ಕಾನೂನಿನ ಮೇಲೆ ಗೌರವ ಇದೆ; ಎಲ್ಲಿ‌ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ: ಶ್ರೀರಾಮುಲು

ಬಾಗಲಕೋಟೆ: ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರಕ್ಕೆ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ರಾಮುಲು, ನನಗೆ ಕಾನೂನಿನ ಮೇಲೆ ಗೌರವ ಇದೆ ಅವರು ಎಲ್ಲಿ‌ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ ಅವರು ಏನೇ ಮಾಡಿದ್ರೂ ನಾನು ರೆಡಿ ಇದ್ದೇನೆ ಎಂದರು.

ಇದೆ ವೇಳೆ ಸಾಲ ಮನ್ನಾ ಬಗ್ಗೆ ರಾಮುಲುಗೆ ಮಾತನಾಡುವ ನೈತಿಕತೆ ಇಲ್ಲ ಎಂದ ಸಿಎಂ ಹೆಚ್.ಡಿ.ಕೆ ಗೆ ತಿರುಗೇಟು ನೀಡಿದ ರಾಮುಲು, ಸಾಲ ಮನ್ನಾ ಬಗ್ಗೆ ಶ್ರೀರಾಮುಲು ಮಾತನಾಡದಿದ್ದರೆ ಬೇರೆ ಯಾರು ಮಾತಾಡ್ತಾರೆ ಅವರು ಮಾಡಿದ್ದೇ ಆಟಾನಾ?ಎಂದು ಗರಂ ಆದರು.ರೈತರಿಗೆ ಋಣಮುಕ್ತ ಮಾಡುವ ಬದಲು ಹೊಸ ಸಾಲ ಕೊಡ್ತಿಲ್ಲ ಚಾಲ್ತಿ ಅಕೌಂಟ್ ಗಳು, ಚಾಲ್ತಿಯಲ್ಲಿರದ ಅಕೌಂಟ್ ಗಳು ಎಲ್ಲವೂ ರೈತರಿಗೆ ಗೊಂದಲ ಆಗ್ತಿದೆ ಎಂದರು.

ಸಿದ್ದರಾಮಯ್ಯ ವಿದೇಶಿ ಪ್ರವಾಸಕ್ಕೆ ಕಿಡಿಕಾರಿರ ಶ್ರೀರಾಮುಲು ಸಿದ್ದರಾಮಯ್ಯ ಯಾವ ಉದ್ದೇಶ ಇಟ್ಟಗೊಂಡು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ರು ಆ ವಿಚಾರ ಮರೆತಿದ್ದಾರೆ, ಈಗ ವಿದೇಶ ಪ್ರವಾಸ ಹೊರಟಿದ್ದಾರೆ ಎಂದರು. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆ ಇಟ್ಗೊಂಡು ಸಿದ್ದರಾಮಯ್ಯ ಬಾದಾಮಿಗೆ ಬಂದ್ರೆ ವಿನಃ
ಇಲ್ಲಿನ‌ ಜನರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಇಲ್ಲಿನ ರೈತರ ಸಮಸ್ಯೆ ಬಗ್ಗೆ ಅವರಿಗೆ ಗೊತ್ತಿಲ್ಲ ಚುನಾವಣೆ ಗೆದ್ರೂ, ಹೋದ್ರು ಅಷ್ಟೇ ಎಂದರು.

ಕೊಡಗು ಸಂತ್ರಸ್ತರಿಗೆ ಪರಿಹಾರ ವಿಚಾರಕ್ಕಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರಕ್ಕೆ ಒತ್ತಾಯಿಸುತ್ತೇವೆ ಎಲ್ಲಾ ಲೋಕಸಭಾ ಸಂಸದರು ಸೇರಿ ನಿಯೋಗ ಹೋಗುತ್ತೇವೆ ಕೊಡಗಿಗೆ ರಾಜ್ಯ ಸರಕಾರ ಎಷ್ಟು ಹಣ ಕೇಳುತ್ತೋ ಅಷ್ಟು ಕೊಡಿಸ್ತೇವೆ ಎಂದರು.

ಇನ್ನು ಬಿಜೆಪಿಯಿಂದ ಯಾರೂ ಕೂಡ ಕಾಂಗ್ರೆಸ್ ಗೆ ಹೋಗಲ್ಲ ಎಂದ ರಾಮುಲು ಸುಮ್ನೆ ನಾಲ್ಕು ವರ್ಷಗಳ ಕಾಲ ಇಂತಹ ಮಾತುಗಳು ನಡೆಯುತ್ತವೆ ಎಂದರು.

ಇದೆ ವೇಳೆ ಪ್ರಧಾನಿ ಮೋದಿ ವಿರುದ್ದ ಮಾತನಾಡಿದ ಎಮ್ ಐ ಎಮ್ ಪಕ್ಷದ ಅಧ್ಯಕ್ಷ ಮೊಹ್ಮದ್ ಅಸಾದುದ್ದೀನ್ ಓವೈಸಿ ಬಗ್ಗೆ ನಿರ್ಲಕ್ಷಮಾಡಿದ ರಾಮುಲು ಹಾದಿ ಬೀದಿಯಲ್ಲಿ ಮಾತನಾಡುವವರ ಬಗ್ಗೆ ಏನು ಹೇಳಬೇಕು ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವವರು ಮೋದಿ. ಹಾದಿ ಬೀದಿಯಲ್ಲಿ ಮಾತನಾಡವರಿಗೆ ಉತ್ತರ ಯಾರು ಕೊಡಬೇಕು ಎಂದರು.

ನಗರ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರಾರ್ಥ ಗುಳೇದಗುಡ್ಡ ಪಟ್ಟಣದಲ್ಲಿ ರಾಮುಲು ಬೃಹತ್ ರೋಡ್ ಷೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ