.ಪೂರ್ಣಿಮ ಪ್ರಕಾಶ್, ಎಚ್‍ಎಚ್‍ಇಸಿ, ಜವಳಿಕಾತೆ ಸಚಿವಾಲಯದ ಸ್ವತಂತ್ರ ನಿರ್ದೇಶಕರು.
  • ಶ್ರೀ.ಕೆ.ವಿ.ನಾಗೇಂದ್ರ, ಎನ್‍ಎಸ್‍ಟಿಎಪ್‍ಡಿಸಿಯ ಅಧ್ಯಕ್ಷರು.
  • ಶ್ರೀ.ಬಿ.ಎನ್.ಸುಧಾಕರ್, ನಿರ್ದೇಶಕರು, ಎಂಎಸ್‍ಎಂಇ, ಬೆಂಗಳೂರು.
  • ಶ್ರೀ.ಕೆ.ಎಸ್.ಶ್ರೀಕಾಂತ್, ಎಸ್‍ಐಡಿಬಿಐನ ಉಪ ವ್ಯವಸ್ಥಾಪಕರು.
  • ಶ್ರೀ.ಕೆ.ಎಂ.ಜಗದೀಶ್, ಜಂಟಿ ನಿರ್ದೇಶಕರು ಡಿಐಸಿ.
  • ಶ್ರೀ.ಬೋಜರಾಜ್, ಅಧ್ಯಕ್ಷರು, ಲಘು ಉದ್ಯೋಗ ಭಾರತಿ.
  • ಶ್ರೀ.ಸಿದ್ಧಲಿಂಗಪ್ಪ ಬಿ.ಪೂಜಾರ್, ಜಂಟಿ ನಿರ್ದೇಶಕರು ಡಿಐಸಿ.
  • ಶ್ರೀಮತಿ.ಕೋಕಿಲಾ, ರಾಷ್ಟ್ರೀಯ ಎಸ್ಸಿ/ಎಸ್ಟಿ ಹಬ್‍ನ ಶಾಖಾ ಮುಖ್ಯಸ್ಥರು
  • ಶ್ರೀ ಪಳನಿ ವೇಲು, ಅಧ್ಯಕ್ಷರು, ಎನ್‍ಎಸ್‍ಸಿ-ಪಿಅರ್‍ಒ-ಐಪಿಸಿ

ಸಮ್ಮೇಳನದಲ್ಲಿ ಉದ್ಯಮ ವಲಯದ ಇನ್ನಿತರ ಗಣ್ಯರು ಭಾಗವಹಿಸಿದ್ದರು,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ