ಈ ಬಾರಿ ಮೈಸೂರು ನಗರಪಾಲಿಕೆ ಅಧಿಕಾರವನ್ನು ಬಿಜೆಪಿ ಸ್ವತಂತ್ರವಾಗಿ ಹಿಡಿಯಲಿದೆ ಎಂದು ಶಾಸಕ ರಾಮದಾಸ್ ವಿಶ್ವಾಸ

ಮೈಸೂರು,ಆ.31- ಈ ಬಾರಿ ಮೈಸೂರು ನಗರಪಾಲಿಕೆ ಅಧಿಕಾರವನ್ನು ಬಿಜೆಪಿ ಸ್ವತಂತ್ರವಾಗಿ ಹಿಡಿಯಲಿದೆ ಎಂದು ಶಾಸಕ ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾರಣ್ಯಪುರಂ ವಾರ್ಡ್ ನಂಬರ್ 61ರಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಗೆಲುವಿಗಾಗಿ ಟಿ-20 ತಂಡ ರಚಿಸಿಕೊಂಡು ಬಹಳಷ್ಟು ಶ್ರಮಿಸಿದ್ದಾಏವೆ. ಮತದಾರರು ನಮ್ಮ ಪರ ಒಲವು ತೋರಿದ್ದಾರೆ. ನಮ್ಮ ಪಕ್ಷದ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಮೈಸೂರು ಪಾಲಿಕೆಯ ಗಾದಿಯನ್ನು ಯಾವ ಪಕ್ಷದ ಹಂಬಿಲ್ಲದೆ ಸ್ವತಂತ್ರವಾಗಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ವಾರ್ಡ್ ನಂಬರ್ 48ರ ಜಯನಗರದಲ್ಲಿರುವ ಬಾಲೋಧ್ಯಾನ ಶಾಲೆಯಲ್ಲಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಈ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಪಾಲಿಕೆ ಚುನಾವಣೆ ನಗರದ ಜನತೆಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಮತದಾನ ಮಾಡುವುದರಿಂದ ನಗರದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನಾನು ಮೂರು ಬಾರಿ ಕಾಪೆರ್Çೀರೇಟರ್ ಆಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿ ಇದೀಗ ಶಾಸಕನೂ ಆಗಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದು ಹೇಳಿದರು.
ಅರವಿಂದನಗರ 64ನೇ ವಾರ್ಡ್ ಬೂತ್ ನಂಬರ್ 11ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಕೆಲಕಾಲ ಚುನಾವಣೆ ಸ್ಥಗಿತವಾಗಿತ್ತು.
ವಾರ್ಡ್ ನಂಬರ್ 19ರಲ್ಲಿ ಬೂತ್‍ಗಳ ಬಗ್ಗೆ ಮಾಹಿತಿ ತಿಳಿಯದೆ ಮತದಾರರು ಪರದಾಡಿದರು. ಕ್ಷೇತ್ರ ವಿಂಗಡಣೆಯಾದ ನಂತರ ಸಾರ್ವಜನಿಕರಿಗೆ ಬೂತ್‍ಗಳ ಬಗ್ಗೆ ಅರಿವು ಮೂಡಿಸಬೇಕಿತ್ತೆಂದು ಜನ ಆಕ್ರೋಶ ವ್ಯಕ್ತಪಡಿಸಿದರು.
ಇವೆರಡು ಪ್ರಸಂಗ ಹೊರತುಪಡಿಸಿದರೆ ನಗರಪಾಲಿಕೆ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ