ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ: ಈಶ್ವರ್ ಖಂಡ್ರೆ

ಬಾಗಲಕೋಟೆ; ನಮ್ಮವರ್‍ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥವಾಗಿ ಬಾಗಲಕೋಟೆಗೆ ಆಗಮಿಸಿದ್ದ ಅವ್ರು, ಆರ್.ಎಸ್ ಎಸ್ ಉಪನ್ಯಾಸ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹಿಂದಿನಿಂದಲೂ ಆರ್.ಎಸ್.ಎಸ್ ನಿಲುವು ಖಂಡಿಸುತ್ತ ಬಂದಿದ್ದಾರೆ, ಈ ಬಗ್ಗೆ ನಾನು ಹೆಚ್ಚು ಹೇಳಲ್ಲ ಎಂದ್ರಲ್ಲದೇ, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ೫ ವರ್ಷ ಸ್ಥಿರ ಆಡಳಿತ ನಡೆಸುತ್ತೇವೆ, ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳು ನಿವಾರಣೆಯಾಗಲಿವೆ ಎಂದರು.

ಇನ್ನು ಮಾಜಿ ಸಿದ್ಧರಾಮಯ್ಯ ವಿದೇಶ ಪ್ರವಾಸವನ್ನ ಸಮರ್ಥಿಸಿಕೊಂಡು, ಅವರೇನು ಸದಾ ವಿದೇಶ ಪ್ರವಾಸಕ್ಕೆ ಹೋಗಲ್ಲ, ಎಂಟತ್ತು ದಿನ ಹೋಗಲಿದ್ದಾರೆ ಎಂದ್ರು. ಸಾಲಮನ್ನಾ ರಾಜಕೀಯ ಪ್ರೇರಿತ ಎಂಬ ನಿವೃತ್ತ ನ್ಯಾಯಮೂರ್ತಿ ಸಂತೋಶ್ ಹೆಗಡೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ, ಅದು ಅವ್ರ ವೈಯ್ಯುಕ್ತಿಕ ವಿಚಾರ ಎಂದು ನುನುಚಿಕೊಂಡ್ರು. ಇನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟ ಭರವಸೆಗಳನ್ನ ಇಡೇರಿಸದೇ ರೈತ ವಿರೋಧಿ ಹಾಘೂ ಜನ ವಿರೋಧಿ ಸರ್ಕಾರವಾಗಿದೆ ಎಂದ್ರು. ಇನ್ನು ಸಿದ್ಧರಾಮಯ್ಯ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆಗೆ, ಅವ್ರು ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲಿದೆ, ಆ ದೃಷ್ಟಿಯಲ್ಲಿ ಸಿದ್ಧರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆಂದು ವಿವಾದಕ್ಕೆ ತೇಪೆ ಹಚ್ಚಿದ್ರು. ಇನ್ನು ಸಮನ್ವಯ ಸಮೀತಿಯಲ್ಲಿ ಯಾರು ಇರಬೇಕು, ಇರಬಾರದು ಎಂದು ಎರಡು ಪಕ್ಷಗಳ ಸಚಿವರು ಹಾಗೂ ಮುಖಂಡರು ನಿರ್ಧರಿಸುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ