ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಭೂಮಿ ಹದ ಮಾಡುವ ವೇಳೆ ಮುರಿದು ಬಿದ್ದಿದ್ದ ತಾತ್ಕಾಲಿಕ ವಿದ್ಯುತ್ ಕಂಬ ಸರಿಪಡಿಸಲು ಹೋದ ಇಬ್ಬರು ಸಾವು

ಕೊಳ್ಳೇಗಾಲ, ಆ.31-ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಭೂಮಿ ಹದ ಮಾಡುವ ವೇಳೆ ಮುರಿದು ಬಿದ್ದಿದ್ದ ತಾತ್ಕಾಲಿಕ ವಿದ್ಯುತ್ ಕಂಬ ಸರಿಪಡಿಸಲು ಹೋದ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಮಾಲಂಗಿ ಗ್ರಾಮದ ರೇವಣ್ಣ ಸ್ವಾಮಿ ಅವರ ಗದ್ದೆಯಲ್ಲಿ ಭತ್ತ ನಾಟಿಗಾಗಿ ಭೂಮಿ ಹದ ಮಾಡುತ್ತಿದ್ದ ಮಹದೇವಸ್ವಾಮಿ (35), ಇವರ ಅಣ್ಣನ ಮಗ ನವೀನ್(22) ಮೃತಪಪಟ್ಟಿದ್ದು, ಮಹದೇವಸ್ವಾಮಿಯವರ ಅಣ್ಣ ಲೋಕೇಶ್ ಗಾಯಗೊಂಡಿದ್ದಾರೆ.
ಈ ಮೂವರು ಸೇರಿದಂತೆ ಇತರರು ನಿನ್ನೆ ಜಮೀನಿನಲ್ಲಿ ಭೂಮಿ ಹದ ಮಾಡುತ್ತಿದ್ದ ವೇಳೆ ಪಂಪ್‍ಸೆಟ್‍ಗೆ ನೀರು ಹಾಯಿಸಲು ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ತಾತ್ಕಾಲಿಕ ಮರದ ವಿದ್ಯುತ್ ಕಂಬ ಮುರಿದುಬಿದ್ದಿತ್ತು.
ಭತ್ತ ನಾಟಿ ನಂತರ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಆಗಲೇ ಕಂಬ ಸರಿಪಡಿಸಲು ಮುಂದಾದರು. ಈ ವೇಳೆ ಗ್ರೌಂಡಿಂಗ್‍ನಿಂದಾಗಿ ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟರು.
ಸ್ಥಳಕ್ಕೆ ಡಿವೈಎಸ್ಪಿ ಪುಟ್ಟಮಾದಯ್ಯ, ಪಿಎಸ್‍ಐ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ